ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ - ಕಣ್ಣೂರು[ಕೇರಳ] ವರದಿ

ಭೂಮಿಗೆ ಶಿವ ಬರಬೇಕು ಎಂದಾದರೆ ಅವನ ನಂದಿ ಬೇಕು. 'ವೃಷೋಹಿ ಭಗವಾನ್ ಧರ್ಮಃ' ಎನ್ನುವಂತೆ ನಂದಿಯೇ ಧರ್ಮ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳು ನುಡಿದರು. ಅವರು ಇಲ್ಲಿಗೆ ಸಮೀಪದ ಕನ್ನಡಿಪರಂಬ ಎಂಬ ಸ್ಥಳದಲ್ಲಿ ಸಂಪನ್ನಗೊಂಡ ಅತಿರುದ್ರ ಮಹಾಯಾಗದ ಸಭಾಕಾರ್ಯಕ್ರಮದಲ್ಲಿ ಗೋಸಂರಕ್ಷಣೋತ್ಸವಂ ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.

ಗೋವಿಲ್ಲದೇ ಕೃಷಿ ಇಲ್ಲ, ಕೃಷಿ ಇಲ್ಲದೇ ಅನ್ನ ಇಲ್ಲ. ವಿಶ್ವದ ಸರ್ವ ಶ್ರೇಷ್ಠ ಗೋ ತಳಿ ವೆಚ್ಚೂರು ಈ ಮಣ್ಣಿನ ಕೊಡುಗೆ, ಆದರೆ ಇಂದು ಈ ಭೂಮಿಯಲ್ಲಿಯೇ ಆ ತಳಿ ನಶಿಸಿ ಹೋಗಿದೆ ಎಂದು ವಿಶಾದಿಸಿದರು.ಶಂಕರಭಗವತ್ಪಾದರು ಜನ್ಮತಾಳಿದ ಈ ಪುಣ್ಯ ಭುವಿಯಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಗೋ ತಳಿಗಳು ನಲಿಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣನ್ ನಂಬಿಯಾರ್, ಶ್ರೀಧರನ್ ನಂಬೂದರಿ, ಕೆ ಎಸ ಭಟ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗೋ ಪೂಜೆ ಮತ್ತು ಗೋಪಾಲಕರಿಗೆ ಸನ್ಮಾನಗಳು ನಡೆದವು .
ಚಿತ್ರ, ವರದಿ - ಗೌತಮ್ ಬಿ ಕೆ

0 comments:

Post a Comment