ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೊಬೈಲ್, ಕಂಪ್ಯೂಟರುಗಳೇರಾಜ್ಯಭಾರ ನಡೆಸುತ್ತರುವ ಈ ಯುಗದಲ್ಲಿ ತಮ್ಮ ಮೊಬೈಲ್ ಸಂಖ್ಯೆಯೊಂದನ್ನು ಬಿಟ್ಟರೆ ಬೇರೇನೂ ತಲೆಯಲ್ಲಿ ಉಳಿದಿರುವುದಿಲ್ಲ. ಆದರೆ ಮೂಡಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ 2012ರ ಪುಸ್ತಕ ಪ್ರದರ್ಶನ ಮಳಿಗೆಯ ನೆಲಮಾಳಿಗೆಯ ಮೊದಲ ಕೊಠಡಿಯಲ್ಲಿ ತಾಯಿಯೊಂದಿಗೆ ಕುಳಿತಿರುವ ಈ ವ್ಯಕ್ತಿ ಇದಕ್ಕೆಲ್ಲಾ ಅಪವಾದವೆನ್ನುವಂತಿದ್ದಾರೆ.

ಇವರು ಹುಟ್ಟಿನಿಂದಲೇ ಅಂಧರಾದರೂ ಪ್ರತಿಭೆಗೆ, ಅಗಾಧವಾದ ನೆನಪಿನ ಶಕ್ತಿಗೆ ಅಂಧತನವಿಲ್ಲ. ಹಿಂದಿನ ನೂರು ವರ್ಷಗಳ, ಮುಂದಿನ ಒಂದು ಲಕ್ಷ ವರ್ಷಗಳ ಯಾವುದೇ ದಿನಾಂಕವನ್ನು ಹೇಳಿದರೂ ಕ್ಷಣಾರ್ಧದಲ್ಲಿ ನಿಖರವಾದ ವಾರವನ್ನು ಹೇಳಿಬಿಡುತ್ತಾರೆ. ಅವರೇ ಲೋಕೇಶ್ ಬಿ.ವಿ.
ಮೂಲತಃ ಹಾಸನದವರಾದ ಲೋಕೇಶ್ ಎಳವೆಯಿಂದಲೇ ತಾಯಿ ಪ್ರಮೀಳಾರವರ ಆಸರೆಯಲ್ಲಿ ಬೆಳೆದವರು. ಇದುವರೆಗೆ ನಡೆದ 78 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ಥಳ, ಅಧ್ಯಕ್ಷರ ಮಾಹಿತಿ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನಾಟಕ ರತ್ನ, ಪಂಪ ಪ್ರಶಸ್ತಿ ಯ ವಿವರಗಳು, ಕನ್ನಡದ ಮೊದಲುಗಳು, ಕರ್ನಾಟಕದ ವೈಶಿಷ್ಟಗಳು, ಸಾಹಿತಿ, ಗಣ್ಯರ ಆತ್ಮಕಥೆಗಳು, ಮಹತ್ವದ ಘಟನೆಗಳು, ಬಿರುದು, ಅಂಕಿತ ನಾಮ, ಕಾವ್ರಯನಾಮಗಳು, ಪಿತಾಮಹರು, ಭಾರತದ ಪ್ರಥಮಗಳು ಹೀಗೇ ಒಂದೇ ಎರಡೇ ನೂರಾರು ಮಾಹಿತಿ, ವಿವರಗಳು ಲೋಕೇಶರ ಜ್ಞಾನಭಂಡಾರದಲ್ಲಿವೆ.


ಇಷ್ಟೆಲ್ಲಾ ಪ್ರತಿಭೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದ್ದೂ ವಿನಯಶೀಲರಾಗಿರುವ ಲೋಕೇಶ್ರವರ ಪ್ರತಿಭೆಗೆ 1996ರಲ್ಲಿ ಹಾಸನದಲ್ಲಿ ನಡೆದ 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಕ.ಸಾ.ಪ. ಹಾಸನ ಜಿಲ್ಲಾ ಘಟಕದ ಗೌರವ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳ ಗೌರವ, ಪುರಸ್ಕಾರಗಳು ಸಂದಿವೆ. ಅಷ್ಟೇ ಅಲ್ಲದೇ ಹಾಸನ ಜಿಲ್ಲೆಯಾದ್ಯಂತ ಮಾನವ ಮಿನಿ ಕಂಪ್ಯೂಟರ್ ಎಂದೇ ಹೆಸರಾಗಿರುವ ಲೋಕೇಶ್ರ ಜ್ಞಾನ ಭಂಡಾರವನ್ನು ತಾಯಿ ಪ್ರಮೀಳ ಅಂಧ ಲೋಕೇಶನ ನೆನಪಿನಂಗಳದಿಂದ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ತಂದಿದ್ದು ಇದುವರೆಗೆ ತಲಾ 2000 ಪ್ರತಿಗಳ ಐದು ಮುದ್ರಣವನ್ನು ಕಂಡಿದೆ.
ಕಳೆದೆರಡು ವರ್ಷಗಳಿಂದ ಆಳ್ವಾಸ್ ನುಡಿಸಿರಿಯಲ್ಲಿ ತಾಯಿಯೊಡನೆ ಭಾಗವಹಿಸಿ ತಮಗೆ ದೊರಕುತ್ತಿರುವ ಪ್ರೀತಿ ಪ್ರೋತ್ಸಾಹವನ್ನು ನೆನೆದು ಕಣ್ತುಂಬಿಕೊಳ್ಳುತ್ತಿರುವ ಲೋಕೇಶರ ಸಾಧನೆ ನಮಗೆಲ್ಲರಿಗೂ ಮಾದರಿಯಲ್ಲವೇ?.
- ಅಪರಉಜಿರೆ

0 comments:

Post a Comment