ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:01 PM

ಬೆಳದಿಂಗಳಲ್ಲಿ...

Posted by ekanasu

ಯುವಾ...

ಒಂದು ಬೆಳದಿಂಗಳ ರಾತ್ರಿಯಲಿ
ಕನಸುಗಳ ಕಟ್ಟುತ್ತಾ
ಕಲ್ಪನಾ ಲೋಕದಲಿ ಮಿಂದಿದ್ದೆ ನಾ
ಚಂದಿರನ ನೋಡಿ ನಸುನಕ್ಕು
ನಿನಗಿಂತ ಸುಂದರ ನನ್ನ
ಕನಸುಗಳೆಂದು ಬೀಗುತ್ತಿದ್ದೆ


ನಕ್ಷತ್ರಗಳಲ್ಲಿ ಬೇಡಿಕೊಳ್ಳುತ್ತಿದ್ದೆ
ಕನಸುಗಳ ಜೊತೆ ನೀವೂ ಸೇರಿ
ನಿಮ್ಮೊಂದಿಗೇ ನನ್ನ
ಕನಸುಗಳನ್ನು ಆಗಸಕೆ ಕೊಂಡೊಯ್ದು
ಇರಿಸುವಿರಾ

ನಿಮ್ಮಂತೇ ಎಂದೂ ಮಿನುಗುವಂತೆ
ಮಾಡುವಿರಾ ಎಂದು
ಈ ಬೆಳದಿಂಗಳ ಚೆಲುವ ಸೊಗಡಿಗೆ
ನನ್ನ ಕನಸುಗಳ ಚೆಲುವೂ
ಸುಂದರವಾಗಿ ತೋರುತ್ತಿತ್ತು
ನನ್ನ ಕಲ್ಪನೆಯ ಜಗದಲಿ

ಬರಹ:ಪದ್ಮಾ ಭಟ್

0 comments:

Post a Comment