ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ ಸುದ್ದಿ: ವಿದ್ಯಾಗಿರಿ ವರದಿ
ಮೂಡಬಿದಿರೆ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿಗೆ ಸರ್ವ ಸಿದ್ಧತೆಗಳು ಪೂರ್ಣಗೊಂಡಿವೆ. ನುಡಿಸಿರಿ ಸರ್ವಾಧ್ಯಕ್ಷ ಕೆ.ಎಸ್.ನಿಸಾರ್ ಅಹಮದ್ ಹಾಗೂ ಉದ್ಘಾಟಕ ಯು.ಆರ್.ಅನಂತಮೂರ್ತಿ, ವಿಶೇಷ ಗೌರವಕ್ಕೆ ಪಾತ್ರರಾಗಲಿರುವ ಶತಾಯುಶಿ ಜಿ.ವೆಂಕಟಸುಬ್ಬಯ್ಯ ಆಗಮಿಸಿದ್ದಾರೆ.

2,300ಕ್ಕೂ ಮಿಕ್ಕಿದ ಸಾಹಿತ್ಯಾಸಕ್ತ ಪ್ರತಿನಿಧಿಗಳು ಮುನ್ನಾದಿನವೇ ನುಡಿಸಿರಿಗಾಗಿ ಆಗಮಿಸಿದ್ದಾರೆ. ಸುಮಾರು 3ಸಾವಿರ ವಿದ್ಯಾರ್ಥಿಗಳು ಆಳ್ವಾಸ್ ನುಡಿಸಿರಿ ನಡೆಯುವ ವಿದ್ಯಾಗಿರಿಯಲ್ಲಿ ಜಮಾಯಿಸಿದ್ದಾರೆ. ಈಗಾಗಲೇ ವಿದ್ಯಾಗಿರಿ ಆವರಣ ವೈಭವ ಪೂರ್ಣವಾಗಿ ಸಿಂಗರಿಸಿಕೊಂಡು ನಿಂತಿದೆ.
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮೆರವಣಿಗೆ, 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಚಿತ್ರ: ಮುರಳೀಕೃಷ್ಣ

0 comments:

Post a Comment