ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ : ಮಂಗಳೂರು ವರದಿ -ಗೋಪಾಲಕೃಷ್ಣ ಬೊಳುಂಬು
ಮಂಗಳೂರು ಹವ್ಯಕ ಸಭಾದ ವಾರ್ಷಿಕ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ವೈದಿಕ ಸನ್ಮಾನ ಕಾರ್ಯಕ್ರಮಗಳು ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಈ ಬಾರಿ ವೇ.ಮೂ. ಕೇಕಣಾಜೆ ಶಂಭಟ್ಟ ಅವರನ್ನು ಸನ್ಮಾನಿಸಲಾಯಿತು.
ಬೆಳಗ್ಗೆ ಎಂಟು ಗಂಟೆಗೆ ಪೂಜೆಯ ಸಂಕಲ್ಪ ನಡೆದು ಆರಂಭಗೊಂಡು ನಂತರ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಲಲಿತಾಸಹಸ್ರನಾಮ-ಕುಂಕುಮಾರ್ಚನೆಗಳು ನಡೆದವು. ಮಿತ್ತೂರು ಶ್ರೀನಿವಾಸ ಭಟ್ಟ ಅವರ ಪೌರೋಹಿತ್ಯದಲ್ಲಿ ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಕೆ. ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಜಯಲಕ್ಷ್ಮಿ ಶಾಸ್ತ್ರಿ ದಂಪತಿಗಳು ಪೂಜೆಯನ್ನು ನಡೆಸಿಕೊಟ್ಟರು. ಮಹಾಮಂಗಳಾರತಿಯ ನಂತರ ವೈದಿಕ ಸನ್ಮಾನ ಕಾರ್ಯಕ್ರಮವು ನಡೆಯಿತು.
ಮಿತ್ತೂರು ಶ್ರೀನಿವಾಸ ಭಟ್ಟ ಅವರ ವೇದಘೋಷದೊಂದಿಗೆ ಸಭೆಯು ಆರಂಭಗೊಂಡು ಕಾರ್ಯದರ್ಶಿ ಮಾಂಬಾಡಿ ವೇಣುಗೋಪಾಲ ಭಟ್ ಸ್ವಾಗತಿಸಿದರು. ಉಳೋಡಿ ಗೋಪಾಲಕೃಷ್ಣ ಭಟ್ ಸನ್ಮಾನಿತರನ್ನು ಪರಿಚಯಿಸಿದರು. ತೆಂಕಬೈಲು ಪೌರೋಹಿತ್ಯ ಮನೆತನದ ವೇ.ಮೂ. ಕೆ.ಎಂ.ಶಂಭಟ್ಟ ಅವರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದು ಹಿರಿಯ ಪುರೋಹಿತರಲ್ಲಿ ಒಬ್ಬರು. ತುಂಬ ಆಸಕ್ತಿಯಿಂದ ವೈದಿಕ ವೃತ್ತಿಯನ್ನು ನಡೆಸಿಕೊಂಡು ಬರುತ್ತಾ ಇದ್ದಾರೆ, ನಮ್ಮ ಸಂಸ್ಕೃತಿಯ ಬಗ್ಗೆ ವಿಶೇಷ ಒಲವನ್ನು ಹೊಂದಿದವರು ಎಂದರು. ಸನ್ಮಾನ ಪತ್ರವನ್ನು ಉಪಾಧ್ಯಕ್ಷ ಶ್ರೀಕೃಷ್ಣ ಭಟ್ ನೀರಮೂಲೆ ವಾಚಿಸಿದರು.
ಅಧ್ಯಕ್ಷರು ಇನ್ನಿತರ ಪದಾಧಿಕಾರಿಗಳೊಂದಿಗೆ, ವೇ.ಮೂ. ಕೆ.ಎಂ.ಶಂಭಟ್ಟ ಅವರನ್ನು ಸನ್ಮಾನಿಸಿದರು. ಸನ್ಮಾನಿತರು ಸನ್ಮಾನಕ್ಕೆ ಉತ್ತರಿಸುತ್ತಾ, ಆಚಾರ ವಿಚಾರಗಳನ್ನು ಇನ್ನೂ ಮುಂದುವರಿಸಿಕೊಂಡು ಬರುತ್ತಾ, ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವ ಹವ್ಯಕ ಸಭೆಯನ್ನು ಶ್ಲಾಘಿಸಿ ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಹಾಗೂ ಶುಭವನ್ನು ಹಾರೈಸಿದರು.
ಮಿತ್ತೂರು ಶ್ರೀನಿವಾಸ ಭಟ್, ಶ್ರೀಸತ್ಯನಾರಾಯಣ ಪೂಜೆಯ ಮಹತ್ವವನ್ನು ವಿವರಿಸಿ, ಮನದಲ್ಲಿ ಸಂಕಲ್ಪ ಮಾಡಿ ಪೂಜೆಯನ್ನು ಮಾಡಿದರೆ ಶ್ರೀ ಸತ್ಯನಾರಾಯಣ ದೇವರು ಯಾರನ್ನೂ ಕೈಬಿಡುವುದಿಲ್ಲ ಎಂಬುದಾಗಿ ಹೇಳಿದರು. ಅಧ್ಯಕ್ಷ ಕೆ.ಎಸ್.ಶಾಸ್ತ್ರಿಯವರು ಸನ್ಮಾನಿತರನ್ನು ಅಭಿನಂದಿಸಿ, ಹವ್ಯಕ ಸಭೆಯು ಸಮಾಜದ ಏಳಿಗೆಗಾಗಿ ದುಡಿವ ಮಹನೀಯರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಿದೆ ಎಂದರು. ಪಾರ್ವತಿ ಐ ಭಟ್ ವಂದಿಸಿದರು. ಶ್ರೀಕೃಷ್ಣ ಭಟ್ ನೀರಮೂಲೆ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಈಶ್ವರ ಭಟ್ ಕಿಳಿಂಗಾರು, ಉಪಾಧ್ಯಕ್ಷ ಎಂ.ಟಿ.ಭಟ್ ಅವರು ಉಪಸ್ಥಿತರಿದ್ದರು.0 comments:

Post a Comment