ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಸಾಹಿತ್ಯ - ಶ್ರೀ ಗೌರಿ ಶ್ರೀಪಾದ ಜೋಷಿ.
ಯಾವುದೇ ಒಂದು ದೇಶದ ಪ್ರಗತಿಯಲ್ಲಿ, ಪ್ರಖ್ಯಾತಿಯಲ್ಲಿ ಪ್ರಮುಖ ಸ್ಥಾನಗಳಿಸುವುದು ಯಾವುದು? ವ್ಯಾಪಾರ, ಕ್ರೀಡೆ, ಕೃಷಿ, ಸಿನಿಮಾ ಒಂದು ಬದಿಯಿಂದ ಇವೆಲ್ಲ ಸರಿಯೆನ್ನಿಸಿದರೂ, ಅದಕ್ಕೆ ಸಂಪೂರ್ಣ ಉತ್ತರ ಅಡಗಿರುವುದು ದೇಶದ ಸುಭದ್ರ ಆಡಳಿತ ವ್ಯವಸ್ಥೆಯಲ್ಲಿ. ಈ ಆಡಳಿತವನ್ನು ನಿಯಂತ್ರಿಸುವುದು ರಾಜಕೀಯ ಎಂಬ ಶಕ್ತಿ. ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಈ ಶಕ್ತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಕೌಟಿಲ್ಯನ 'ಅರ್ಥಶಾಸ್ತ್ರ' ವು ಈ ಬಗೆಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಅತ್ಯಮೂಲ್ಯ ಗ್ರಂಥವಾಗಿದೆ.

ಆದರೆ ಈ ಕಾಲಚಕ್ರದಲ್ಲಿ ಯಾವುದೂ ಸ್ಥಿರವಾಗಿ ನಿಲ್ಲಲು ಸಾಧ್ಯವಿಲ್ಲ. ರಾಜಕೀಯವೂ ಇದಕ್ಕೆ ಹೊರತಾಗಿಲ್ಲ. ಇತಿಹಾಸ ಕಾಲದಲ್ಲಷ್ಟೇ ಯಾಕೆ, ಸ್ವಾತಂತ್ರ್ಯ ಗಳಿಸಿದ ಅನೇಕ ವರ್ಷಗಳ ವರೆಗೂ ದೇಶವನ್ನು ಸಮೃದ್ಧವಾಗಿ ನಡೆಸಿದ ನಾಯಕರು ನಮ್ಮಲ್ಲಿದ್ದರು. ಆದರೆ ಅದರ ನಂತರವೂ ಜನ ಬಯಸಿದ ಸುವ್ಯವಸ್ಥಿತ ರಾಜಕೀಯದ ಕನಸನ್ನು ನಮ್ಮ ನಂತರದ ನಾಯಕರು ಬುಡಮೇಲುಗೊಳಿಸಿದರು. ತಮ್ಮ ಸ್ವಾರ್ಥಕ್ಕಾಗಿ ರಾಜಕೀಯವನ್ನು ಬಳಸಿದರು. ಪವಿತ್ರವಾದಂತಹ ವ್ಯವಸ್ಥೆಯನ್ನು ಅಪವಿತ್ರಗೊಳಿಸುವ ನಿಟ್ಟಿನಲ್ಲಿ ಸಾಗಿದರು. ಈ ಹದಗೆಟ್ಟಂತಹ ವ್ಯವಸ್ಥೆಯನ್ನು ತಮ್ಮ ತೀಕ್ಷ್ಣ ಯೋಚನಾ ಲಹರಿಯಿಂದ ರಾಜಕೀಯ ದಶಾವತಾರಗಳು ಪುಸ್ತಕದಿಂದ ಜನರೆದುರು ಸಾದರ ಪಡಿಸಲೆತ್ನಿಸಿದವರು ಆದಿತ್ಯ ಭಟ್ರವರು.

ಇಂಗ್ಲೀಷ್ ಹಾಗೂ ರಾಜ್ಯಶಾಸ್ತ್ರಗಳೆರಡರಲ್ಲೂ ಸ್ನಾತಕೋತ್ತರ ಪದವಿ ಜೊತೆಗೆ ರಾಜ್ಯಶಾಸ್ತ್ರದಲ್ಲಿ ಎಂ.ಫಿಲ್ ಪದವಿ ಗಳಿಸಿದ ಇವರು ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಇವರು ಬರೆದ 200ಕ್ಕೂ ಹೆಚ್ಚು ಲೇಖನಗಳು ಉದಯವಾಣಿ, ಹೊಸದಿಗಂತ, ವಿಜಯವಾಣಿ ಹಾಗೂ ಈಕನಸು.ಕಾಂ ಸೇರಿದಂತೆ ವಿವಿಧ ಪತ್ರಿಕೆ ಹಾಗು ವೆಬ್ಸೈಟ್ಗಳಲ್ಲಿ ಪ್ರಕಟವಾಗಿವೆ. ಅದರಲ್ಲಿ ಆಯ್ದ 50 ಲೇಖನಗಳನ್ನು ರಾಜಕೀಯ ದಶಾವತಾರಗಳು ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಪುಸ್ತಕದಲ್ಲಿರುವ ಪ್ರತಿಯೊಂದು ಲೇಖನಗಳನ್ನು ಸತ್ಯದ ದೃಷ್ಠಿಯಿಂದ ಹೊರಗೆ ಹಚ್ಚಿದಾಗ ಅರ್ಥಪೂರ್ಣವಾಗಿ ಕಂಡು ಬರುತ್ತದೆ. ನಮ್ಮ ಕಣ್ಣು ಮುಂದಿಯೇ ನಡೆಯುವ ವಿದ್ಯಮಾನಗಳನ್ನು ವಿಶ್ಲೇಷಣಾತ್ಮಕವಾಗಿ ಕಟ್ಟಿಕೊಡುತ್ತಾರೆ. ದಿನಕ್ಕೊಂದರಂತೆ ಹೊಸ ಪಕ್ಷಗಳು ಹುಟ್ಟುತ್ತಿರುವಾಗ ಪಕ್ಷ ಕಟ್ಟಿ ಮೆರೆದವರೆಲ್ಲ ಏನಾದರು? ಎಂದು ಹೊಸ ಪಕ್ಷಗಳ ಅಪಯಶಸ್ಸಿಗೆ ಕಾರಣಹುಡುಕಲು ಯತ್ನಿಸುತ್ತಾರೆ. ಪ್ರೌಢರಾದರೂ ಅಪ್ರಾಪ್ತ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಜನಪ್ರತಿನಿಧಿಗಳಿಗೆ ಕನಿಷ್ಠ ಒಂದು ತಿಂಗಳಾದರೂ ಪಾಠ ಸಿಗುವಂತಾಗಬೇಕು ಅಂದಾಗ ಮಾತ್ರ ಅವರಿಗೆ ದೇಶದ ಸಮಸ್ಯೆಗಳ ಬಗ್ಗೆ ಸರಿಯಾಗಿ ಅರಿಯಲು ಸಾಧ್ಯ ಎನ್ನುವ ಅಂಶ ನಿಜವೆನ್ನಿಸುತ್ತದೆ.
ರಾಜಕಾರಣಿಗಳ ತಪ್ಪುಗಳನ್ನು ನಿರ್ಭಯವಾಗಿ ಟೀಕಿಸುವ ಆದಿತ್ಯರ ಬರಹಗಳು ಒಂದು ಹನಿ ಮಸಿ ಕೋಟಿ ಜನಕ್ಕೆ ಬಿಸಿ' ಎಂಬುದನ್ನು ನೆನಪಿಸದೇ ಇರದು.
ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿಭಟನೆಗಳಾಗುವುದು ಸಹಜ. ಅದು ವ್ಯವಸ್ಥೆಯನ್ನು ಟೀಕಿಸುವ ಸ್ವಾತಂತ್ರ್ಯ ವ್ಯಕ್ತಿಗಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ಹಂತದಲ್ಲಿ ಅಣ್ಣಾಹಜಾರೆಯವರ ಹೋರಾಟ ಗಳಿಸಿದ ಅಭೂತಪೂರ್ವ ಜನಬೆಂಬಲ, ಬಾಬಾ ರಾಂ ದೇವ್ ಅವರ ಹೋರಾಟದ ಒಳನೋಟವನ್ನು ಲೇಖಕರು ಓದುಗನ ಮುಂದಿಡುತ್ತಾರೆ.

"ಕಳೆದುಕೊಳ್ಳುದರೊಳಗಿನ ಆನಂದ... ಪರಮಾನಂದ" ಎನ್ನು ಲೇಖಕರು ನಾವು ನಂಬಿದ ತತ್ವಗಳಿಗಾಗಿ ಸರ್ವಸ್ವವನ್ನು ಕಳೆದುಕೊಳ್ಳುವುದರಲ್ಲಿ ಪರಮಾನಂದವಿದೆ ಎನ್ನುತ್ತಾರೆ. ಆ ಮೂಲಕ ಆತ್ಮಗೌರವ, ತತ್ವ ಸಿದ್ದಾಂತಗಳಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನಮ್ಮ ದೇಶದಲ್ಲಿ ಜನಪ್ರತಿನಿಧಿಗಳು ಆಯ್ಕೆಯಾಗುವುದು ಚುನಾವಣೆಯ ಮೂಲಕ ಆದರೆ ಪ್ರಸಕ್ತ ವಿದ್ಯಮಾನಗಳನ್ನು ಗಮನಿಸಿದರೆ ಅದು ವಂಶಪಾರಂಪರ್ಯವಾಗಿ ಮುಂದುವರೆಯುವಂತೆ ಕಾಣುತ್ತಿದೆ. ಕುಟುಂಬ ರಾಜಕಾರಣದ ಹಾವಳಿಯಲ್ಲಿ, ತಂದೆ ತಾಯಿ ಹೆಸರಿನ ಪ್ರಭಾವದಿಂದ ಮುಂದೆ ಬರುತ್ತಿರುವವರೇ ಹೆಚ್ಚು. ಅದಕ್ಕಾಗಿಯೇ ಇದನ್ನು ತಡೆಯಲು ಚುನಾಯಿತ ಸ್ಪಧರ್ಿಗಳು ಐದು ವರ್ಷವಾದರೂ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಉಪಾಯ ಸೂಚಿಸುತ್ತಾರೆ.
" ಹಸಿದ ಹೊಟ್ಟಗೆ ಬೇಕಿರುವುದು ಗಂಗಾಜಲವಲ್ಲ ಅನ್ನ!" ಎಂಬ ಲೇಖನದಲ್ಲಿ ರಾಜಕಾರಣಿಗಳು ಹೇಗೆ ಜನರ ಧಾಮರ್ಿಕ ಭಾವನೆಯನ್ನು ಬಳಸಿಕೊಳ್ಳುವರು ಎಂಬುದನ್ನು ವಿವರವಾಗಿ ಚಿತ್ರಿಸಲಾಗಿದೆ. " ಬುದ್ದ, ರಾಮ ಸಾಲದು ರಾಮರಾಜ್ಯವೂ ಬೇಕು" ಎನ್ನುವ ಲೇಖಕರು ಚುನಾವಣೆ ಗೆಲ್ಲಲು ರಾಮನಿದ್ದರೆ ಸಾಲದು ಜನರಿಗೆ ಒಳ್ಳೆಯ ಬಾಳು ಕೊಡಲು ರಾಮ ರಾಜ್ಯವು ಬೇಕು ಎನ್ನುತ್ತಾರೆ. ಈ ಮೂಲಕ ಕೇವಲ ದೇವರ ಹೆಸರಿನಿಂದ ಪಕ್ಷ ಸಂಘಟಿಸದೆ, ಜನರ ಮನ ಮುಟ್ಟುವ ಕಾರ್ಯ ಮಾಡಬೇಕು ಎಂದು ಭಾರತದಷ್ಟೇ ಅಲ್ಲದೆ ಜಪಾನ್, ಶ್ರೀಲಂಕಾದ ರಾಜಕೀಯ ಪಕ್ಷಗಳ ಸ್ಥಿತಿಯನ್ನು ವಿಶ್ಲೇಷಿಸುತ್ತಾರೆ.

ಕೇಂದ್ರ ಸರಕಾರ ಏಕೆ ರಾಜ್ಯ ನಾಯಕರ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ವಿಮಶರ್ಿಸುವ ಅವರು ನರೇಂದ್ರ ಮೋದಿ, ನಿತೀಶ್ ಕುಮಾರ್, ಶಿವಾರಾಜ್ ಸಿಂಗ್ ಚೌಹಾಣ್, ಕರುಣಾನಿಧಿಗಳು ಏಕೆ ಯಶಸ್ವಿಯಾದರು ಎಂಬುದನ್ನು ಪರಾಮರ್ಶಿಸಿದ್ದಾರೆ. ಇದು ಒಳ್ಳೆಯ ಯತ್ನ.
ತೆರೆಯ ಮೇಲೆ ಸೂಪರ್ ಹೀರೋಗಳಾಗಿ ಮಿಂಚುವ ಸಂಜಯ್ ದತ್ ರಂತಹ ಸ್ಟಾರ್ಗಳು ನಿಜ ಜೀವನದಲ್ಲಿ ಹೇಗಿರುತ್ತಾರೆ. ಅವರ ಒಳ ಮರ್ಮವೇನು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮಹಿಳಾ ಮೀಸಲತಿ ಎಂದು ಬೊಬ್ಬೆ ಹೊಡೆಯುವವರು ಮಾಡುವುದೇನು? ನಿಜವಾಗಿಯೂ ಮೀಸಲಾತಿ ಸಿಗಬೆಕಾದದ್ದು ಯಾರಿಗೆ? ಗೋ ಹತ್ಯೆ ನಿಷೇಧದ ಥಳಕುಗಳು, ಕನ್ನಡ ಶಾಲೆಗಳ ವಿಲೀನ ಯೋಜನೆಗಳ ಕಾರಣಗಳು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾದ ಮಾಧ್ಯಮ ಹೀಗೆ ಅನೇಕ ವಿಷಯಗಳನ್ನು ಪರಾಂಬರಿಸುವ ಪ್ರಯತ್ನ ಮಾಡಿದ್ದಾರೆ.

ಬದುಕಿನ ವಿಶಾಲತೆಯನ್ನು ಕಲೆಯ ಶ್ರೇಷ್ಠತೆಯನ್ನು ಖ್ಯಾತಿಯ ನಿರರ್ಥಕತೆಯನ್ನು ಅರ್ಥ ಮಾಡಿಕೊಂಡವನು ಹತೊರೆಯಲಾರ ಎನ್ನುವ ಆದಿತ್ಯ.ಜಿ ಭಟ್ ಕೆಟ್ಟು ಹೊಗುತ್ತಿರುವ ವ್ಯವಸ್ಥೆಯ ಮೇಲೆ, ರಾಜಕಾರಣಿಗಳ ದುರ್ಬುದ್ಧಿಯ ಮೇಲೆ ಪ್ರಖರವಾಗಿ ಉರಿಯುವ 'ಆದಿತ್ಯ'ನಂತೆ ಹೊರಹೊಮ್ಮಲೆತ್ನಸಿದ್ದಾರೆ. ಯಾವುದೇ ವಿಷಯದಲ್ಲಿ ಪರಿಪೂರ್ಣತೆ ಅನ್ನು ಗಳಿಸುವುದು ಅಸಾಧ್ಯ. ಅದೇ ರೀತಿ ರಾಜಕಾರಣಿಗಳು,ಜನಪ್ರತಿನಿಧಿಗಳು , ವ್ಯವಸ್ಥೆಯ ಬಲಾಬಲವನ್ನು ಟೀಕಿಸುವುದು ಅತೀ ಕಷ್ಟದ ಕೆಲಸ. ಆದರೆ ಲೇಖಕರು ಅದನ್ನು ಸಾಧೀಸುವ ಪ್ರಯತ್ನ ಮಾಡಿದ್ದಾರೆ.ಪ್ರಬಲ ರಾಜ್ಯಶಾಸ್ತ್ರಜ್ಙರಾಗಿ ಹೊರಬರುವ ಎಲ್ಲಾ ಲಕ್ಷಣಗಳನ್ನು ಸ್ಫುರಿಸಿದ್ದಾರೆ. ಈ ನಿಟ್ಟಿನಲ್ಲಿ 'ರಾಜಕೀಯ ದಶಾವತಾರಗಳು ಯಶಸನ್ನು ಗಳಿಸಿದೆ. ರಾಜಕೀಯದ ಬಗ್ಗೆ ಪ್ರಜ್ಞೆ ಮೂಡಿಸುವಲ್ಲಿ ಸಫಲರಾಗಿದ್ದಾರೆ.

ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಅವರ ವಿಶ್ಲೇಷಣೆ ಅದ್ಭುತ. ಆದರೆ ಕೆಲವೊಂದು ಸಲ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಕೆಲವೊಂದು ಲೇಖನಗಳು ಪ್ರಾಧಾನ ಶೀರ್ಷಿಕೆಗೆ ಅಸಂಬದ್ದವೆನಿಸುತ್ತವೆ. ಇಂದಿರಾಗಾಂಧಿ ಜಾರಿಗೊಳಿಸಿದ ತುರ್ತು ಪರಿಸ್ಥಿತಿ ಜೊತೆಗೆ ಕೆಲವು ರಾಜಕೀಯ ಘಟನಾವಳಿಗಳು ಪುನರಾವರ್ತಿತವಾಗಿದ್ದು ಏಕತಾನತೆಯನ್ನು ಸೃಷ್ಠಿಸುತ್ತವೆ. ಉಳಿದಂತೆ ಓದಿಸಿಕೊಂಡು ಹೋಗುವ ಎಲ್ಲಾ ಅಂಶಗಳು ಈ ಕೃತಿಗಿದ್ದು, ಮುಖಪುಟ ವಿನ್ಯಾಸ ಸರಿಯಾಗಿ ಒಪ್ಪುವಂತಿದೆ.

0 comments:

Post a Comment