ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕನ್ನಡ ಚಿತ್ರರಂಗ ಪಡೆದ ಅಮೂಲ್ಯ ರತ್ನ ಗಿರೀಶ್ ಕಾಸರವಳ್ಳಿಯವರು.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ 1950 ರಲ್ಲಿ ಜನಿಸಿದ ಇವರು ಕಲಾತ್ಮಕ ಚಿತ್ರಗಳ ಶ್ರೇಷ್ಠ ನಿರ್ದೇಶಕರಾಗಿ ಕನ್ನಡಿಗರಿಗೆ ಚಿರಪರಿಚಿತರು. ಘಟಶ್ರಾದ್ಧ, ನಾಯಿನೆರಳು, ಹಸೀನಾ, ಕನಸೆಂಬ ಕುದುರೆಯನೇರಿ ಹೀಗೆ ಹಲವಾರು ಪ್ರಸಿದ್ಧ ಚಿತ್ರಗಳನ್ನು ಕಲಾತ್ಮಕ ಚಿತ್ರಗಳ ಲೋಕಕ್ಕೆ ಕೊಡುಗೆಯಾಗಿ ನೀಡಿದವರು. ಇಂತಹ ಗಿರೀಶ್ ಕಾಸರವಳ್ಳಿಯವರ ಜೊತೆಗೆ ನಡೆದ ಪುಟ್ಟ ಸಂದರ್ಶನದ ಸಾರ ಇಲ್ಲಿದೆ.

1.ಇತ್ತೀಚೆಗೆ ಕಲಾತ್ಮಕ ಚಿತ್ರಗಳ ಕಡೆಗೆ ಜನರ ಗಮನ ಕಡಿಮೆಯಾಗುತ್ತಿದೆಯೇ?
ಹಾಗೇನಿಲ್ಲ. ಮೊದಲಿಗಿಂತ ಹೆಚ್ಚಾಗಿ ಇಂದು ಕಲಾತ್ಮಕ ಚಿತ್ರಗಳ ಕಡೆಗೆ ಜನತೆ ವಾಲುತ್ತಿದ್ದಾರೆ.ಸಿನಿಮಾ ಮಂದಿರಗಳು ಕಲಾತ್ಮಕ ಚಿತ್ರಗಳನ್ನು ಪ್ರದರ್ಶಿಸುವಲ್ಲಿ ತಮ್ಮ ಆಸಕ್ತಿ ತೋರ್ಪಡಿಸದೇ ಇದ್ದರೂ ಸಹ, ದೂರದರ್ಶನವು ಈ ಚಿತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿವೆ.
2.ಇಂದಿನ ಕಮರ್ಷಿಯಲ್ ಚಿತ್ರಗಳ ಗುಣಮಟ್ಟ ಕುಂದುತ್ತಿದೆಯೇ?
ಚಿತ್ರಗಳ ಗುಣಮಟ್ಟ ಕಡಿಮೆಯಾಗಲು ಕಾರಣ ಜನರು. ಅಂತಹ ಚಿತ್ರಗಳನ್ನು ನೋಡುವುದರ ಮೂಲಕ ಅಪರೋಕ್ಷವಾಗಿ ಜನರೇ ಅವನ್ನು ಹುರಿದುಂಬಿಸುತ್ತಿದ್ದಾರೆ.
3.ಇಂದಿನ ಸಿನಿಮಾ ಸಾಹಿತ್ಯ, ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಾಹಿತ್ಯದ ಗುಣಮಟ್ಟ ಕಡಿಮೆಯಾಗಿದೆ ಅಂತೇನಿಲ್ಲ. ಆದರೆ ಸಂಗೀತದ ಅಬ್ಬರ ಜಾಸ್ತಿಯಾಗಿದೆ. ಅಬ್ಬರದ ಮೂಲಕ ಜನತೆಯನ್ನು ಆಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ. ಸಾಹಿತ್ಯದ ದೃಷ್ಠಿಯಿಂದ ನೋಡುವುದಾದರೆ ಜಯಂತ್ ಕಾಯ್ಕಿಣಿಯವರಂತಹ ಗೀತರಚನೆಕಾರರು ಸಿನಿಮಾ ಸಾಹಿತ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದಾರೆ. ಸಾಹಿತ್ಯದ ಗುಣಮಟ್ಟ ಕಡಿಮೆಯಾಗಿದೆ ಎನ್ನುವ ಹಾಗೆಯೇ ಇಲ್ಲ.
4. ಪ್ರತೀಸಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾದಾಗಲೂ ಗಿರೀಶ್ ಕಾಸರವಲ್ಳಿಯವರಿಗೆ ಒಂದು ಪ್ರಶಸ್ತಿ ಖಚಿತ ಎನ್ನುವ ಮಟ್ಟಿಗೆ ನೀವು ಖ್ಯಾತರಾಗಿದ್ದೀರಿ, ಪ್ರತಿಭಾನ್ವಿತರಾಗಿದ್ದೀರಿ. ಇಂತಹ ಒಂದು ಪ್ರತಿಭೆ ಹೇಗೆ ಸಾಧ್ಯವಾಯಿತು?
ನಾನು ಮೊದಲಿನಿಂದಲೂ ಚಿತರರಂಗದಲ್ಲಿ ಆಸಕ್ತಿ ಹೊಂದಿರುವವನು. ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಓದಿದ್ದೇನೆ. ಹೀಗಾಗಿ ಇಂತಹ ಸಾಧನೆ ಸಾಧ್ಯವಾಯಿತು.
5. ಇಂದಿನ ನಿರ್ದೇಶಕರಲ್ಲಿ ಕ್ರಿಯಾಶೀಲತೆಯ ಕೊರತೆ ಕಾಣುತ್ತಿದೆಯೇ?
ಹಾಗೆ ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಅವರದೇ ಆದ ಸ್ವಂತ ಪ್ರತಿಭೆಯಿದೆ.ಚಿತ್ರ ಮಾಡುವವರನ್ನು ಕಂಡಾಗ ಅವರು ಮೂಲತ:ವಾಗಿ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಓದಬೇಕಿತ್ತೆಂದು ಅನಿಸುತ್ತದೆ.
6.ಇಷ್ಟು ದಿನದ ಸಿನಿಜೀವನ ಖುಶಿ ಕೊಟ್ಟಿದೆಯೆ?
ಹೌದು. ಈ ಮಾಧ್ಯಮರಂಗದಲ್ಲಿ ಮೊದಲಿನಿಂದಲೂ ಆಸಕ್ತಿಯಿರುವುದರಿಂದ ನನಗೆ ಇದು ತೃಪ್ತಿ ನೀಡಿದೆ.
7.ಕನ್ನಡ ಶಾಲೆಗಳ ವಿಲೀನ ಯೋಜನೆಯ ಬಗ್ಗೆ ಏನು ಹೇಳುತ್ತೀರಿ?
ಇದು ನಿಜವಾಗಿಯೂ ದೊಡ್ಡ ದುರಂತ. ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣದ ಅವಶ್ಯಕತೆಯಿದೆ.
8. ಬೇರೆ ಸಮ್ಮೇಳನಗಳನ್ನು ನೀವು ನೋಡಿದ್ದೀರಿ. ಇತರ ಸಮ್ಮೇಳನಗಳಿಗಿಂತ’ ಆಳ್ವಾಸ್ ನುಡಿಸಿರಿ’ ಹೇಗೆ ಭಿನ್ನವೆನಿಸಿತು?
ತುಂಬಾ ಚೆನ್ನಾಗಿ ಮೂಡಿಬಂದಿದೆ. ಘನತೆಯನ್ನು ಪಡೆದುಕೊಂಡ ಸಮ್ಮೇಳನವಾಗಿ ಬಿಂಬಿತವಾಗಿದೆ. ನಡೆದಂತಹ ಎಲ್ಲಾ ವಿಚಾರಗೋಷ್ಠಿಗಳು ಹಾಗೂ ಇತರ ಕಾರ್ಯಕ್ರಮಗಳು ಅರ್ಥಪೂರ್ಣವಾಗಿದ್ದವು.
-ಶ್ರೀಗೌರಿ ಜೋಶಿ
ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು
ಮೂಡುಬಿದಿರೆ.

0 comments:

Post a Comment