ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಹೊಸಪೇಟೆ ಆಕಾಶವಾಣಿ FM ಕೇಂದ್ರ ಮಕ್ಕಳ ದಿನಾಚರಣೆಯ ಅಂಗವಾಗಿ ರಾಜೇಶ್ ತೋಳ್ಪಾಡಿ ಅವರ ಕವನದ ಸಾಲಿನೊಂದಿಗೆ "ತೇಲುತ ಬರಲಿ ಚಿಲಿಪಿಲಿ ಹಾಡು" ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಕ್ಕಳ ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಎನ್.ಶ್ರೀನಿವಾಸ ಉಡುಪ, ಕಂಚ್ಯಾಣಿ ಶರಣಪ್ಪ, ಎ.ಕೆ.ರಾಮೇಶ್ವರ, ಡಾ.ಚಿಂತಾಮಣಿ ಕೊಡ್ಲೆಕೆರೆ, ವಿಜಯಶ್ರೀ ಹಾಲಾಡಿ, ಜೀನಹಳ್ಳಿ ಸಿದ್ಧಲಿಂಗಪ್ಪ, ರಾಜೇಶ್ ತೋಳ್ಪಾಡಿ, ಕೃಷ್ಣಮೂರ್ತಿ ಬಿಳಿಗೆರೆ ಮತ್ತು ತಮ್ಮಣ್ಣ ಬೀಗಾರ ಅವರುಗಳು ತಮ್ಮ ಕವನವನ್ನು ವಾಚಿಸಿದರು.

ಮಕ್ಕಳಾದ ಭೂಮಿಕಾ ಯಾಜಿ, ಯು.ಎಸ್.ಸ್ವಾತಿ, ಸುವರ್ತ, ಹೆಚ್.ಆರ್.ಕಾವ್ಯಶ್ರೀ, ತೇಜಸ್ವಿನಿ, ಜಿ.ಭೂಮಿಕ, ವರದಾನೇಶ್ವರಿ, ಕರಣಂ ತೇಜಸ್ವಿನಿ, ಅರ್ಚನ, ಸ್ಕಂದ ಎಸ್., ಶ್ರೀಹರಿ ಕುಲಕರ್ಣಿ, ಮಹೇಶ್ ಕುಮಾರ್ ಬಿ., ಜೆ.ಎ.ಅರ್ಚಿತ ಮತ್ತು ಚೇತನ ವಸ್ತ್ರದ ಅವರುಗಳು ತಮ್ಮ ಸುಮಧುರವಾದ ಕಂಠದಿಂದ ಹಾಡಿಗೆ ಮೆರಗು ತಂದರು. ಬೆಂಗಳೂರಿನ ಶ್ರೀ ತಿರುಮಲೆ ಶ್ರೀನಿವಾಸ ಅವರು ರಾಗಸಂಯೋಜನೆ ಮಾಡಿದ್ದರು.
- ಹಂಪಿ ಯಾಜಿ

0 comments:

Post a Comment