ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ: ಮಂಗಳೂರು ವರದಿ
ಚೈಲ್ಡ್ ಲೈನ್ ಸೆ ದೋಸ್ತಿ ವೀಕ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ರೋಶನಿ ನಿಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದಂತಹ ಆಶಾ ನಾಯಕ್ ರವರು ಮಕ್ಕಳು ಜಂಟಿಯಾಗಿ ಬಿಡಿಸಿದ ಮಹಾಕಲಾಕೃತಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ರೋಶನಿ ನಿಲಯದ ಪ್ರೊಫೆಸರ್ ರಮೀಲಾ ಶೇಖರ್ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಚೈಲ್ಡ್ ಲೈನ್ ಸಂಯೋಜಕಿ ಪೂನಂ ರವರು ದೋಸ್ತಿ ವೀಕ್ ಸಪ್ತಾಹದ ಅಂಗವಾಗಿ ನಡೆದಂತಹ ಏಳು ದಿನಗಳ ಕಾರ್ಯಕ್ರಮದ ವಿವರಣೆ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರೇಸಿ ಗೊನ್ಸಾಲ್ವಿಸ್ರವರು ಮಾತನಾಡಿ ಮಕ್ಕಳು ಯಾವುದೇ ಸಮಸ್ಯೆಯಲ್ಲಿದ್ದಾಗ ಚೈಲ್ಡ್ ಲೈನನ್ನು ಸಂಪಕರ್ಕಿಸಲು ಮಾರ್ಗದರ್ಶನ ನೀಡಿದರು. ಪಡಿ ನಿರ್ದೇಶಕರಾದ ರೆನ್ನಿ ಡಿಸೋಜರವರು ಮಾತನಾಡಿ ಸಮುದಾಯದ ಜೊತೆ ಇಲಾಖೆಗಳು ಕೈಜೋಡಿಸಿ ಮಕ್ಕಳ ಎಲ್ಲಾ ತರಹದ ತೊಂದರೆಗಳನ್ನು ಬಗೆಹರಿಸುವಂತಾಗಬೇಕು ಎಂದು ಹೇಳಿದರು. ರೋಶನಿ ನಿಲಯದ ಪ್ರಾಂಶುಪಾಲರಾದ ಡಾ|ಸೋಫಿಯಾ.ಎ.ಫೆರ್ನಾಂಡಿಸ್ ಕಾರ್ಯಕ್ರಮವನ್ನುದ್ದೇಶಿಸಿ ಹಿತನುಡಿಗಳನ್ನಾಡಿದರು.

0 comments:

Post a Comment