ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:22 PM

"ಅಣ್ಣಾ ಏನೀಬಣ್ಣ? "

Posted by ekanasu

ವಿಚಾರ:ಆರ್.ಎಂ.ಶಮ೯, ಮಂಗಳೂರು
ಗತದಿನಗಳಲ್ಲಿ,ಭಾರತದ ಹೊಸಆಸೆ-ಜನಕ್ಕೆ-ಮನಕ್ಕೆ-ಮನೆಮನೆಗೆ-ನಾಡಿಗೆ-ರಾಷ್ಟ್ರಕ್ಕೇ-ಕಡೆಗೆ-ಜಗತ್ತೇ ದಿಟ್ಟಿಸಿ ನೋಡಿದಂತಾದುದು-"ಅಣ್ಣಾ ಹಜಾರೆ ಎಂಬ-ಅಪರೂಪದವಿಷಿಷ್ಟ ಚೇತನ" ಇದು ಈಗ ಇತಿಹಾಸವಾಗಿದೆ-ಹ್ರಸ್ವವಾಗಿದೆ-ಹಾಸ್ಯವಾಗಿದೆ!ಇಡೀ ಭಾರತದ ಉದ್ದಗಲಕ್ಕೆ-ಜನ ಮುಗಿಬಿದ್ದರು-ಕೈಮುಗಿದರು-ಕೈಕುಲುಕಿದರು-ಕೈ ಹಿಸಿಕಿದರೂ-ಕೈ ಕೈ ಹಿಸಿದುಕೊಂಡವರೂ ಎಲ್ಲಾ ಭಾರತೀಯರೇ!


ಸಾಧುಗಳು-ಸಂತರು-ಸ್ವತಂತ್ರರು-ಅತಂತ್ರರು-ಕುತಂತ್ರರು-ಎಲ್ಲಾ ನೋಡಿದರು-ಸುತ್ತಾಡಿದರು-ಸುಸ್ತಾದರು!
ಎಲ್ಲಾ-ಬಿರುಗಾಳಿಯಂತೆ-ಬೀಸಿತು-ಬೀಳಿಸಿತು!
ಅಣ್ಣಾ ಅಧ್ವರ್ಯ-ಅಧ್ವಾನವಾಯಿತು!
ಜತೆಯವರು-ಜಾರಿದರು-ಝಾಡಿಸಿದರು!
ಅಣ್ಣಾ ಪ್ರಳಯಎಂತ ಬಿಂಬಿಸಿ-ಹುರಿದುಂಬಿಸಿ-ನಂಬಿಸಿ ಕೊನೆಗೆ ಜ್ಯೋತಿ ನಂದಿತು-ನೊಂದಿತು!
ಇದೇ ಅಣ್ಣಾ ಆಖ್ಯಾನ!

ಜತೆಯಲ್ಲಿದ್ದ-ಅರವಿಂದ ಕೇಜರಿವಾಲ್, ಸಿಸೋಡಿಯ ಇನ್ನೂ ಅತಿರಥರುಸಂಬಂಧ ಹರಿದುಕೊಂಡು-ಅಣ್ಣಾ ಮರುಕವನ್ನು ಹೊಸಬಂಡವಾಳಕ್ಕೆ-ತಾಳಹಾಕಲು-ತಳಕಲ್ಲಾಗಿ ಬಳಸಲು ಒಯ್ದರು-ಅಣ್ಣಾರನ್ನು ಒದ್ದರು!
"ಎಲ್ಲಾ ಒಂದುಕ್ಷಣದಲ್ಲಿ ತಕಮಕ"
ರಾಜಕೀಯದ ಸೊಗಡು-ಸಾಮಾಜಿಕಕ್ಕೂ ಅಡರಿ-ಅದುರಿಸಿತು-ಬೆದರಿಸಿತು-ಬೆವರಿಳಿಸಿತು!

ಈಗ ಅಣ್ಣಾ ಎರಡನೆಯ ಆವೃತ್ತಿ ಎಂತ-"ಅಣ್ಣಾ ೨.೦ ತಂಡ ಎಂತ ಜನ್ಮತಾಳಿದೆ ಎಂತ ಎಲ್ಲಾ ಮಧ್ಯಮಗಳಲ್ಲಿಯೂ ವರದಿಯಾಗಿದ್ದಷ್ಟೇ ಅಲ್ಲದೇ ಸ್ವಯಂ ಅಣ್ಣಾ ಅದರ ಹೊಸ ಕಾಯ೯ತಂತ್ರಗಳನ್ನು ಪ್ರಚಾರಮಾದುವುದಾಗಿ ವರದಿಯಾಗಿದೆ!
"ಮೈ ಹೂಂ ಅಣ್ಣಾ"-ಹೋಯಿತು!

"ಮೈ ಹೂಂ ಆಂ ಆದಮೀ" ಬಂದಿತು!
ಅದೂ ಹೋಯಿತು!
ಇನ್ನೊಂದು ಬಂದಿತು-"ಮುಝೆ ಚಾಹಿಯೇ ಸ್ವಛ್ ಭಾರತ್"!
ಇನ್ನೂ ಏನೇನು ಉಂಟೋ-ವಿರಾಟ್ ದಶ೯ನದಲ್ಲಿ-ಬಲ್ಲವನು-ಎಲ್ಲಿದ್ದಾನೋ-ಹೇಗಿದ್ದಾನೋ?

ಎಲ್ಲಾದರೂ ಇರಲಿ-ಹೇಗಾದರೂ ಇರಲಿ-ಆದರೆ ಜನಹಿತಕ್ಕೇ ಇರಲಿ!
ಇಲ್ಲಿ ನೋಡಿ-
ಅಣ್ಣಾ ಶರದ್ ಪವಾರ್ "ಲೋಕಪಾಲ್" ಸಮಿತಿಯಲ್ಲಿ ಬೇಡ ಎಂತ ವರಾತ ಮಾಡಿದರು-ಕಾರಣ ಹಿಂದಿನ ಜಿದ್ದು-ಜಾದ್ಯ ಏನೇನೋ!

ಅಣ್ಣಾ ಗುಂಪಿನಿಂದ ಹೊರಚಿಮ್ಮಿದ ಮಿಂಚು-ಕೇಜರಿವಾಲ್-ಕಣ್ಣುಕೋರೈಸುವಂತೆ-ಮಿಂಚಿದರು-ವಂಚಿಸಿದರು!
ಈಗ ಶ್ರೀ ಸಲ್ಮಾನ್,ಗಡ್ಕರಿ-ಹೀಗೆಲ್ಲಾ ಅರಿಯಾದವರು-ಮೊದಲು ಅರಿತಿರಲಿಲ್ಲವೇ ಸತ್ಯವನ್ನು-ಅಣ್ಣಾ ಗುಂಪಿನ ಆಧ್ಯರಾಗಿದ್ದಾಗ?
ಬೇಡಾ ಇಂತಹ ಮಹಾನ್ ಮೋಸ ಅಣ್ಣಾಗೇ ಗೊತ್ತಿರಲಿಲ್ಲವೇ?
ಇದೇನು ಹಾಸ್ಯವೇ-ಅಪಹಾಸ್ಯವೇ-ಅಥವಾ ಸ್ವಾಮ್ಯವೇ?
ಭಗವಂತನೇ ಬಲ್ಲ!

ಸದಾ ಭ್ರಷ್ಟಾಚಾರದ ಬಗೆಗೇ ಹೋರಾಡುವ ಮಂದಿಗೆ ಭಾರಿ ಮೋಸಗಳು ಮೊದಲೇ ತಿಳಿದಿರಲಿಲ್ಲ ಎಂದರೆ ಒಪ್ಪುವ ಮಾತೇ?
ಅಣ್ಣಾಗೇ-ಅಣ್ಣಾಗೂ-ತಿಳಿಯದ-ತಿಳಿಸದ ವಿಚಾರ ಕೇಜರಿವಾಲ್ ಬತ್ತಳಿಕೆಯಲ್ಲಿ-ಇದು ತಕ೯ವೇ?
ಬೇಕಂತಲೇ-ಅಣ್ಣಾ ಕೇಜರಿವಾಲ್ ಹೊರ ಹೋಗಿ ಅಬ್ಬರಿಸಲಿ ಎಂತ-ಹರಸಿದರೇ-ಹಾರೈಸಿದರೇ-ಅಥವಾ ಒಂದೊಮ್ಮೆ ಒಪ್ಪಂದಮಾಡಿಕೊಂಡಿದ್ದು ಅದನ್ನು-ಪೂರೈಸಿದರೇ?

ಅಣ್ಣಾ ರಾಜಕೀಯ ಬೇಡಾ ಎಂತ ಹೇಳಿ-ರಾಜಕೀಯ ಮಾಡಿದ್ದರೆ ಎಂತ ಮೇಲ್ನೋಟಕ್ಕೇ ಈ ಪ್ರಕರಣವು ಸಿದ್ಧಪಡಿಸದೇನು?
ಹೇಗಾದರೂ ಇರಲಿ-ಎಲ್ಲೆಲ್ಲೂ ನ್ಯಾಯ ಕ್ಕಾಗಿ ಹಾತೊರೆಯುವ-ಅಬ್ಬರಿಸುವ-ಎಲ್ಲರನ್ನೂ ಚಚ್ಚುವ-ಕಚ್ಚುವ-ಕುಕ್ಕುವ ಅಣ್ಣಾಗುಂಪು, ಈಗ ಬೇರೆಯಾಗಿರುವ ಕೇಜರಿವಾಲ್ ಗುಂಪು-ಜನತೆಯ ಮುಂದೆ ಸತ್ಯವನ್ನು ಹೇಳಿ ಮೊದಲೇ ಎಖೆ-ಸಲ್ಮನ್-ಗಡ್ಕರಿ ಪ್ರಕರಣಗಳನ್ನು ಜನತೆಯಮುಂದೆ ಮಂಡಿಸಲಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಬೇಡವೇ?

ಮಹಾನ್ ಜನತೆ ಅದಕ್ಕಾಗಿ ಆಗ್ರಹ ಪಡಿಸಬಾರದೇ?
ಸತ್ಯವನ್ನು ತಿಳಿಯಲು-ತಿಳಿಸಲು ಕಾಲ ಈಗ ಪಕ್ವವಲ್ಲವೇ?
ಹಾಗಿದ್ದರೆ-ಅಣ್ಣಾಹೊಗಳಿದ,ಈಗ ಕೇಜರಿಗೆ ಜೈ ಎಂದ ಭಾರತದ ಜನತೆ ಏಕೆ ಮೈಕೊಡವಿ ಮೇಲೇಳಬಾರದು?

ಸತ್ಯಮೇವ ಜಯತೇ-ಎಂತಾದರೆ-ಸತ್ಯಕ್ಕಾಗಿ ಕೂಡಲೇ ಆಗ್ರಹಿಸಲಿ!
ಆಗೆಲ್ಲಾ ದುರಾಗ್ರಹ-ದೂರಾಗದೇನು?
ಬನ್ನಿ ಸತ್ಯದ ಸಖ್ಯದಜತೆ ಬಯಸುವ-ಭಾರತದ ಜನತೆ ಎತ್ತರದ ಧ್ವನಿಯಲ್ಲಿ ಕೂಗಿರಿ-ಕೇಳಿಸಿರಿ-

"ಅಣ್ಣಾ-ಕೇಜರಿ ಬಣಗಳಿಗೆ"
ಈ ಬಣದ ಬಣ್ಣ ನಿಜವೇ-ಕೃತಕವೇ ಎಂತ ತಿಳಿಯಲು ಮತ್ತೇನು ಬೇಕು ಈ ಪರೀಕ್ಷೆಗಿಂತ ಬೇರೆ ಸಾಧನ?
"ಯಃ ಪಶ್ಯತಿ ಸಃ ಪಶ್ಯತಿ"

0 comments:

Post a Comment