ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೇವಲಪಲ್ಲಿ ಎನ್.ಗಿರೀಶ್ ,ಬೆಂಗಳೂರು
ಹಿಂದೆ ವ್ಯಾಪಾರ ಮಾಡುತ್ತೆವೆಂದು ಭಾರತ ಪ್ರವೇಶಿಸಿದ ಬ್ರಿಟಿಷರು ತಮ್ಮ ಕುತಂತ್ರ ಬುದ್ದಿಯಿಂದ ಇಲ್ಲೇ ನೂರಾರು ವರ್ಷಗಳ ಕಾಲ ನೆಲೆಸಿ ಭಾರತೀಯರಿಗೆ ಕೊಡಬಾರದ ಕಷ್ಟ ಕೊಟ್ಟರು. ದೇಶದಲ್ಲಿದ್ದ ಸಂಪನ್ಮೂಲಗಳನ್ನು ದೋಚಿ ಇಂಗ್ಲೆಂಡಿಗೆ ರವಾನಿಸಿದರು. ಭಾರತೀಯರನ್ನು ಅತ್ಯಂತ ಕೀಳಾಗಿ ಕಾಣುವುದರ ಜೊತೆಗೆ ಚಿತ್ರ ಹಿಂಸೆ ಕೊಟ್ಟರು. ಕೊನೆಗೆ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿ ಶ್ರಮದಿಂದ ಆಗಸ್ಟ್ 15 ರಂದು ಬ್ರಿಟಿಷರು ಭಾರತ ಬಿಟ್ಟು ಹೊರೆ ನಡೆದರು, ಭಾರತಕ್ಕೆ ಅಂದು ಸ್ವಾತಂತ್ರ್ಯ ಸಿಕ್ಕಿತು.

ಸದ್ಯ ಬ್ರಿಟಿಷರು ನಮ್ಮ ದೇಶದಲ್ಲಿ ಇಲ್ಲದಿದ್ದರು ಅವರನ್ನೇ ಹೋಲುವ, ಅವರ ಗುಣಗಳನ್ನು ಮೈಗೂಡಿಸಿಕೊಂಡಿರುವ ಹಲವಾರು ಜನಪ್ರತಿನಿಧಿಗಳು ನಮ್ಮ ದೇಶದಲ್ಲಿದ್ದಾರೆ, ಬ್ರಿಟಿಷರನ್ನು ಮೀರಿಸುವಾಗ ಹಾಗೆ ದೇಶವನ್ನು ದೋಚುತ್ತ ದೇಶದ ನಾಶಕ್ಕೆ ಕಾರಣರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಟ್ಟು ಜನಪ್ರತಿನಿಧಿಗಳ ಕೈಗಿಟ್ಟರು ದೇಶದಲ್ಲಿನ ಸಮಸ್ಯೆಗಳು ಇನ್ನು ಬಗೆಹರಿದಿಲ್ಲ. ಭಾರತ ದೇಶಕ್ಕೆ ಅಷ್ಟು ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿರಲಿಲ್ಲ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ರಣ ರಂಗದಲ್ಲಿ ಹೋರಾಡಿ, ದೇಶಕ್ಕಾಗಿ ತಮ್ಮ ಜೀವವನ್ನೇ ಬಲಿಕೊಟ್ಟಿದ್ದರು.

ಮಹಾತ್ಮ ಗಾಂಧಿಜೀ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರ್ದಾರ್ ವಲ್ಲಾಭಾಯಿ ಪಟೇಲ್, ವೀರ ಸಾವರ್ಕರ್ , ರಾಜಗುರು, ಸುಖದೇವ್, ಬಟುಕೇಶ್ವರ ದತ್ತ ಹೀಗೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ರಕ್ತವನ್ನು ಚೆಲ್ಲಿ ಭಾರತದಿಂದ ಬ್ರಿಟಿಷರನ್ನು ಹೊಡೆದೊಡಿಸಿದರು, ಭಾರತಕ್ಕೆ ಬ್ರಿಟಿಷರಿಂದ ಮುಕ್ತಿ ದೊರಕಿಸಿಕೊಟ್ಟರು, ಭಾರತೀಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಕೊನೆಗಾಣಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಅವಿರತ ಶ್ರಮದಿಂದ ಭಾರತ ದೇಶ ಸ್ವತಂತ್ರ ರಾಷ್ಟ್ರವಾಗಿ ರೂಪಗೊಂಡಿತು, ಸ್ವಾತಂತ್ರ್ಯ ನಂತರ ಭಾರತ ದೇಶ ಅಭಿವೃದ್ದಿಯಾಗುತ್ತದೆಂದು ಹಲವು ಸ್ವಾತಂತ್ರ್ಯ ಹೋರಾಟಗಾರರ ಅನಿಸಿಕೆ ಹಾಗೂ ನಿರೀಕ್ಷೆಯಾಗಿತ್ತು. ಆದರೆ ಆದದ್ದೆ ಬೇರೆ ಸ್ವಾತಂತ್ರ್ಯ ನಂತರ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಸರ್ಕಾರಗಳು ರಚನೆಯಾದರು ಕೂಡ ಭಾರತದಲ್ಲಿ ಸಮಸ್ಯೆಗಳ ಸರಮಾಲೆಯೆಯಿದೆ, ಇಲ್ಲಿನ ಸಮಸ್ಯೆಗಳಿಂದ ಜನ ಸಾಮಾನ್ಯರು ಸೊರಗಿ ಹೋಗಿದ್ದಾರೆ. ಇಲ್ಲಿಯವರೆಗೂ ಕೇಂದ್ರದಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಸರಕಾರಗಳು ಅಧಿಕಾರದ ಗದ್ದುಗೆ ಏರಿ ಆಡಳಿತ ನಡೆಸಿವೆ, ಇಲ್ಲಿಯವೆರೆಗೂ ಆಡಳಿತ ನಡೆಸಿದ ಸರಕಾರಗಳು ದೇಶಕ್ಕೆ ಹಾಗೂ ಭಾರತೀಯರಿಗೆ ಕೊಟ್ಟ ಕೊಡುಗೆ ಮಾತ್ರ ಶೂನ್ಯ.

ವೈಜ್ಞಾನಿಕ, ತಾಂತ್ರಿಕ, ಶೈಕ್ಷಣಿಕ, ಆರೋಗ್ಯ, ಆರ್ಥಿಕ, ಸಾಮಾಜಿಕ, ಕ್ರೀಡಾ ವಲಯಗಳಲ್ಲಿ ಒಂದಷ್ಟು ಸಾಧನೆ ಮಾಡಿದರು ಕೂಡ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಸಾಧನೆ ತೀರ ಕಳಪೆ. ನಮಗಿಂತ ಸಣ್ಣ ಪ್ರಮಾಣದ ರಾಷ್ಟ್ರಗಳು, ಅಷ್ಟೇನು ನೈಸರ್ಗಿಕ ಸಂಪನ್ಮೂಲಗಳು ಹೊಂದಿರದ ದೇಶಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಹೊಂದಿವೆ, ಆದರೆ ಹೇರಳವಾಗಿ ಭಾರತದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿದ್ದರು ಕೂಡ ಭಾರತ ಮಾತ್ರ ಆಮೆ ವೇಗದಲ್ಲಿ ಅಭಿವೃದ್ದಿಯಾಗುತ್ತಿದೆ. ಅಧಿಕಾರ ಚುಕ್ಕಾಣಿ ಹಿಡಿಯುವ ಸರಕಾರಗಳ ಬೇಜಾಬ್ದಾರಿ ಹಾಗೂ ನಿರ್ಲಕ್ಷ್ಯ ಮನೋಭಾವದಿಂದ ರಾಷ್ಟ್ರದಲ್ಲಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಇನ್ನು ಜ್ವಲಂತವಾಗಿವೆ. 21 ನೇ ಶತಮಾನ ಬಂದರು ಭಾರತದಲ್ಲಿನ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ, ಬಗೆಹರಿಯುವ ಸಾಧ್ಯತೆಯು ಕೂಡ ತೀರ ಕಡಿಮೆ ಎನ್ನಬಹುದು.

ರಾಜಕೀಯ ಪಕ್ಷಗಳು ಹಾಗೂ ಅವುಗಳ ಪದಾಧಿಕಾರಿಗಳು ಚುನಾವಣೆ ಸಂದರ್ಭಗಳಲ್ಲಿ ದೇಶವನ್ನು ಉದ್ದಾರ ಮಾಡುತ್ತೇವೆ, ದೇಶದಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡುತ್ತೇವೆ, ದೇಶವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತೆವೆಂದು ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ, ಆದರೆ ಅಧಿಕಾರ ಸಿಕ್ಕ ನಂತರ ದೇಶವು ಬೇಡ, ಮತ ಹಾಕಿದ ಮತದಾರನು ಬೇಡ ಅನ್ನೋ ಭಾವನೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ, ಜನಪ್ರತಿನಿಧಿಗಳಲ್ಲಿ ಆವರಿಸಿದೆ ಎಂದರೆ ನಮ್ಮ ದೇಶದಲ್ಲಿ ನಡೆಯುವಷ್ಟು ಭಯೋತ್ಪಾದನ ಚಟುವಟಿಕೆಗಳು , ವಿದ್ವಂಸಕ ಕೃತ್ಯಗಳು ಇಡೀ ವಿಶ್ವದಲ್ಲಿ ಬೇರೆಲ್ಲು ನಡೆದಿಲ್ಲ, ನಡೆಯಲು ಸಾಧ್ಯವಿಲ್ಲ !

ನಮ್ಮ ರಾಷ್ಟ್ರದ ಸಂಸತ್ತಿನ ಮೇಲೆಯು ಕೂಡ ಭಯೋತ್ಪಾದಕರಿಂದ ಗುಂಡಿನ ದಾಳಿಯಾಗಿದೆ, ಬೆಂಗಳೂರಿನ ಐಐಎಸ್ಸ್ಸಿ, ಮುಂಬೈನ ತಾಜ್ ಹೋಟೆಲ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಚೆನೈ, ಪುಣೆ, ಹೈದರಾಬಾದ್, ಅಹಮದಾಬಾದ್ ಸೇರಿದಂತೆ ರಾಷ್ಟ್ರದಲ್ಲಿ ಹಲವು ಕಡೆ ಭಯೋತ್ಪಾದನ ಚಟುವಟಿಕೆಗಳು ನಡೆದಿವೆ. ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಯ ಸಂದರ್ಭದಲ್ಲಿ ಉಗ್ರರ ಅಟ್ಟಹಾಸಕ್ಕೆ ಪೋಲಿಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಯೋಧ ಸಂದೀಪ್ ಉನ್ನಿಕೃಷ್ಣನ್ರಂತಹ ನಿಷ್ಠಾವಂತ ಅಧಿಕಾರಿಗಳನ್ನು ದೇಶ ಕಳೆದುಕೊಳ್ಳುವಂತಾಯಿತು. ಭಯೋತ್ಪಾದನ ಕೃತ್ಯಗಳಿಂದ ಸಾವಿರಾರು ಅಮಾಯಕ ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ದೇಶವನ್ನು ರಕ್ಷಿಸಲು ಸಾವಿರಾರು ಯೋಧರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ, ನೂರಾರು ಜನ ಅಂಗವಿಕಲರಾಗಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇನ್ನು ರಾಷ್ಟ್ರದಲ್ಲಿನ ಆರ್ಥಿಕ ಸ್ಥಿತಿಯನ್ನು ಹದೆಗೆಡಿಸಲು ಹಲವು ದೇಶಗಳು ಕುತಂತ್ರ ರೂಪಿಸಿ ಕೋಟ್ಯಾಂತರ ನಕಲಿ ನೋಟುಗಳನ್ನು ( ಖೋಟಾ ನೋಟು ) ತಯಾರಿಸಿ ಭಾರತ ದೇಶಕ್ಕೆ ರವಾನಿಸಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಲು ನಿರಂತವಾಗಿ ಕಾರ್ಯ ಚಟುವಟಿಕೆ ನಡೆಯುತ್ತಿದೆ, ಈ ವಿಚಾರದ ಬಗ್ಗೆ ಸರಕಾರಗಳು ಗಂಭೀರವಾಗಿ ಆಲೋಚಿಸಬೇಕಾಗಿತ್ತು, ಆದರೆ ಸರಕಾರಗಳ ನಿರ್ಲಕ್ಷ್ಯದಿಂದ ನಕಲಿ ನೋಟುಗಳು ದೇಶವನ್ನು ಪ್ರವೇಶಿಸಿವೆ, ನಕಲಿ ನೋಟುಗಳ ಹಾವಳಿಗೆ ಸರಕಾರ ಆದ್ಯಾವಾಗ ಕಡಿವಾಣ ಹಾಕುತ್ತೋ ಗೊತ್ತಿಲ್ಲ?
ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಭಾರತಕ್ಕೆ ಅಕ್ಕಪಕ್ಕದ ರಾಷ್ಟ್ರದ ಸಾವಿರಾರು ಜನರು ಕಾನೂನು ಉಲ್ಲಂಘಿಸಿ, ಅಕ್ರಮವಾಗಿ ವಲಸೆ ಬರುತ್ತಿದ್ದಾರೆ, ಇವರಲ್ಲಿ ಭಯೋತ್ಪಾಕರು ಇರಬಹುದು, ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಇವರು ಬಂದಿರಬಹುದು ? ಇಂತಹ ಅಕ್ರಮ ವಲಸಿಗರ ಸಂಖ್ಯೆ ದೇಶದಲ್ಲಿನ ಅಸ್ಸಾಂ, ಮೀಜೋರಾಂ, ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ, ಆದರು ನಮ್ಮ ಸರಕಾರ ತಟಸ್ಥ ಧೋರಣೆಯನ್ನು ಅನುಸರಿಸುತ್ತಿದೆ. ಇನ್ನು ಭಯೋತ್ಪಾದಕರಂತೆ ನಕ್ಸಲರು ಕೂಡ ದೇಶಕ್ಕೆ ಕಂಟಕವಾಗಿದ್ದಾರೆ ಅಮಾಯಕ ಜನರ ಮಾರಣ ಹೋಮ ಮಾಡುತ್ತಿದ್ದಾರೆ.

ದೇಶದಲ್ಲಿ ಇಂದಿಗೂ ಕೂಡ ತಿನ್ನಲು ಊಟವಿಲ್ಲದ ನೂರಾರು ಬಡ ಜನರು ಸಾವನ್ನಪ್ಪುತ್ತಿದ್ದಾರೆ, ಪೌಷ್ಠಿಕ ಆಹಾರ ಸಿಗದೆ ಬಡ ಮಕ್ಕಳು ಹುಟ್ಟಿದ ಕೆಲ ದಿನಗಳಲ್ಲೇ ಇಹಲೋಕ ತ್ಯಜಿಸುತ್ತಿದ್ದಾರೆ, ಆರೋಗ್ಯ ಸೇವೆಗಳು ಸಿಗದೆ ಬಡವರು ಅನೇಕ ರೋಗಗಳಿಗೆ ತುತ್ತಾಗಿ ಕೊನೆ ಉಸಿರೆಳೆಯುತ್ತಿದ್ದಾರೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಬ್ಯಾಂಕ್ಗಳಿಗೆ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಹಾದಿಯಿಡಿಯುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಹೋಗಿದೆ, ದಿನೇ ದಿನೇ ಹೆಚ್ಚುತ್ತಿರುವ ಡೋನೆಷನ್ ಹಾವಳಿಯಿಂದ ಬಡ ಮಕ್ಕಳಿಗೆ ಉನ್ನತ ವ್ಯಾಸಾಂಗ ಮರಿಚಿಕೆಯಾಗಿದೆ. ಹೀಗೆ ಭಾರತ ಹತ್ತು ಹಲವು ಸಮಸ್ಯೆಗಳಿಂದ ತತ್ತರಿಸುತ್ತಿದ್ದರೂ , ಜನಪ್ರತಿನಿಧಿಗಳು ದೇಶದ ಬಗ್ಗೆ ಕಿಂಚೆತ್ತು ಕಾಳಜಿ ತೋರಿಸದೆ ಉದಾಸೀನವಾಗಿ ವರ್ತಿಸುತ್ತಿದ್ದಾರೆ.
ಭಾರತ ದೇಶಕ್ಕೆ ಸವಾಲಾಗಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ಅವಶ್ಯಕವಾದ ಕಾನೂನು ಕ್ರಮಗಳನ್ನು ಕೈಗೊಳ್ಳದೆಯಿರುವುದು ನಮ್ಮ ಸರಕಾರಗಳ ನಿರ್ಲಕ್ಷ್ಯಕ್ಕೆ ಒಂದು ಸಣ್ಣ ಉದಾಹರಣೆ, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾರು ಹೋಗಿರುವ ಸರಕಾರಗಳು ಭಯೋತ್ಪಾದರ ವಿರುದ್ದ ಮೃದು ಧೋರಣೆ ತಾಳುತ್ತಿದೆ, ಸಾವಿರಾರು ಅಮಾಯಕರ ಪ್ರಾಣ ತೆಗೆದ ನರ ರಾಕ್ಷಸರನ್ನು ರಕ್ಷಿಸುವುದಾರರು ಯಾರನ್ನು ಉದ್ದಾರ ಮಾಡಲು ಅನ್ನುವುದೆ ಯಾರಿಗೂ ಅರ್ಥವಾಗದ ಪ್ರಶ್ನೆ?

ಅಕ್ರಮ ವಲಸಿಗರ ಸಂಖ್ಯೆ ದೀನೆ ದೀನೆ ಹೆಚ್ಚುತ್ತಿದ್ದರು ಸಕರ್ಾರಗಳು ಯಾಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ರಾಷ್ಟ್ರದ ಗಡಿಭಾಗಗಳಲ್ಲಿ ತಂತಿ ಬೇಲಿ ವ್ಯವಸ್ಥೆ ಮಾಡಿ ದೇಶವನ್ನು ರಕ್ಷಣೆ ಮಾಡಬೇಕೆಂಬ ಸಣ್ಣ ಜ್ಞಾನ ನಮ್ಮ ನಮ್ಮನ್ನಾಳುವವರಿಗೆ ಇಲ್ಲ ? ದಿನ ನಿತ್ಯ ಅಪೌಷ್ಠಿಕತೆಯಿಂದ ನೂರಾರು ಮಕ್ಕಳು ದಾರುಣವಾಗಿ ಸಾವನ್ನಪ್ಪುತ್ತಿದ್ದರು ಸರಕಾರದ ಕಣ್ಣಿಗೆ ಏಕೆ ಕಾಣುತ್ತಿಲ್ಲ? ಸಾವಿರಾರು ಸಮಸ್ಯೆಗಳಿಂದ ಸೊರಗುತ್ತಿರುವ ಭಾರತ ಉದ್ದಾರವಾಗಬೇಕಾದರೆ ನಮ್ಮ ಸರಕಾರಗಳು ತಮ್ಮ ಸ್ವಪ್ರತಿಷ್ಠೆ, ಸ್ವಜನ ಪಕ್ಷಪಾತ, ಸ್ವಾರ್ಥ, ದುರಾಸೆಗಳನ್ನು ಪಕ್ಕಕ್ಕಿಟ್ಟು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿ, ದೇಶದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡರೆ ಮಾತ್ರ ಭಾರತದಲ್ಲಿನ ಸಮಸ್ಯೆಗಳು ಬಗೆಹರಿದು ಭಾರತ ದೇಶ ಉದ್ದಾರವಾಗುತ್ತದೆ. ಭಾರತ ವೇಗವಾಗಿ ಅಭಿವೃದ್ದಿಯಾಗಬೇಕಾದರೆ ಸರಕಾರದ ಜೊತೆಗೆ ಮತದಾರನು ಎಚ್ಚೆತ್ತುಕೊಳ್ಳಬೇಕು, ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಕಳಂಕ ರಹಿತ ಜನಪ್ರತಿನಿಧಿಗಳ ಕೈಗೆ ಆಡಳಿತ ಸಿಕ್ಕರೆ ಮಾತ್ರ ಸಾಧ್ಯ.
ಒಳ್ಳೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿರುವುದರಿಂದ ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ತೋರಿಸುವ ಆಸೆ, ಆಮಿಷಗಳಿಗೆ ಬಲಿಯಾಗಿ ಅವರು ನೀಡುವ ಹಣ, ಹೆಂಡ, ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಪ್ರಾಮಾಣಿಕವಲ್ಲದ ಅಭ್ಯರ್ಥಿಗೆ ಮತ ಹಾಕುವ ಮತದಾರ ಎಚ್ಚೆತ್ತುಕೊಳ್ಳಬೇಕು.

10 ರೂಪಾಯಿ ವಸ್ತುವನ್ನೆನಾದರು ಕೊಳ್ಳ ಬೇಕಾದರೂ ಹತ್ತಾರು ಬಾರಿ ಆಲೋಚಿಸಿ ವಸ್ತುವನ್ನು ಖರೀದಿಸುತ್ತವೆ, ಆದರೆ ದೇಶವನ್ನು ಮುನ್ನಡೆಸುವ ನಾಯಕರನ್ನು ಆಯ್ಕೆ ಮಾಡುವಾಗ ದಾರಿ ತಪ್ಪುತ್ತೇವೆ. ಉತ್ತಮ, ಯೋಗ್ಯ, ಪ್ರಾಮಾಣಿಕ, ನಿಸ್ವಾರ್ಥ ವ್ಯಕ್ತಿ ಚುನಾವಣೆಯಲ್ಲಿ ಆಯ್ಕೆಯಾದರೆ ಮಾತ್ರ ನಮ್ಮ ದೇಶ ಇತರೆ ದೇಶಗಳಂತೆ ಅಭಿವೃದ್ದಿಯಾಗುತ್ತದೆಂದು ಮತದಾರ ಅರಿಯಬೇಕು. ದೇಶದ ಅಭಿವೃದ್ದಿಗೆ ಸಹಕಾರಿಯಾಗುವ ಅಭ್ಯಥರ್ಿಯನ್ನು ಆಯ್ಕೆ ಮಾಡಬೇಕು ಆ ಮೂಲಕ ಪ್ರಜಾ ಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು.

0 comments:

Post a Comment