ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:54 PM

ನಮ್ಮೂರ್ ರಸ್ತೆ

Posted by ekanasu

ಸಾಹಿತ್ಯ

ಮಾಣಿ- ಮೈಸೂರ್ ಹೆದ್ದಾರಿಗೆಂದು
ಸುಳ್ಯ ರಸ್ತೆ ಅಗ್ದಿದ್ದಾಯ್ತು
ಮಂತ್ರಿ ಬರ್ತಾರೆಂದಂದ್ಕೊಂಡು
ಹೊಂಡಕೆ ಜಲ್ಲಿ ತುಂಬಿಸಿದಾಯ್ತು

ಜಲ್ಲಿ ಕಲ್ಮೇಲೆ ಮಣ್ಣ ತುಂಬಿಸಿ
ಜನಗಳ ಬಾಯ್ಗೆ ಮಣ್ಣ್ ಹಾಕ್ಬಿಟ್ರು
ಹೋಂಡಾ ಏರಿ ಸವಾರಿ ಹೊರಟವರು
ಮೈಮೇಲೆಲ್ಲಾ ಕೆಸರೆರಚಿಬಿಟ್ರು
ಅಗಲೀಕರಣಕ್ಕೆ ಬಿಡುಗಡೆಯಾಯ್ತು ಅನುದಾನ
ಜನಗಳಿಗ್ಯಾಕೋ ತುಂಬಾ ಅನುಮಾನ
ಬಿಡುಗಡೆಯಾದದೆಷ್ಟೋ. . . ?
ಮೇಜಿನ ಕೆಳಗೆ ಕಂತೆ ಹೋದುದೆಷ್ಟೋ. ..?

ಅಗಲೀಕರಣದ ಮಂತ್ರ ಜಪಿಸಿದ್ದಾಯ್ತು
ಶಂಖ ಊದಿಯೂ ಆಯ್ತು
ತಮಟೆ ಬಾರಿಸಿಯಾಯ್ತು
ರೋಡಲ್ಲಿ ಹೋಗೋ ಜನಗಳಿಗೆಲ್ಲ ಕೆಸರಾಮೃತದಭಿಷೇಕವಾಯ್ತು

ಟ್ರಾಪಿಕ್ ಜಾಮ್ಗೆ ಪರಿಹಾರಾನೇ ಇಲ್ಲ
ಬ್ರೆಡ್ಡು ಜಾಮ್ಗೆ ಹಾರಾಡ್ತಾರೆ ಎಲ್ಲ
ನೋಡೊರೆ ಇಲ್ಲ ಕೇಳೋರೆ ಇಲ್ಲ
ಅಯೋಮಯ ಇಲ್ಲಿ ಎಲ್ಲ

- ಅಕುಮಾ ಸುಳ್ಯ


0 comments:

Post a Comment