ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:19 PM

ಬಂತು ದೀಪಾವಳಿ

Posted by ekanasu


ದೀಪಗಳ ಮೇಳ, ಸೊಡರುಗಳ ಹಬ್ಬ ದೀಪಾವಳಿ
ಬಾಳಲಿ ಬೆಳಕು, ಮನದಲಿ ಆನಂದ ತರಲಿ ದೀಪಾವಳಿ
ಭೂಮಿಯ ರಂಗನ್ನು ಈ ರಾತ್ರಿ ನೋಡಿ
ನಕ್ಷತ್ರಗಳನ್ನು ನಾಚಿಸುವಂತಿದೆ ದೀಪಗಳ ಮೋಡಿ

ಈ ರಮ್ಯಾ ರಾತ್ರಿಯನು ಹೇಗೆ ವರ್ಣಿಸಲಿ
ಬೆಳಕಿನ ಹಬ್ಬ! ಹೇಗೆ ಬಣ್ಣಿಸಲಿ

ಮಿಂಚು ಹುಳುಗಳ ಮಿಂಚೋ? ಅಥವಾ
ಆಕಾಶದಲಿ ರಂಗುರಂಗಿನ ನಕ್ಷತ್ರಗಳ ಪುಡಿ...!

ಗೀತೆಗಳು ತುಟಿಯಂಚಲಿ, ಚಪ್ಪಾಳೆ ಕೈಯಂಚಲಿ
ಬಾಳಲಿ ಬೆಳಕು, ಮನದಲಿ ಆನಂದ ತರಲಿ ದೀಪಾವಳಿ

- ಜಬೀವುಲ್ಲಾ ಖಾನ್0 comments:

Post a Comment