ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಳ್ವಾಸ್ ನುಡಿಸಿರಿ 2012ರ ಸಮಾರೋಪ ಸಮಾರಂಭ ಆರಂಭಗೊಂಡಿದ್ದು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಗೆ ಈ ಬಾರಿಯ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ.

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ಕಲೆ, ಸಾಹಿತ್ಯ, ಶಿಕ್ಷಣ, ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಅತಿ ವಂದನೀಯ ಡಾ.ಅಲೋಷಿಯಸ್ ಪಾವ್ಲ್.ಡಿ.ಸೋಜ,(ಕನ್ನಡ ಶಿಕ್ಷಣ).ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಸಾಣೆಹಳ್ಳಿ(ಕನ್ನಡ ಸಾಂಸ್ಕೃತಿ ಸೇವೆ). ಡಾ.ಸಿ.ಪಿ ಕೃಷ್ಣ ಕುಮಾರ್(ಸಾಹಿತ್ಯ). ಗಿರೀಶ್ ಕಾಸರವಳ್ಳಿ,(ಚಲನಚಿತ್ರ). ಡಾ.ಸಿದ್ಧಲಿಂಗಯ್ಯ,(ಸಾಹಿತ್ಯ). ಶ್ರೀಮತಿ ವೈಜಯಂತಿ ಕಾಶಿ (ನೃತ್ಯ ಮತ್ತು ಕಿರುತೆರೆ). ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ,(ಯಕ್ಷಗಾನ). ಡಾ.ವಿಷ್ಣುನಾಯ್ಕ(ಸಾಹಿತ್ಯ). ಶ್ರೀಮತಿ ಸುಭದ್ರಮ್ಮ ಮನ್ಸೂರು(ರಂಗಭೂಮಿ). ಲೋಕಶಿಕ್ಷಣ ಟ್ರಸ್ಟ್,ಬೆಂಗಳೂರು-ಹುಬ್ಬಳ್ಳಿ,(ಪ್ರಕಾಶನ) ಇವರಿಗೆ “ಆಳ್ವಾಸ್ ನುಡಿಸಿರಿ-2012″ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ರೂ.10 ಸಾವಿರ ನಗದು ,ಪ್ರಶಸ್ತಿ ಪತ್ರ ಹಾಗು ಸ್ಮರಣಿಕೆಯನ್ನೊಳಗೊಂಡಿತ್ತು. ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ ರೂವಾರಿ ಡಾ.ಎಂ.ಮೋಹನ ಆಳ್ವ, ಸಮ್ಮೇಳನಾಧ್ಯಕ್ಷ ಕೆ.ಎಸ್.ನಿಸಾರ್ ಅಹಮದ್, ಡಾ.ಏರ್ಯಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು.
ಕಿಶೋರ್ ಅರಸಿನಮಕ್ಕಿ.

0 comments:

Post a Comment