ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ: ಕಿಶೋರ್ ಬಿ.ಸಿ.ರೋಡ್

ಬಂಟ್ವಾಳ: ಗ್ರಾಮದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಬೇಕಾದದ್ದು ಆ ಗ್ರಾಮದ ಗ್ರಾಮ ಪಂಚಾಯತ್ನ ಆದ್ಯ ಕರ್ತವ್ಯ. ಆದರೆ ಗ್ರಾಮ ಪಂಚಾಯತ್ ಸದಸ್ಯೆಯನ್ನೇ ಮೂಲಭೂತ ಸೌಲಭ್ಯದಿಂದ ವಂಚಿತಗೊಳಿಸಿದ ವಿಲಕ್ಷಣ ಘಟನೆಯೊಂದು ತಾಲೂಕಿನ ಇಡ್ಕಿದು ಗ್ರಾಮದಿಂದ ವರದಿಯಾಗಿದೆ. ಇಲ್ಲಿನ ಗ್ರಾಮಪಂಚಾಯತ್ ಸದಸ್ಯೆ ರೇವತಿ ಎಂಬವರೇ ಗ್ರಾಮ ಪಂಚಾ ಯತ್ನ ಏಕಪಕ್ಷೀಯ ನಿರ್ಧಾರಕ್ಕೆ ಬಲಿಯಾದವರು.
ಏನಿದು ಪ್ರಕರಣ?: ಇಡ್ಕಿದು ಗ್ರಾಮದ ಪಂಚಾಯತ್ ಸದಸ್ಯೆ ರೇವತಿ ಇಲ್ಲಿನ ದೇವಸ್ಯದ 95/1ಬಿ4ರ 0.05 ಎಕ್ರೆ ಜಮೀನಿನಲ್ಲಿ ರಾಜೀವಗಾಂಧಿ ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಶಾಶ್ವತವಾಗಿ ವಾಸಿಸಿಕೊಂಡು ಬರುತ್ತಿದ್ದಾರೆ. ತನ್ನ ಹೆಸರಿನಲ್ಲಿಯೇ ಗ್ರಾ.ಪಂ.ಗೆ ಮನೆತೆರಿಗೆ ಪಾವತಿಸುತ್ತಿದ್ದು, ಪಡಿತರ ಚೀಟಿ, ಚುನಾವಣಾ ಆಯೋಗದಿಂದ ಗುರುತಿನ ಚೀಟಿ, ಮನೆಸಂಖ್ಯೆ(3-183ಎ)ಯನ್ನು ಹೊಂದಿದ್ದಾರೆ.

ಇಷ್ಟೆಲ್ಲಾ ಹೊಂದಿದ್ದರೂ ಈ ಮನೆಗೆ ವಿದ್ಯತ್ ಸಂಪರ್ಕ ನೀಡಲು ಮಾತ್ರ ಗ್ರಾಮಪಂಚಾಯತ್ ಸತಾಯಿ ಸುತ್ತಿದೆ. ತನ್ನ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ರೇವತಿ ಗ್ರಾಮಪಂಚಾಯತ್ನಿಂದ ನಿರಾಪೇಕ್ಷಣಾ ಪತ್ರ ಪಡೆದು ಅಗತ್ಯ ದಾಖಲೆಗಳೊಂದಿಗೆ ವಿಟ್ಲ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು. ಇನ್ನೇನು ಮೆಸ್ಕಾಂನಿಂದ ಮನೆಗೆ ವಿದ್ಯುತ್ ಸಂಪರ್ಕ ನೀಡಬೇಕು ಎನ್ನುವಷ್ಟರಲ್ಲೇ ಪಂಚಾಯತ್ ತನ್ನ ನಿರ್ಧಾರ ಬದಲಿಸಿದೆ. ರೇವತಿಯವರಿಗೆ ಪೂರ್ವ ಸೂಚನೆ ನೀಡದೆ ನಿರಕ್ಷೇಪಣೆಯನ್ನು ತಡೆಹಿಡಿಯುವಂತೆ ಸೂಚಿಸಿ ಗ್ರಾಮಪಂಚಾಯತ್ ವಿಟ್ಲ ಮೆಸ್ಕಾಂಗೆ ಲಿಖಿತ ಸೂಚನೆ ನೀಡಿದೆ. ಈ ಬಗ್ಗೆ ರೇವತಿ ಪಂಚಾಯತ್ನಿಂದ ಕಾರಣ ಕೇಳಿದರೆ ಜಾಗದ ತಕರಾರಿನಿಂದಾಗಿ ನಿರಪೇಕ್ಷಣಾ ಪ್ರತವನ್ನು ತಡೆಹಿಡಿಯಲಾಗಿದೆ ಎಂದು ಸಿದ್ದ ಉತ್ತರ ನೀಡಿದೆ.

ರಾಜೀವಗಾಂಧಿ ಯೋಜನೆಯಡಿ ಮನೆ ನಿರ್ಮಿಸಲು, ಮನೆಸಂಖ್ಯೆ ನೀಡಲು ಅಡ್ಡಿಯಾಗದ ಜಾಗದ ತಕರಾರು ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣಾ ಪ್ರತ ನೀಡಲು ಯಾಕೆ ತೊಡಕಾಗುತ್ತಿದೆ? ಎನ್ನುವುದು ರೇವತಿಯವರ ಪ್ರಶ್ನೆ. ಗ್ರಾಮಪಂಚಾಯತ್ನ ಅಭಿವೃದ್ದಿ ಅಧಿಕಾರಿ ನವೀನ್ ಅವರ ಏಕಪಕ್ಷೀಯ ಹಾಗೂ ರಾಜಕೀಯ ದುರುದ್ದೇಶ ಪೂರಿತ ನಿರ್ಧಾರದಿಂದಾಗಿ ರೇವತಿಯವರ ಕುಟುಂಬ ವೇ ಕಂಗಲಾಗಿದೆ. ವಿದ್ಯುತ್ ಬೆಳಕಿಗಾಗಿ ಹಂಬಲಿಸುತ್ತಿರುವ ಕುಟುಂಬಕ್ಕೆ ಪಿಡಿಓ ನವೀನ್ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾನೆ.
ಉಚ್ಛ ನ್ಯಾಯಾಲಯ ಏನು ಹೇಳುತ್ತದೆ?
2008ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ರಾಜ್ಯ ಉಚ್ಛನ್ಯಾಯಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಅದರ ಪ್ರಕಾರ ಮನೆ ಸಂಖ್ಯೆ ಇರಲಿ ಅಥವಾ ಇಲ್ಲದೇ ಇರಲಿ ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ವಿದ್ಯತ್ ಸಂಪರ್ಕ ನೀಡಲು ಈಗಾಗಲೇ ನಿರಾಪೇಕ್ಷಣಾ ಪ್ರತ ನೀಡಿ ಮತ್ತೆ ತಡೆಹಿಡಿದಿರುವ ಗ್ರಾಮಪಂಚಾಯತ್ನ ನಿರ್ಧಾರದ ಹಿಂದೆ ಪ್ರಬಲ ರಾಜಕೀಯ ಷಡ್ಯಂತ್ರ ಕೆಲಸ ಮಾಡುತ್ತಿದೆ.

0 comments:

Post a Comment