ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ 28 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಮಳೆ ಸಣ್ಣಗೆ ಆರಂಭವಾಗಿ ಸಂಜೆಯ ಹೊತ್ತಿಗೆ ಧಾರಾಕಾರವಾಗಿ ಸುರಿಯಿತು. ಸಿಟೌಟ್ನ ಹೊರಗೆ ಕುಳಿತಿದ್ದ ಇಂದ್ರಸೇನ್ ಮಗನ ಬರುವಿಕೆಗಾಗಿ ಕಾದು ಕುಳಿತಿದ್ದರು. ಮನೆಯಲ್ಲಿಯೇ ಇದ್ದು ಅಭ್ಯಾಸವಾದಾಗ ಓದುವುದನ್ನು ಹವ್ಯಾಸಿಸಿಕೊಂಡವರು. ಒಂದಷ್ಟು ಪುಸ್ತಕಗಳಿಗಾಗಿ ವ್ಯಯಿಸುವುದನ್ನು ಬಿಡರು. ಜೊತೆಗೆ ಹಳ್ಳಿಯ ವಾತಾವರಣದಲ್ಲಿ ನಿವೃತ್ತಿಯ ಜೀವನ ಕಳೆಯಲು ಬಯಸಿದರೂ ಓದುವುದು, ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಬರುವುದು, ವಾಣಿಶ್ರೀಯವರಿಗೆ ಒಂದಷ್ಟು ಪುಸ್ತಕಗಳನ್ನು ಓದಲು ತರುವುದು ಅವರ ಇಷ್ಟವಾದ ಕೆಲಸವಾಗಿರುತ್ತಿತ್ತು. ನಿಖಿಲ್ ಸಂಜೆ ಬೇಗ ಬರುವುದಾಗಿ ಹೇಳಿದ್ದನಾದ್ದರಿಂದ ಆತನ ಕಾರಿಗಾಗಿ ಕಾಯುತ್ತಿದ್ದರು.

ಅನಿರೀಕ್ಷಿತವೆಂಬಂತೆ ಸುರಿದ ಮಳೆ ಹೊರಗೆ ಹೋಗುವುದನ್ನು ತಪ್ಪಿಸಿದಾಗ ಅನಿವಾರ್ಯವಾಗಿ ಒಳಗೆ ಬಂದರು.
ಮೇಜರ್ನ ನೆನಪಿಗಾಗಿ ಅವನ ಮನೆಯನ್ನು ಖರೀದಿಸಿ ಅದನ್ನು ಸ್ಮಾರಕವನ್ನು ಮಾಡುವಂತೆ ಸೂಚಿಸಿದವರೇ ಇಂದಸೇನರು. ನಿಖಿಲ್ ಬೆಂಗಳೂರಿನಲ್ಲೊಂದು ಮನೆಯನ್ನು ಖರೀದಿಸಿದ ಸುದ್ದಿ ತಿಳಿಯುತ್ತಲೇ ಅವನನ್ನು ವಿಚಾರಿಸಿದರು. ಅಶುತೋಶ್ ಏನೂ ತಿಳಿಯದ ಹುಡುಗ ತಂದೆಯ ಆಸ್ತಿಯನ್ನು ಮಾರಾಟ ಮಾಡುವುದನ್ನು ಸಹಿಸದಾದರು. ನಿಖಿಲ್ ಕೂಡ ಅದನ್ನು ತನ್ನ ವ್ಯವಹಾರಕ್ಕೆ ಬಳಸಿಕೊಳ್ಳುವುದಕ್ಕೆ ತಡೆ ಹಾಕಿದಾಗ ಅಲ್ಲಿಯವರೆಗೂ ಆ ಮನೆಯ ಬೆಲೆ ಅವನಿಗೂ ತಿಳಿದಿರಲಿಲ್ಲ. ದೇಶಸೇವೆಯಲ್ಲಿ ಪ್ರಾಣವನ್ನೇ ತ್ಯಾಗ ಮಾಡಿದ ತನ್ನ ಗೆಳೆಯನ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಇಂತೊಂದು ಔದಾರ್ಯವನ್ನು ತೋರಿಸಲೇ ಬೇಕಿತ್ತು.

ನಿಖಿಲ್, ಅವರು ಮಾಡಿರೊ ಆ ಮಹತ್ ಕಾರ್ಯಕ್ಕೆ ಯಾರಿಂದಲೂ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲ. ಅದನ್ನು ನೀನು ವ್ಯವಹಾರಕ್ಕೆ ಬಳಸಿಕೊಳ್ಳೋದು ಸರಿ ಅನ್ಸೋದಿಲ್ಲ. ಅದಕ್ಕೆಂತ ಅವರ ಹೆಸರಿನಲ್ಲೇ ಏನಾದರೊಂದು ಸ್ಮಾರಕ ನಿರ್ಮಿಸಿದರೆ ಹೇಗೆ? ಮಗ ಮನೆ ಖರೀದಿಸಿದ ಬಗೆ ಹೇಳಿದಾಗ ಆತಂಕಿತರಾಗಿ ನಯವಾಗಿ ಮಗನಿಗೆ ಹೇಳಿ ಅವನನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.

ಡ್ಯಾಡ್ ಹೇಳಿದ ಮೇಲೆ ಎದುರಾಡಲಾರ. ಅಶುತೋಶ್ ತನ್ನ ಮೇಲೆ ಗೆಳೆತನಕ್ಕೆ ಬಿದ್ದು ಈ ರೀತಿಯ ನಿರ್ಧಾರ ತೆಗೆದುಕೊಂಡನೇನೊ ಅನ್ನುವ ಪಾಪ ಪ್ರಜ್ಞೆ ಅವನನ್ನು ಕಾಡಿತು. ತನಗೂ ವ್ಯವಹಾರದ ಮಧ್ಯೆ ಮುಳುಗಿದಾಗ ಇಂತಹ ಸಣ್ಣ ವಿಷಯ ತಿಳಿಯದೆ ಹೋಯಿತಲ್ಲಾ? ಎಂದು ಪರಿತಪಿಸುವಂತಾಯಿತು.
ಈ ಮಳೆ ಬಿಡುವ ಸೂಚನೆ ಕಾಣಿಸ್ತಿಲ್ಲ. ನೀವು ಹೊರಗೆ ಹೋಗೋದನ್ನು ಕ್ಯಾನ್ಸಲ್ ಮಾಡಿ ವಾಣಿಶ್ರೀಯವರು ಗಂಡನಿಗೆ ಅಂದಾಗ ಅವರು ಮೊದಲೇ ನಿರ್ಧಾರ ತೆಗೆದುಕೊಂಡವರಂತೆ ತಮ್ಮ ಪುಸ್ತಕಗಳನ್ನು ಟೇಬಲ್ ಮೇಲೆ ಇಟ್ಟು ಬಟ್ಟೆ ಬದಲಾಯಿಸಿ ಬರುವಷ್ಟರಲ್ಲಿ ನಿಖಿಲ್ನ ಕಾರು ಬಂದು ನಿಂತಿತು.

ಆ ಜಡಿ ಮಳೆಯಲ್ಲಿ ಮಗ ಡ್ರೈವ್ ಮಾಡಿಕೊಂಡು ಬಂದಿರುವುದನ್ನು ಇಷ್ಟಪಡಲಾರರು. ಒದ್ದೆಯಾಗುತ್ತಲೇ ಮನೆಯೊಳಗೆ ಹಾರಿ ಬಂದ ಮಗನಿಗೆ ಟವಲ್ ನೀಡುತ್ತಾ, ಮಳೆ ಬಿಡುವವರೆಗೂ ಕಾಯಬಹುದಿತ್ತಲ್ವಾ? ಅಂದರು.
ಟವಲನ್ನು ತೆಗೆದುಕೊಳ್ಳುತ್ತಾ ನಿಖಿಲ್, ಕಾಯಬಹುದಿತ್ತು, ಆದರೆ ಎರಡು ಲಾರಿಗಳಲ್ಲಿ ಬಂದಿರೋ ಕಚ್ಚಾ ವಸ್ತುಗಳು ಅನ್ಲೋಡ್ ಅಗದೇ ಹಾಗೇ ಉಳಿದಿತ್ತು. ಅವುಗಳನ್ನು ಬಿಟ್ಟು ಬರುವ ಹಾಗಿರಲಿಲ್ಲ. ಹಾಗಾಗಿ ಸ್ಟೋರ್ ಕೀಪರ್ಗೆ ವಿಷಯ ತಿಳಿಸಿ ನಮ್ಮ ಗಾರ್ಮೆಂಟ್ ಸೆಕ್ಷನ್ನಲ್ಲಿರೊ ವರ್ಕ್ ಶಾಪ್ ಬಳಿ ಲಾರಿಗಳನ್ನು ನಿಲ್ಲಿಸಲು ಸೂಚಿಸಿ ಬಂದೆ. ಅಲ್ಲಿಂದ ಬರೋವಷ್ಟರಲ್ಲಿ ಇಷ್ಟು ಹೊತ್ತಾಯ್ತು ಸಮಜಾಯಿಷಿ ನೀಡುವಂತೆ ಹೇಳಿದಾಗ ಇಂದ್ರಸೇನ್ರು ಅಲ್ಲಿಗೆ ಬಂದರು.

ನೀನು ಇಷ್ಟೊಂದು ಮಳೆಯಲ್ಲಿ ನೆಂದುಕೊಂಡು ಬರಬೇಕಾಗಿರಲಿಲ್ಲ. ಹೊರಗೆ ಹೋಗೋ ಮೂಡ್ನಲ್ಲಿರಲಿಲ್ಲ ನಾನು ಅಂದರು.
ಅದ್ಯಾಕೆ ಡ್ಯಾಡ್, ಕಾರಿನಲ್ಲಿ ಹೋಗಿ ಬರೋದಿಕ್ಕೂ ಇಷ್ಟೊಂದು ಆಲೋಚಿಸ್ತಿರಲ್ವಾ? ಮಗ ತಗಾದೆ ತೆಗೆದಾಗ ನಕ್ಕರು. ಅವನು ಹೇಳಿದ್ದೇನೊ ಸರಿ. ಆದರೆ ಅಂತಹ ಅನಿವಾರ್ಯತೆ ಏನಿಲ್ಲ. ಪುಸ್ತಕಗಳೂ ಒದ್ದೆಯಾದವೆಂಬ ಎಚ್ಚರಿಕೆಯಿತ್ತು ಅವರಲ್ಲಿ.
ಬೇಡ ಅನಿಸ್ತು. ಬಿಡು, ನಾಳೆ ನೋಡೋಣ, ನೀನು ಬಟ್ಟೆ ಬದಲಾಯಿಸಿ ಬಾ. ಮಾತಾನಾಡೋದಿದೆ ಮಗನನ್ನು ಗೆಳೆಯನಂತೆ ಆವರಿಸಿದವರು ಮಾತಿಗಾಗಿ ಆಹ್ವಾನಿಸಿದರು.

0 comments:

Post a Comment