ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:04 PM

ವಿಶ್ವ ರೂಪ ದರ್ಶನ

Posted by ekanasu

ಪ್ರಾದೇಶಿಕ ಸುದ್ದಿ - ಬಂಟ್ವಾಳ ವರದಿ
ಮುಂಜಾನೆಯ ಹಕ್ಕಿಗಳ ಇಂಪಾದ ಚಿಲಿಪಿಲಿಯ ಕಲರವ, ತನ್ಮನೆಯ ತಂಗಾಳಿಯೊಂದಿಗೆ ಚುಮು-ಚುಮು ಚಳಿ, ಇನ್ನೊಂದೆಡೆ ಜೀವನದಿ ನೇತ್ರಾವತಿ ವೈಯಾರದಿಂದ ಹರಿಯುವ ಜುಳು-ಜುಳುವಿನ ನೀನಾದ ಮತ್ತೊಂದೆಡೆ ಭಜನೆಯ ಗಾನ ಲಹರಿಯ ಮದ್ಯೆ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವರ ವಿಶ್ವ ರೂಪ ದರ್ಶನ ನೆರದ ಭಕ್ತ ಜನರ ಕಣ್ಮನ ಸೆಳೆಯಿತು.

ಕಾರ್ತಿಕ ಶುದ್ದ ಪಂಚಮಿಯ ರವಿವಾರ ಪ್ರಾತಃ ಕಾಲ ನಾಲ್ಕರ ಬ್ರಾಹ್ಮೀ ಮೂರ್ತದಲ್ಲಿ ಲೋಕಕಲ್ಯಾಣಕ್ಕಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಾಲಯದಲ್ಲಿ 11ನೇ ವರ್ಷದ ವಿಶ್ವರೂಪ ದರ್ಶನಕ್ಕೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ನೆರೆದ ಸಮಸ್ತ ಭಕ್ತರು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಜೋಡಿಸಲಾದ ಹಣತೆಯನ್ನು ಏಕಕಾಲದಲ್ಲಿ ಬೆಳಗಿಸಿ ಕೃತಾರ್ಥರಾದರು. ದೇವಳದ ಪ್ರವೇಶದ್ವಾರದಲ್ಲಿ ಹಣತೆಯೊಂದಿಗೆ ಪುಷ್ಪಾಲಂಕೃತಗೊಂಡ ಒಂಕಾರ,ವೀಣೆ, ನರ್ತನ ಗಣಪತಿ ಹೊರಾಂಗಣದ ಸುತ್ತ ಹಣತೆಯಿಂದಲೇ ರಚಿಸಲಾದ ಶಂಕ-ಚಕ್ರ-ಗದಾ-ಪದ್ಮ ನೋಡುಗರ ಕಣ್ಣಿಗೆ ಮುದ ನೀಡಿದವು.

ದೇವಳದ ಒಳಾಂಗಣ, ಶ್ರೀ ದೇವರ ಗರ್ಭ ಗುಡಿ ಹಾಗೂ ಮಲ್ಲಗೆ ಪ್ರಿಯ ಶ್ರೀ ತಿರುಮಲ ವೆಂಕಟರಮಣ ದೇವರನ್ನು ಹೂವಿನಿಂದ ವಿಶೇಷಾಲಂಕಾರಗೊಳಿಸಲಾಗಿತ್ತು. ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಕಾಕಾಡಾರತಿ, ಜಾಗರ ಪೂಜೆಯ ಬಳಿಕ ಸಮಸ್ತ ಭಜಕರಿಗೂ ಶ್ರೀ ದೇವರ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಯಿತು.
30ಸಾವಿರಕ್ಕೂ ಮಿಕ್ಕಿ ಹಣತೆಯನ್ನು ದೇವಳದ ಒಳಾಂಗಣ, ಹೊರಾಂಗಣ, ಮುಂಬಾಗದ ಕಾಶೀಮಠ ಸಹಿತ ರಸ್ತೆಯುದ್ದಕ್ಕೂ ಆಕರ್ಷಕವಾಗಿ ಹಣತಯನ್ನು ಜೋಡಿಸಲಾಗಿತ್ತು.
ಮುಂಜಾನೆಯಿಂದಲೇ ಮಕ್ಕಳು ,ವೃದ್ದರು, ಹೆಂಗಳೆಯರು ಸೇರಿದಂತೆ ಊರ ಪರಊರಿನಿಂದ ಭಗವದ್ಬಕ್ತರು ಸಹಸ್ರಾರು ಸಂಖೆಯಲ್ಲಿ 7ಗಂಟೆಯವರೆಗೂ ಆಗಮಿಸಿ ಶ್ರೀದೇವರ ವಿಶ್ವರೂಪದರ್ಶನ ಪಡೆದರು. ದೇವಳದ ಆಡಳಿತ ಮೊಕ್ತೇಸರ, ಮೊಕ್ತೇಸರರು ಹಾಗೂ ಶಾಸಕ ರಮನಾಥ ರೈ,ಜಿ.ಪಂ,ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ: ಕಿಶೋರ್ ಪೆರಾಜೆ.

0 comments:

Post a Comment