ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನುಡಿಸಿರಿಯಲ್ಲಿ ಎಲ್ಲವೂ ವಿಶಿಷ್ಟವೇ .ಈ ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ನಾಲ್ಕು ಜನರು ಒಂದೇ ವೇದಿಕೆಯಲ್ಲಿ ಸೇರಿರುವುದು ಅಪರೂಪದ ಕ್ಷಣ. ಇಲ್ಲಿನ ಪ್ರತೀ ಕ್ಷಣವೂ ಕೂಡಾ ರೋಮಾಂಚನಕಾರಿಯಾದುದು ಎಂದು ನಿತ್ಯೋತ್ಸವ ಕವಿ, ನಾಡೋಜ ಪ್ರೊ.ಕೆ.ಎಸ್. ನಿಸಾರ್ ಅಹಮ್ಮದ್ ಸಂತಸ ವ್ಯಕ್ತಪಡಿಸಿದರು.


9ನೇ ವರುಷದ ಆಳ್ವಾಸ್ ನುಡಿಸಿರಿ 2012ರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು ನುಡಿಸಿರಿಯು ತನ್ನ ಮೊದಲನೇ ಸಮ್ಮೇಳನದಿಂದ ಇಂದಿನವರೆಗೂ ಸ್ವಂತಿಕೆಯನ್ನು ಮುಂದುವರಿಸಿಕೊಂಡು ಬಂದಿದೆ. ನಮ್ಮ ನಾಡಿನ ಅನೇಕ ಸಾಹಿತ್ಯ ಸಂಘ ಸಂಸ್ಥೆಗಳ ಕಾರ್ಯಾವಳಿಯ ಸಾಂಪ್ರದಾಯಿಕ ಮತ್ತು ಏಕತಾನೀಯ ಕಾರ್ಯಕ್ರಮಗಳ ಚೌಕಟ್ಟಿಗೂ ಆಳ್ವಾಸ್ ನುಡಿಸಿರಿಯ ಶೈಲಿಗೂ ಕಂಡುಬರುವ ವ್ಯತ್ಯಾಸದಲ್ಲೇ ಅದರ ನಾವೀನ್ಯ, ಹೆಚ್ಚುಗಾರಿಕೆಗಳು ಗೋಚರಿಸುತ್ತವೆ.

ಉದ್ದುದ್ದನೆಯ ಭಾಷಣ ರೂಪದ ಜಾಳುಜಾಳಾದ ವಿಚಾರ ಸಂಕಿರಣಗಳು ಇತ್ಯಾದಿ ಚರ್ವಿತ ಚರ್ವಣ ಬಗೆಯ ಕಾರ್ಯಕ್ರಮಗಳು ಇಲ್ಲಿ ನಿಷಿದ್ದ. ಪ್ರತಿಯಾಗಿ ಆಳ್ವಾಸ್ ನುಡಿಸಿರಿಯ ಕವಿ, ಕಥಾ ಸಮಯಗಳು, ವಿಚಾರಗೋಷ್ಟಿಗಳು, ವಿಶೇಷೋಪನ್ಯಾಸಗಳು, ಹಿರಿಯ ಮಹನೀಯರ ಸ್ಮರಣೆ, ವಿವಧ ಕ್ಷೇತ್ರಗಳ ಯೋಗ್ಯ ಸಾಧನಾಶೀಲರಿಗೆ ಪ್ರಶಸ್ತಿ ಪ್ರಧಾನಹೀಗೆ ಔಚಿತ್ಯಪೂರ್ಣವಾಗಿ ಸಾರ್ಥಕವಾಗುತ್ತಿದೆ ಇಲ್ಲಿನ ಕಾರ್ಯವೈವಿಧ್ಯ ಎಂದು ಶ್ಲಾಘಿಸಿದರು.


ಇಂದು ಕನ್ನಡಪರ ಚಳುವಳಿಗಳು ಯಾಚನೆ, ಕೋರಿಕೆಗಳ ತಪ್ಪಲಿನ ತಗ್ಗಿನಿಂದ ಛಲವಂತಿಕೆಯ ಹಾಗೂ ಹಕ್ಕೊತ್ತಾಯದ ಬೆಟ್ಟದೆತ್ತರದ ನೆಲೆಯನ್ನು ಮುಟ್ಟಿ, ಕನ್ನಡಿಗರಲ್ಲಿ ಹಮ್ಮು ಹೆಮ್ಮೆಗಳನ್ನು ಮೂಡಿಸಿವೆ ಇದು ಕನ್ನಡ ಮನಸ್ಸಿನ ಸುಪ್ತ ಕತೃಶಕ್ತಿ ಜಾಗೃತವಾಗಿರುವ ಶುಭಸೂಚನೆ ಎಂದ ಅವರು, ಸಾಕಷ್ಟು ಸಮಯದಿಂದ ನಮ್ಮ ಇಹಪರ ಪುರುಷಾರ್ಥವೆಲ್ಲಾ ಇಂಗ್ಲೀಷ್ ನಲ್ಲೇ ಇದೆ ಎಂಬಂತೆ ಭ್ರಮಾಶೀಲರಾಗಿ, ಸ್ವಂತತೆಗೆ ಎರವಾಗಿ, ಮಂದೆತನವನ್ನು ಮೆರೆಸಿದ್ದೇವೆ.

ಪ್ರಾಪಂಚಿಕ ವಿದ್ಯಮಾನಗಳ ಕಿಂಚಿತ್ ಅರಿವು ಇರುವ ಯಾರಾದರೂ ಇಂಗ್ಲೀಷ್ ಅನಿವಾರ್ಯ ಎಂದು ನಂಬಬೇಕಾದದ್ದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಬಿಟ್ಟರೆ ನಮ್ಮ ಸಾರ್ವಜನಿಕ ಸಂವಹನ ಕ್ರೀಯೆಗಳೂ ಎಲ್ಲಾ ಬಗೆಯ ದೈನಿಕ ವಹಿವಾಟುಗಳೂ ವ್ಯಾವಹಾರಿಕ ಲೇನೆ ದೇನೆಗಳು ಅಪೂರ್ಣವಷ್ಟೇ ಅಲ್ಲ. ಅವಾಸ್ಥವ ಸ್ಥಿತಿ ನಮ್ಮ ಕೀಳರಿಮೆ ಮತ್ತು ಪರಾತಂತ್ರೈ ಪ್ರವೃತ್ತಿಯ ಪ್ರತಿಮೆ ಅನ್ನಿಸುತ್ತದೆ.

ನಮ್ಮ ರಾಷ್ಟ್ರದ ಯಾವುದೇ ಪ್ರಾದೇಶಿಕ ಭಾಷೆಯ ನುಡಿಯಲ್ಲೂ ಇಂತಹ ಶ್ಲಾಘ್ಯಾರ್ಹ ಕಾರ್ಯ ನಡೆದಿಲ್ಲ ಎನ್ನುವುದು ನಮ್ಮ ಭಾಷೆಯ ಹೆಗ್ಗಳಿಕೆಯನ್ನು ಸಾರುತ್ತದೆ ಎಂದು ನುಡಿದರು.

-ಅಪರ ಉಜಿರೆ

0 comments:

Post a Comment