ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್...
ಅದು ನನ್ನದೇ ಆದ ಒಂದು ಲೋಕ. ಅಲ್ಲಿ ನಾನೋಬ್ಬನೆ. ನನ್ನೊಂದಿಗೆ ಕಾಡಿದ ಆಕೆಯ ಒಂದಷ್ಟು ನೆನಪುಗಳು. ಆ ನೆನಪುಗಳೆ ನನ್ನ ಸಂಗಾತಿ. ಸಂಬಂಧಗಳನ್ನು ದೇವರೇ ಬೆಸೆದಿರುತ್ತಾನಂತೆ. ನಾನೇನು ಆಕೆಯ ಬಂದುವಲ್ಲ ಬಳಗವಲ್ಲ. ಪ್ರೇಮಿಯಲ್ಲ. ನನಗೂ ಆಕೆಗೂ ಯಾವುದೇ ಸಂಬಂಧವಿಲ್ಲ. ಸ್ನೇಹ ಎಂಬ ಪ್ರೆಶ್ನೆ ಮೂಡಿದರೂ ಉತ್ತರ ಆಕೆಯಿಂದ ಸರಿಯಾದ ಬಂದಿಲ್ಲ. ಆದರೂ ಹೊತ್ತಲ್ಲದ ಹೊತ್ತಲ್ಲಿ ನೆನಪಾಗಿ ಕಾಡುತ್ತಾಳೆ...
ಅವಳು ಅನಾಮಿಕೆ.

ಆಕೆಯ ಕಿರುನಗೆ, ಮುದ್ದು ಮಾತು, ತುಸುನೋಟ, ನೀಡಿದ ಬರವಸೆ, ರಾತ್ರಿಯಿಡೀ ಹರಿದಾಡಿದ ಎಸ್.ಎಮ್.ಎಸ್ಗಳು. ಎಲ್ಲವೂ ಸ್ಮೃತಿ ಪಟದೊಳಗಿನಿಂದ ಕಾಡುವ ಸವಿ ನೆನಪುಗಳು. ಪ್ರತಿ ಉಸಿರು, ದೇಹದಲ್ಲಿನ ರಕ್ತದ ಪ್ರತಿ ಹನಿ, ಹನಿಯಲ್ಲಿಯು ಅವಳೆ ತುಂಬಿದಂತೆ. ಅವಳ ಕಣ್ಣಿನ ಸೌಂದರ್ಯ ಕಣ್ಣಲ್ಲಿ ತುಂಬಿಕೊಳ್ಳುವ ತವಕ, ಆಕೆಯ ಗೆಜ್ಜೆ ಶಬ್ಧದೊಂದಿಗೆ ಹೆಜ್ಜೆಯಿಡುವ ಬಯಕೆ, ಅವಳ ಕೈಬೆರಳ ಸಂದಿಯಲ್ಲಿ ನನ್ನ ಬೆರಳ ಬೆಸೆದು ಮೌನವಾಗಿ ನಡೆಯುವ ಹುಮ್ಮಸ್ಸು. ಅವಳ ಪರಿಚಯವಾದಾಗಲಿನಿಂದ ದೂರವಾದ ನಂತರವೂ ಏನೆನೋ ಕನಸುಗಳು ನೂರಾರು ವಿಚಾರಗಳು.

ನಿದ್ರೆಯಿಲ್ಲದ ರಾತ್ರಿಗಳು ತೀರಾ ಮಾಮೂಲು. ಕಾರಣವೇ ಇರಲಿಲ್ಲ ಆಕೆ ಇಷ್ಟವಾಗಲು. ಉತ್ತರವೇ ದೊರೆಯುತಿಲ್ಲ ಆಕೆ ದೂರವಾಗಲು...ಅವಳಿಗೆಂದು ಬರೆದಿಟ್ಟ ಅಪೂರ್ಣ ಪತ್ರದ ಸಾಲು ಲೆಕ್ಕವಿಲ್ಲದಷ್ಟು. ಅರ್ಧಕ್ಕೆ ನಿಂತ ಪತ್ರಗಳನ್ನೆಲ್ಲ ಮುಂದುವರಿಸಲು ಪ್ರಯತ್ನಿಸಿದಾಗ ಮನಸ್ಸು ವಿಪರೀತ ಹೋರಾಟಕ್ಕೆ ಬಿದ್ದಿದೆ. ಪತ್ರದ ಅಂತ್ಯ ದೂರವಿದ್ದರೂ ಬರೆಯಲು ಪದಗಳೆ ಸಿಗದೇ ಪೇಚಾಡುತ್ತವೆ.

ಕೇವಲ ನೆನಪಾಗಿ ಮಾತ್ರ ಆಕೆ ಉಳಿದಿಲ್ಲ. ನೆನಪಿನೊಂದಿಗೆ ಹೊಸ ಉತ್ಸಾಹವನ್ನು ತುಂಬುವ ಚಿಲುಮೆಯಾಗಿ ಕಾಣದೇ ಕಾರ್ಯ ನಿರ್ವಹಿಸುತ್ತಿದ್ದಾಳೆ. ಮತ್ತೆ ಬಾರದ ಮುಗಿದು ಹೋದ ದಿನಗಳನ್ನು ನೆನಪಿಸಿ ಕಣ್ಣಂಚಿನಲಿ ಹನಿ ನೀರನ್ನು ಒಸರಿ ಬೀಗುತ್ತಿದ್ದಾಳೆ. ಆಕೆಯ ನೆನಪುಗಳೆ ನನ್ನ ಸಂಗಾತಿ. ಸಂಗಾತಿಯನ್ನೆ ಮರೆತರೆ ಸಾಂಗತ್ಯದ ನೆನಪೆಲ್ಲಿರುಹುದು ಗೆಳತಿ..? ಪದೆ ಪದೇ ಮೌನವಾದರೂ, ಮರಳಿ ಮುನಿಸಿಕೊಂಡರೂ, ಕೊನೆಗೆ ನನ್ನ ದ್ವೇಶಿಸಿದರೂ ನೀ ನನಗೆ ಇಷ್ಟಾನೆ.. ಬಡ ಜೀವವದು. ಸುಮ್ಮನೆ ಮೌನವಾಗಿ ಕಾಡಬೇಡ. ಕಾದಿರುವೆ ಸ್ನೇಹಕ್ಕಾಗಿ. ಪ್ರೀತಿ ತುಂಬಿದ ನಾಲ್ಕು ಮಾತುಗಳಿಗಾಗಿ...

- ಅಚ್ಯುತಕುಮಾರ ಯಲ್ಲಾಪುರ

1 comments:

padma bhat said...

chennaagide.....

Post a Comment