ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ನವಂಬರ 16-18ರವರೆಗೆ "ಕನ್ನಡ ಮನಸ್ಸು ಜನಪರ ಚಳವಳಿಗಳು" ಎಂಬ ಪರಿಕಲ್ಪನೆಯಲ್ಲಿ ಒಂಭತ್ತನೇ ವರುಷದ ಆಳ್ವಾಸ್ ನುಡಿಸಿರಿ ನಡೆಯಲಿದೆ. ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ವಹಿಸಲಿದ್ದು , ಹಿರಿಯ ಸಾಹಿತಿ ಡಾ.ಯು.ಆರ್ ಅನಂತ ಮೂರ್ತಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.


ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅತಿಥಿಗಳಾಗಿ ಪಾಲ್ಗೊಳ್ಳುವರು.ಉದ್ಘಾಟನಾ ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷರನ್ನೊಳಗೊಂಡಂತೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

ಶತಾಯುಷಿಗೆ ನುಡಿಸಿರಿ ಗೌರವ ಸನ್ಮಾನ
ಶತಾಯುಷಿ, ವಿದ್ವಾಂಸ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರಿಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಬೆಳಗ್ಗೆ 12 ರಿಂದ ನಡೆಯಲಿದೆ. ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಶತಾಯುಷಿಗೆ ಗೌರವ ಸಮರ್ಪಿ ಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ.
ಕನ್ನಡ ಸಾಹಿತ್ಯಕ ಚಳವಳಿಗಳು, ಸಾಮುದಾಯಿಕ ಚಳವಳಿಗಳು, ಅಖಂಡ ಕರ್ನಾಟಕ ಅಸ್ತಿತ್ವ - ಹೋರಾಟ, ಕಲೆ - ಮಾಧ್ಯಮ ಚಳವಳಿಗಳು ಎಂಬ ಪ್ರಮುಖ ನಾಲ್ಕು ಗೋಷ್ಠಿಗಳನ್ನು ಈ ಬಾರಿಯ ನುಡಿಸಿರಿಯಲ್ಲಿ ಆಯೋಜಿಸಲಾಗಿದೆ. ಇದಲ್ಲದೇ ಕಥಾ ಸಮಯ, ಕವಿಸಮಯ- ಕವಿನಮನ, ವಿಶೇಷೋಪನ್ಯಾಸ, ಮಾತಿನ ಮಂಟಪ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.

ಸಭಾಂಗಣ ಸಿದ್ಧ
160ಫೀಟ್ ಉದ್ದ, 40 ಫೀಟ್ ಅಗಲದ ವಿಶಿಷ್ಠ ಸಭಾಂಗಣ ನುಡಿಸಿರಿಗಾಗಿ ಸಿದ್ಧವಾಗುತ್ತಿದೆ. 130ಫೀಟ್ ಉದ್ದ 160ಫೀಟ್ ಅಗಲದ ಬೃಹತ್ ಚಪ್ಪರ ಈಗಾಗಲೇ ನಿರ್ಮಾಣಗೊಂಡಿದ್ದು ಸುಮಾರು 12ಸಾವಿರದಷ್ಟು ಆಸನ ವ್ಯವಸ್ಥೆಯನ್ನು ಈ ಸಭಾಂಗಣದಲ್ಲಿ ಜೋಡಿಸಲಾಗುತ್ತಿದೆ. ಇಡೀ ಸಭಾಂಗಣವನ್ನು ಬಟ್ಟೆಯ ಗೂಡುದೀಪಗಳಿಂದ ಶೃಂಗರಿಸಲಾಗಿದ್ದು, ಈ ಬಾರಿಯ ನುಡಿಸಿರಿಗೆ ಹೊಸ ಕಳೆ ಮೂಡುವಂತೆ ಮಾಡಿದೆ.
ಆಳ್ವಾಸ್ ನುಡಿಸಿರಿಯ ರೂವಾರಿ ಡಾ.ಎಂ.ಮೋಹನ ಆಳ್ವ, ಮಿಜಾರುಗುತ್ತು ಆನಂದ ಆಳ್ವ ಸಭಾಂಗಣಕ್ಕೆ ಭೇಟಿನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
0 comments:

Post a Comment