ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:38 PM

ಕನಸು ನನಸಾಯಿತು...

Posted by ekanasu

ಸಂಪಾದಕೀಯ
ಕನಸು ನನಸಾಯಿತು...ಹೊಸ ಹೊಸ ಚಿಂತನೆ ಮನದಲ್ಲಿ ಚಿಗುರೊಡೆಯಿತು...

ಹೌದು ನಾಲ್ಕೈದು ವರುಷಗಳ ಹಿಂದೆ ನವ ಮಾಧ್ಯಮದ ಕನಸು ಹೊತ್ತ ಈ ಕನಸು ತಂಡ ಅಂತರ್ಜಾಲದಲ್ಲೊಂದು ತಾಣವನ್ನು ಹುಡುಕಿ "ಈ ಕನಸು" ಎಂದು ನಾಮಕರಣ ಮಾಡಿ ಜನತೆಯ ಮುಂದಿಟ್ಟಾಗ ಅನೇಕ ಮಂದಿ "ಇದು ಎಷ್ಟು ದಿನವೋ" ಎಂದು ಲೇವಡಿ ಮಾಡಿದ್ದರು. ಆದರೆ ಅದನ್ನು ಸ್ಪೂರ್ತಿಯ ಸೆಲೆಯೆಂದು ಸ್ವೀಕರಿಸಿದ ನಮ್ಮ ತಂಡ ; ತಂಡ ಸ್ಪೂರ್ತಿಯೊಂದಿಗೆ ಮುನ್ನುಗ್ಗಿತು... ನಿರಂತರ ಹೊಸ ಹೊಸ ವಿಚಾರಗಳನ್ನು ನಮ್ಮ ಓದುಗರ ಮುಂದಿಟ್ಟುಕೊಂಡು ಹೊಸ ಹೊಸ ಪ್ರಯೋಗಗಳನ್ನು ಕನ್ನಡ ಅಂತರ್ಜಾಲ ಸುದ್ದಿತಾಣದ ಮುಖಾಂತರ ನೀಡುತ್ತಾ ಹಲವು ಪ್ರಥಮಗಳನ್ನು ದಾಖಲಿಸುವಲ್ಲಿ ಸಫಲವಾಯಿತು.


ಓದುಗರ ನಿರಂತರ ಬೆಂಬಲ ಪ್ರೋತ್ಸಾಹ, ಮೆಚ್ಚುಗೆಯ ನುಡಿಗಳು ಈ ಕನಸಿನ ಹೆಜ್ಜೆ ಹೆಜ್ಜೆಗೂ ಸ್ಫೂರ್ತಿಯ ಸೆಲೆಯಾದವು. ಯಾವುದೇ ಜಾಹೀರಾತು - ಪೇಯ್ಡ್ ನ್ಯೂಸ್ ಗಳ ಹಾವಳಿಯಿಲ್ಲದೆ ಪತ್ರಿಕಾ ರಂಗವನ್ನು ಗಟ್ಟಿಗೊಳಿಸುವ ಧ್ಯೇಯೋದ್ಧೇಶದಿಂದ ಈ ಕನಸು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ...ಇದನ್ನು ಮುಂದುವರಿಸುತ್ತದೆ.

ಆಮಿಷಗಳಿಗೆ ಬಲಿಯಾಗದೆ, ಪೂರ್ವಾಗ್ರಹಗಳಿಲ್ಲದೆ, ಸುದ್ದಿಯ ಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳದೆ, ಪಕ್ಷ, ಜಾತಿ, ರಾಜಕೀಯ ಇಚ್ಛಾಶಕ್ತಿಗಳಿಗೆ ವಾಲಿಕೊಳ್ಳದೆ ನೈಜ ಸುದ್ದಿಯನ್ನು, ವೈವಿಧ್ಯಮಯ ವಿಚಾರಧಾರೆಯನ್ನು ಜನತೆಯೆದುರು ನೀಡುತ್ತಾ ಬಂದ ಈ ಕನಸು ಹಲವಾರು ಮಹತ್ವದ ದಾಖಲೆಗಳಿಗೆ ಸಾಕ್ಷಿಯಾಗಿರುವುದು ಓದುಗಕೋಟಿಗೆ ಗೊತ್ತಿರುವ ವಿಚಾರ.

ಸುಮಾರು 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ನಿರಂತರ ಓದುಗ ವರ್ಗವನ್ನು ಹೊಂದಿರುವ ಈ ಕನಸು.ಕಾಂ ಯುವ ಬರಹಗಾರರಿಗೆ ಸ್ಫೂರ್ತಿಯ ಸೆಲೆಯಾಗಿ ಬರಹಗಾರರನ್ನು ರೂಪಿಸುವಲ್ಲಿಯೂ ಪ್ರಮುಖ ಪಾತ್ರನಿರ್ವಹಿಸಿದೆ ಎಂಬುದು ನಮಗೆ ತೃಪ್ತಿ ತಂದಿದೆ.

"ವರ್ಷ ಕ್ರಿಯೇಷನ್ಸ್"ನ ಆಶ್ರಯದಲ್ಲಿರುವ ಈ ಕನಸು.ಕಾಂ ತಂಡಕ್ಕೆ ಮತ್ತೊಂದು ಸಂಭ್ರಮ. ದೀಪಾವಳಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಒಂದು ಹೊಸ ವಿಚಾರ. ಕನ್ನಡ ಅಂತರ್ಜಾಲ ಸುದ್ದಿತಾಣಗಳ ಪೈಕಿ ಹೊಸತೊಂದು ಜಾಲತಾಣ "ವಾರ್ತೆ.ಕಾಂ" www.vaarte.com ನವೆಂಬರ್ 14ರಂದು ಓದುಗರಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ. ಈ ಕನಸಿನ ಬರಹಗಾರರಿಗೆ ವಾರ್ತೆ.ಕಾಂ ನಲ್ಲೂ ಬರೆಯುವ ಅವಕಾಶ ಮುಕ್ತವಾಗಿದೆ. ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ , ಮಾಧ್ಯಮ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಅಧ್ಯಾಯವನ್ನು ತೆರೆಯವ ಪ್ರಯತ್ನ ನಮ್ಮದು. ಮುನ್ನಡೆಸುವ - ಪ್ರೋತ್ಸಾಹಿಸುವ - ಬೆಂಬಲಿಸುವ ಮಹತ್ಕಾರ್ಯ ಓದುಗರಿಂದ ಆಗಬೇಕಾಗಿದೆ.ತಮ್ಮ ಮುಕ್ತ ಅಭಿಪ್ರಾಯಗಳಿಗೆ ಎಂದೆಂದೂ ಸ್ವಾಗತ.

ಇಂತು ಪ್ರೀತಿಯಿಂದ

ಹರೀಶ್ ಕೆ.ಆದೂರು
ಗ್ರೂಪ್ ಎಡಿಟರ್

0 comments:

Post a Comment