ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್...
ಪ್ರೀತಿ ಎಂಬ ಎರಡು ಅಕ್ಷರಗಳಲ್ಲಿಯೇ ಎಂತಹ ಸೆಳತ ಪ್ರೀತಿಯಿಲ್ಲದೇ ಪ್ರೀತಿ ಮಾಡದೇ ಯಾವ ಜೀವಿಯೂ ಇಲ್ಲ ಅನ್ನಿಸುತ್ತೆ.. ವ್ಯಕ್ತಿಯ ಬದಲಾವಣೆಗೆ ಕಾರಣ ಪ್ರೀತಿ ಇಂದು ಪ್ರೀತಿಗೆ ತನ್ನದೇ ಆದಂತಹ ಒಂದು ಮಹತ್ವವಾದ ಪ್ರಾಶಸ್ತ್ಯವಿದೆ ಮನುಷ್ಯನಿಗೆ ಅತೀ ಪ್ರಮುಖವಾಗಿ ಬೇಕಾಗಿರುವ ಅವಶ್ಯಕತೆಗಳಲ್ಲಿ ಒಂದು . ಪ್ರೀತಿ ಎಂದಾಕ್ಷಣ ಎಲ್ಲರು ಕಿವಿಗಳು ನಿಮಿರುತ್ತವೆ ಹೃದಯ ಬಡಿತ ಹೆಚ್ಚಾಗುತ್ತ ಕಣ್ಣುಗಳಲ್ಲಿ ಏನು ಪ್ರಶ್ನೆ ಮೂಡುತ್ತೆ ಇದೆಲ್ಲ ಪ್ರೀತಿಯ ಸುಮಧುರವಾದ ಅನುಭವಗಳು...


ಪ್ರೀತಿ ಎಂದಾಕ್ಷಣ ಇಂದಿನ ಯುವಕ ಯುವತಿಯರು ತನ್ನದೇ ಆದ ವ್ಯಾಖ್ಯಾನ ನೀಡುತ್ತಾರೆ . ಪ್ರೀತಿ ಎಂದರೆ ಪರಿಶುದ್ಧವಾದ್ದು, ಕಾಳಜಿಯುತವಾದ್ದು, ನಂಬಿಕೆಗೆ ಅರ್ಹವಾದ್ದು ಎಂದೆಲ್ಲಾ ಹೇಳಬಹುದು... ಹೌದು ಪ್ರೀತಿ ಎಂದರೆ ಇದೆಲ್ಲ ಒಳಗೊಂಡ ಬೃಹದಾಕಾರವಾದದ್ದು. ವ್ಯಕ್ತಿಗೆ ಚಿಕಿತ್ಸಕನಂತೆ ಕಾರ್ಯ ಮಾಡುತ್ತದೆ... ಮನಸ್ಸಿಗೆ ಮುದವನ್ನು ನೀಡುವಂತಹದ್ದು. ಮನುಷ್ಯ ಮನೋಲ್ಲಾಸವಾಗಿ, ಉತ್ಸಾಹಕನ್ನಾಗಿ, ಆಸಕ್ತಿದಾಯಕನ್ನಾಗಿ ಕೆಲಸ ಮಾಡಲು ಸಹಾಯಕಾರಿಯಾಗಿದೆ .

ಪ್ರೀತಿ ಹೃದಯದಲ್ಲೋ ಅಥವಾ ಕಣ್ಣಲ್ಲೂ ಜನಿಸಿ ಮುಂದೆ ಬೃಹತ್ದಾಗಿ ಹೆಮ್ಮರವಾಗಿ ಬೆಳೆಯುತ್ತದೆ. ಒಬ್ಬರನ್ನೂಬ್ಬರು ಅಗಲದೇ ಒಟ್ಟಿಗೆ ಇರಬೇಕುಯೆನ್ನವುದು ಪ್ರೀತಿಯ ಆಶಯ . ಪ್ರೀತಿಗೆ ಬಡವ ಶ್ರೀಮಂತ, ಮೇಲು-ಕೀಳು, ಅಂತಸ್ತುಗಳ ಯಾವುದೇ ರೀತಿಯಾದ ಬೇಧ-ಭಾವವಿಲ್ಲ . ಪ್ರೀತಿ ಎಲ್ಲಿ ? ಹೇಗೆ ? ಯಾವಾಗ ? ಹುಟ್ಟುತ್ತದೆ ಎಂದು ಹೇಳಲು ಆಗದು. ಪ್ರೀತಿಗೆ ತನ್ನದೇ ಆದಂತಹ ಶಕ್ತಿಯಿದೆ. ಆ ಶಕ್ತಿಯಿಂದ ಮನುಷ್ಯನಿಗೆ ಬೇಕಾದಂತಹ ಚಿಕಿತ್ಸೆ , ಪರಿಹಾರ ಒದಗಿಸುತ್ತದೆ.

ಪ್ರೀತಿ ಎಂದಾಕ್ಷಣ ನೆನಪಿಗೆ ಬರುವುದು ಹುಡುಗ ಹುಡುಗಿ.ಅಥವಾ ಯುವಜನತೆಯನ್ನು. ಪ್ರೀತಿ ಎಂದರೆ ತಂಎದೆ ಮಗಳದ್ದು, ತಾಯಿ ಮಗನದು, ತಂಗಿ ಅಣ್ಣನದು, ಅಜ್ಜಿ ಮೊಮ್ಮಗನದು, ಗೆಳೆಯ ಗೆಳೆಯನದು. ಇವಲ್ಲಾ ಪ್ರೀತಿಯ ವ್ಯಾಪ್ತಿಯಾದರೂ ಕೂಡ ಜನರು ಪ್ರೀತಿ ಎಂದಾಕ್ಷಣ ನೆನಪಿಸುವಂತಹದ್ದು ಹುಡಗ ಹುಡುಗಿಯ ಪ್ರೀತಿ...ಪ್ರೇಮ ...ಪ್ರಣಯಗಳನ್ನೇ...!

ಪ್ರೀತಿ ಯಾವುದೇಇರಲಿ ? ಎಂತಹದ್ದೇ ಇರಲಿ ಪ್ರೀತಿಯಲ್ಲಿ ಮೋಸ, ವಂಚನೆ, ಸೇಡು ಇವು ಯಾವುದೂ ಸುಳಿಯ ಕೂಡದು. ಪವಿತ್ರವಾಗಿ ಇಬ್ಬರ ಜೀವನಕ್ಕೆ ಬೆಳಕಾಗಿ ಇರಬೇಕೇ ಹೊರತು ಕತ್ತಲು ಅವರಿಸಬಾರದು. ಇಬ್ಬರ ಜೀವನದಲ್ಲಿ ಜ್ಯೋತಿಯಂತೆ ಬೆಳಕಗಾಲಿ ಪ್ರೀತಿ. ಪ್ರೀತಿ ವ್ಯಕ್ತಿ ಜೀವನದಲ್ಲಿ ಸಿಹಿ ಅನುಭವ ಉಂಟು ಮಾಡಲಿ. ಪ್ರೀತಿಯಿಂದ ಅವರ ಜೀವನ ಯಶಸ್ಸು ಸಾಧಿಸುವಂತಾಗಲಿ . ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಜೀವನ ನಡೆಸೋಣ . ಪ್ರೀತಿ ಬಹು ಅಮೂಲ್ಯವಾದ್ದು ಪ್ರೀತಿಗೋಸ್ಕರ ನೋವು, ದು:ಖ, ಹಗೆತನ, ಸಿಟ್ಟು, ಸೇಡು ಮತ್ತೊಬ್ಬರಿಗೆ ಕೊಡದೇ ಪ್ರೀತಿಗಾಗಿ ಪ್ರೀತಿಯಿಂದ ಪ್ರೀತಿಸಿ, ಪ್ರೀತಿ ಮಧುರವಾದ, ಸುಮಧುರವಾದ ಅನುಭವ ಅಲ್ವಾ ಏಂತೀರಾ..?

ಕೆ. ನಿರ್ಮಲಾ
ಪತ್ರಿಕೋದ್ಯಮ ಮತ್ತು ಸಮೂಹ
ಸಂವನಹ ವಿಭಾಗ, ಗು.ವಿ.ಗು


2 comments:

Amaresh Nayak said...

nice..
writting well..
Sadaa Bareyuttiri..

Amaresh Nayak Jalahalli..
Prajavani Reporter (Gulbarga Division)

Amaresh Nayak said...

nice..
writting well..
Sadaa Bareyuttiri..

Amaresh Nayak Jalahalli..
Prajavani Reporter (Gulbarga Division)

Post a Comment