ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ - ವಿಟ್ಲ ವರದಿ
ಶ್ರೀ ಪಂಚಲಿಂಗ ರಥ ಯಾತ್ರೆ ಎಂದರೆ ದೇವರೇ ಗ್ರಾಮಗಳಿಗೆ ಭೇಟಿ ಕೊಡುತ್ತಿರುವುದು. ವಿಟ್ಲ ಶ್ರೀ ಮಹತೋಭಾರ ಪಂಚಲಿಂಗೇಶ್ವರ ದೇವಸ್ಥಾನದ ಮಾದರಿಯುಳ್ಳ ರಥವು ಯಾತ್ರೆಯ ಮೂಲಕ ವಿಟ್ಲ ಸೀಮೆಯ 16 ಗ್ರಾಮಗಳಿಗೆ ಸಂಚರಿಸುತ್ತಿರುವುದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೊತ್ಸವಕ್ಕಿಂತ ವಿಶೇಷವಾದ ರಥಯಾತ್ರೆಯಾಗಿ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಲಿದೆ. ಮೊಟ್ಟ ಮೊದಲು ದೇವರು ಗ್ರಾಮಕ್ಕೆ ಭೇಟಿ ಕೊಡುವ ಈ ಕಾರ್ಯಕ್ರಮವು ಅಮೂಲ್ಯ ಸಂದರ್ಭವಾಗಿ ಮೂಡಿ ಬಂದಿದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಪುನರ್ ನಿರ್ಮಾಣಗೊಂಡು ಜನವರಿ 9ರಿಂದ 21ರ ತನಕ ಬ್ರಹ್ಮಕಲಶೋತ್ಸವ ನಡೆಯಲಿರುವ ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೀಮೆಯ 16 ಗ್ರಾಮಗಳಿಗೆ ಸಂಚರಿಸಲಿರುವ ದೇವಾಲಯ ಮಾದರಿಯ ರಥಕ್ಕೆ ಭಗವಾದ್ವಜವನ್ನು ಆಳವಡಿಸಿ, ಅದರಲ್ಲಿದ್ದ ಧ್ವಜ ಸ್ಥಂಬಕ್ಕೆ (ಕೊಡಿಮರ) ಮಾಲಾರ್ಪಣೆ ಮಾಡಿ "ಶ್ರೀಪಂಚಲಿಂಗ ರಥಯಾತ್ರೆ" ಗೆ ಚಾಲನೆ ನೀಡಿದ ಬಳಿಕ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಸಹಸ್ರಾರು ವರ್ಷಗಳಿಗೆ ಶಾಶ್ವತ ಎಂಬಂತೆ ಅದ್ಭುತವಾಗಿ ನಿರ್ಮಾಣವಾಗಿರುವ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗಿಗಳಾಗುವ ಸದಾವಕಾಶ ಒದಗಿ ಬಂದಿರುವುದು ಭಕ್ತರ ಪಾಲಿಗೆ ಪುಣ್ಯಪ್ರದ ಎಂದರು. ದೇಶದ ಉದ್ದಗಲದಲ್ಲೂ ಇಂತಹ ಬೃಹತ್ತಾದ ಮತ್ತು ಸುಂದರ ದೇಗುಲ ಇನ್ನೊಂದಿಲ್ಲ ಎಂದು ದೇಗುಲ ನಿರ್ಮಿಸಿದ ಸಮಿತಿಗಳಿಗೂ, ಕಾರ್ಯಕರ್ತರಿಗೂ, ಧಾನಿಗಳಿಗೂ, ಅವರು ಅಭಿನಂದನೆ ಸಲ್ಲಿಸಿದರು. ಜಗತ್ತಿನ ಸೃಷ್ಟಿಯ ಸಕಲಜೀವ ರಾಶಿಗೂ ಅವರು ಆಮಂತ್ರಣ ನೀಡಿ ದೇಗುಲ ಬ್ರಹ್ಮಕಲಶೊತ್ಸವದಲ್ಲಿ ಮಿಂದು ಧನ್ಯರಾಗೋಣ ಎಂದು ಹಾರೈಸಿದರು.

ಆಶೀರ್ವಚನ ನೀಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೃದ್ಯ ಭಾವನಾತ್ಮಕ ಸಂಬಂಧ ಬೆಸೆಯಲು ರಥಯಾತ್ರೆ ಪೂರಕವಾಗಿದೆ. ಧರ್ಮದ ಮೂಲಕ ಗಳಿಸಿದ ಸಂಪತ್ತನ್ನು ಧರ್ಮಕ್ಕಾಗಿ ಬಳಸಿದಾಗ ಬದುಕು ಬಂಗಾರವಾಗುವುದು. ದೇಗುಲದ ಬ್ರಹ್ಮ ಕಲಶೊತ್ಸವ ಕಾರ್ಯಕ್ರಮವು ಇತಿಹಾಸ ನಿರ್ಮಿಸುವುದು. ರಥ ಯಾತ್ರೆಯ ಮೂಲಕ ನಮ್ಮ ಅಂತರಂಗ ಶುದ್ದೀ ಕರಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಮಾರ್ಗದರ್ಶಿ ಯತಿ, ಬ್ರಹ್ಮಕಲಶೋತ್ಸವದ ಅಧ್ಯಕ್ಷ ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಭಾರತೀಯ ಸಂಸ್ಕೃತಿ, ಪರಂಪರೆಯು ಸಂತರುಗಳಿಂದ ಮಾತ್ರಾ ಉಳಿಯಲು ಸಾಧ್ಯ. ದೇಗುಲ ನಿರ್ಮಿಸುವುದರೊಂದಿಗೆ ನಾವು ಶಕಪುರುಷರಾಗ ಬೇಕು ಎಂದರು.

ನ.29ರತನಕ 16 ಅಡಿ ಉದ್ದ ಹಾಗೂ 12.5 ಅಡಿ ಎತ್ತರ ವಿರುವ ಈ ರಥವು 11 ದಿನಗಳ ಕಾಲ ವಿಟ್ಲ ಸೀಮೆಯ 16 ಗ್ರಾಮಗಳಲ್ಲಿ ಸಂಚರಿಸಿ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ವಿವರವನ್ನು ಸಾರಿ ಹೇಳಲಿದೆ. ಪ್ರತಿ ಗ್ರಾಮದಲ್ಲಿ ಶಿವ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ . ನ.30ರಂದು ಈ ರಥ ವಿಟ್ಲ ಪ್ರವೇಶಿಸಲಿದೆ.

ಅಂದು ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಸಹಕರಿಸಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್. ಕೂಡೂರು ತಿಳಿಸಿದರು.

ವಿಟ್ಲ ಅರಮನೆಯ ವಿ.ಜನಾರ್ದನ ವರ್ಮ ಅರಸರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹೆಚ್. ಜಗನ್ನಾಥ ಸಾಲಿಯಾನ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಸಮಗ್ರ ವರದಿಗೆ www.vaarte.com ಲಾಗ್ಇನ್ ಮಾಡಿ... ವಾರ್ತೆ ಸ್ವಚ್ಛ ಮನಸ್ಸಿನ ಸುಂದರ ಸುದ್ದಿಗಾಗಿ...ಎಲ್ಲವೂ ಒಂದೇ ಕ್ಲಿಕ್ ನೊಂದಿಗೆ..

0 comments:

Post a Comment