ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:11 PM

ಪ್ರಳಯ ಪ್ರಸಂಗ...!

Posted by ekanasu

ಯುವಾ
ಡಿ.21ಕ್ಕೆ ಸ್ವಾಮಿಜಿಯೋರ್ವರು ಹಾಗೂ ಟಿ.ವಿ ವಾಹಿನಿಯವರು ಜಂಟಿಯಾಗಿ ಭೂಮಿಯನ್ನ ಮುಳುಗಿಸಿ ಪ್ರಳಯ ಮಾಡೋಕೆ ಪ್ಲಾನ್ ಮಾಡ್ಯಾರ. ಸ್ವಾಮಿಜಿಗೆ ಎಲ್ಲರೂ ಸತ್ತ ಮೇಲೆ ತಿಥಿ ಮಾಡೋರು ಯಾರು ಅನ್ನೊ ಚಿಂತೆ ಶುರು ಆಗೈತೆ. ಚಾನಲ್ನವರು ಸತ್ತವರ ಬ್ರೆಕಿಂಗ್ ನ್ಯೂಸ್ ಹೇಗೆ ಮಾಡೋದು ಅಂತ ಯೋಚನೆ ಮಾಡ್ಯಾರ. ಪ್ರಳಯ ಮಾಡೋರನ್ನ ಪಕ್ಷದಿಂದ ವಜಾ ಮಾಡಿ ಗಡಿಪಾರು ಮಾಡಬೇಕು ಅಂತಾ ಹೈಕಮಾಂಡಗೆ ಮನವಿ ಸಲ್ಲಿಸೋಕೆ ನಿಯೋಗ ಹೋಗೈತಿ.ನಮ್ಮ ಯಡ್ಯುರಪ್ಪ ಬೇರೆ ಪ್ರಳಯದಿಂದ "ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಆಗಿದ್ದಾಗಲಿ ಅನ್ನಾಕ ಹತ್ತಾರೆ. ಪ್ರಳಯದ ಖರೆ ಆಗೋದ್ರೊಳಗೆ ಹೊಸ ಪಕ್ಷಕಟ್ಟಬೇಕು ಅಂತ ಶಪಥ ಮಾಡ್ಯಾರ. ಶೋಭಕ್ಕನೂ ಇದಕ್ಕೆ ಕರೆಂಟ್ ಶಾಕ್ ಕೊಟ್ಟಾಳ.

ಬಿ.ಜೆ.ಪಿ ಬಿಟ್ಟು ಕೆ.ಜೆ.ಪಿ ಗೆ ಬರುವವರ ತಿಥಿ ಮಾಡಿಸೋ ಜವಾಬ್ದಾರಿ ನಮ್ಮದು ಅಂತಾ ಬಿಎಸವೈ ಬರವಸೆ ನಂಬಿ ಕೆಲ ಶಾಸಕರು ಅವರಿಗೆ ಬೆನ್ನು ತೋರಿಸ್ಯಾರ. ನರಕದಲ್ಲಾದ್ರು ನಿಮಗೆ ಸಚಿವ ಪದವಿ ಕೊಡಸ್ತಿನಿ, ಚಿತ್ರಗುಪ್ತನ ಅಧಿಕಾರ ನಿಮಗೆ ಕೊಡ್ತಿನಿ ಅಂತ ಕೆ.ಜೆ.ಪಿ.ದಾಗ ಗಾಳಿಸುದ್ದಿ ಬಿಟ್ಯಾರ. ಯಮನ ಸ್ಥಾನ ಮಾತ್ರ ಬಿಟ್ಟುಕೊಡಕೆ ನಕಾರ ಅಂದಾರ.

ಭೂಮಿ ಮುಳಗಿಸೋದ್ರಲ್ಲಿ ವಿರೋದ ಪಕ್ಷದ ಕೈವಾಡ ಐತಿ ಅನ್ನೊದು ಆಡಳಿತ ಪಕ್ಷದವರ ಶಂಕೆಯಾಗದ. ಪ್ರಳಯದ ವಿರುದ್ದ ಪ್ರತಿಭಟನೆ ನಡೆಸೋಕೆ ವಾಟಳ ನಾಗರಾಜ್ ಹೊಸ ಐಡಿಯಾ ಮಾಡಕ್ ಹತ್ತಾರ. ಸಿನಿಮಾದವರನ್ನೆಲ್ಲ ಸೇರ್ಸಿ ಕೋಣನ ಮುಂದೆ ಸ್ಟ್ರೈಕ್ ಮಾಡ್ತಾರಂತ. ಪತ್ರಕರ್ತರು ಮತ್ತ ಕಪ್ಪು ಕೋಟಿನ ವಕೀಲರು ರಾಜಿಯಾಗಿ ಇದರಲ್ಲಿ ಭಾಗವಹಿಸ್ತಾರಂತ. ಪ್ರಳಯ ಮಾಡಿಸುವವರನ್ನ ಬಂದಿಸಬೇಕು ಅಂತಾ ಪೋಲಿಸಪ್ಪಂಗೆ ಆಗ್ರಹಿಸ್ತಾರಂತ.

ಪ್ರಳಯಕ್ಕೂ ಮುನ್ನ ಜನಪ್ರತಿನಿಧಿಗಳೆಲ್ಲ ನರಕದಲ್ಲೂ ಭ್ರಷ್ಟಾಚಾರ ನಡೆಸಿ ಸೈಟ್ ಹೊಡೆಯೋಕೆ ಯೋಚನೆ ಮಾಡ್ಯಾರ. ಸ್ವರ್ಗದಲ್ಲಂತೂ ಸೋನಿಯಾ ಜಾಗ ಕೊಡಲ್ಲ, ನರಕದಲ್ಲಾದ್ರು ಮೊದಲೇ ಬುಕ್ ಮಾಡೋಣ ಅಂತಾನ ನಮ್ಮ ಮೆಂಬರ್. ಚಾನಲನವರೂ ಇದನ್ನೆಲ್ಲ ಹೀಗೊಂದು ಉಂಟೆ ಅಂತಾ ಇನ್ನೊಂದು ಎಪಿಸೋಡು ತೆಗಿಯೋಗ ಅಡ್ವಾನ್ಸ ಕೊಟ್ಟಾರ. ಮಂಗಳಗ್ರಹದಲ್ಲಿ ಚಾನಲನ ಶಿಪ್ಟ ಮಾಡೋಣ ಅಂತಾನೂ ಮಾತನಾಡ್ಯಾರ. ಇದಕ್ಕೆ ಕೈ ಕೃಷ್ಣ ರಾಜ್ಯಕ್ಕೆ ಬಂದು ಸಾಥ್ ನೀಡ್ಯಾರ. 81ರ ವಯಸ್ಸಿನಲ್ಲೂ ರಾಜಕೀಯ ಮಾಡ್ತಿರೋ ಕೃಷ್ಣಪ್ಪನ ನೋಡಿ ದ್ಯಾವೇಗೌಡ್ರು ನಾನು ನಿವೃತ್ತಿ ಪಡೆಯುವ ಪ್ರಶ್ನೆ ಉಳಿದಿಲ್ಲ ಅಂದಾರ.

ಪ್ರಳಯ ಆದ್ರು ಸರಿ ಕುಮಾರಣ್ಣ ಮತ್ತೆ "ಕೈ" ಕೊಡುವ ಸಿದ್ದರಾಮಯ್ಯ ಒಂದಾಗಲಿಕ್ಕೆ ಬಿಡಲ್ಲ ಅಂತಾನೂ ದ್ಯಾವೆಗೌಡ್ರು ಗುಡಗ್ತಿದಾರ. ಹೊಸ ಪಕ್ಷವನ್ನು ಸೈಕಲ್ಗೆ ಕಟ್ಟಿ ಓಡಿಸೋಕೆ ಬಿ.ಎಸ್.ವೈಗೆ ಸೈಕಲ್ ಬಾಡಿಗೆಗೆ ಕೋಡೋರು ಯಾರು ಇಲ್ಲದ್ದನ್ನ ನೋಡಿ ಜನ ನಗಾಕ ಹತ್ತಾರ. ನಮ್ ಎಂ.ಎಲ್.ಎ.ಗಳು ವೋಟ್ಬ್ಯಾಂಕ್ಗಳಲ್ಲಿ ಸಾಲ ಕೇಳೋಕೆ ಹೋಗಿ ಸಾಲ ಸಿಗದೇ ಪೆಚ್ಚುಮೋರೆ ಹಾಕೊಂಡು ಕುಳಿತಾರ. ಸೈಕಲ್ ಇಲ್ಲಾ ಅಂದ್ರೆ ಇನ್ನೊಂದು ಅಂತ ಯೋಜನೆ ಮಾಡಿದ ಯಡ್ಯುರಪ್ಪನವರ ಹೊಸ ಪಕ್ಷದ ಆಡಳಿತ ನೋಡಣ ಅಂತಾ ಆಸೆಯಿಂದ ಪ್ರಳಯವನ್ನ ತಾತ್ಕಾಲಿಕವಾಗಿ ಮುಂದೆ ಹಾಕಲಾಗಿದೆ,ಸಹಕರಿಸಿ ಅಂತಾ ಹೊಸ ಸ್ವಾಮೀಜಿಯೊಬ್ಬರು ಈಗಷ್ಟೆ ವಾರೆಂಟ್ ಹೊರಡಿಸ್ಯಾರ..!

-ಅ.ಕುಮಾರ

0 comments:

Post a Comment