ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪಕ್ಕದಲ್ಲಿ ಪುಸ್ತಕ , ಮಸ್ತಕದಲ್ಲಿ ಒಂದು ಗುರಿ ಅವನ ಹಿಂದೆ ಒಬ್ಬ ಗುರು ಇವು ವಿಶ್ವ ಎಂಬ ವಿಶ್ವಾಸದ ಹುಡುಗನ ಮೂಲಮಂತ್ರಗಳು ಯಾವಾಗಲು ಓದುವ ಬರೆಯುವ ಹಾಗೂ ಏನನ್ನಾದರು ಸಾಧಿಸಬೇಕು ಎನ್ನುವ ಹಂಬಲದವನು. ಈತನ ವಯಸ್ಸು ಚಿಕ್ಕದಾದರು ಸಾಧಿಸುವ ಹಾಗೂ ಕಾಣುವ ಕನಸುಗಳು ಮಾತ್ರ ಬೆಟ್ಟದಷ್ಟು ಎತ್ತರದವು. ಸತತ ಪರಿಶ್ರಮದ ಹುಡುಗ. ತನ್ನ ತಂದೆ ಶ್ಯಾಮಣ್ಣನವರ ಮುದ್ದಿನ ಮಗ. ತಾಯಿ ಶಾರದಮ್ಮಳ ಮನೆಯ ಮಗ. ಅತ್ಯಂತ ದೊಡ್ಡ ಕುಟುಂಬದಲ್ಲಿ ಜನಿಸಿದ ಈತ ಒಂದು ಸಾಧನೆ ಮಾಡಿಯೇ ತೀರಬೇಕು ಎಂದು ನಡೆದವನು.

ಮೂರನೆ ತರಗತಿಯಲ್ಲಿಯೆ ದೊಡ್ಡ ಭಾಷಣಕಾರನಂತೆ ವರ್ತಿಸಿ ಪ್ರಾಧ್ಯಾಪಕರನ್ನು ಚಿಂತನೆಗೆ ಒಳಪಡಿಸಿದವನು.. ತನ್ನ ಎಳೆಯ ವಯಸ್ಸಿನಲ್ಲೆ ಅನೇಕ ಅಧ್ಭುತಗಳನ್ನು ಸಕಲ ಕಲೆಗಳನ್ನು ಕರಗತಮಾಡಿಕೊಳ್ಳಬೇಕು ಎಂಬ ಹಠವಾದಿ... ನನಗೆ ಯಾವುದು ಬರಲ್ಲಾ ಎನ್ನದಂತೆ ಇರಬಾರದು ಎನ್ನುವ ಆಸೆವುಳ್ಳವನು.. ಹೇಗಾದರು ಮಾಡಿ ಮುಂದೆ ಬಂದು ಜಯಗಳಿಸಬೇಕು ಎನ್ನುವದಕ್ಕಿಂತ ಹೆಚ್ಚು ಪರಿಶ್ರಮವಹಿಸಿ ಜಯಗಳಿಸಬೇಕು... ಅದರ ಸುಖವೆ ಬೇರೆ ಎಂಬ ಯೋಚನೆಯವನು... ತನ್ನ ಬದುಕು ಹೇಗೆ ಬಂಗಾರವಾಗಿಸಬೇಕು, ಸುಂದರವಾಗಿಸಬೇಕು ಎಂದು ವಿಚಾರಿಸುವನು ತನ್ನ ಮನೆಯ ಬಡತನ ದಾರಿದ್ರ್ಯ ಹೇಗೆ ಹೋಗಲಾಡಿಸಬೇಕು ಎಂಬುವದು ಚಿಂತಿಸಿದವನು.

ಅಂದು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ. ಮಕ್ಕಳೆಲ್ಲಾ ಶಿಕ್ಷಕರಿಗಾಗಿ ಉಡುಗೊರೆಯನ್ನು ತರುವರು. ಹೂವಿನ ಮಾಲೆಯನ್ನು ತರುವರು.. ನನ್ನ ಗುರುಗಳಿಗೆ ನಾನು ಎಲ್ಲರಿಗಿಂತ ವಿಭಿನ್ನವಾಗಿ ಕೊಡುಗೆಯನ್ನು ಉಡುಗೊರೆಯನ್ನು ಕೊಡಬೇಕು ಎಂದು ಯೋಚಿಸಿದ ಈತ ತನ್ನ ಎಲ್ಲಾ ಶಿಕ್ಷಕರನ್ನು ಕುರಿತು ಒಂದು ಕವನ ಸಂಕಲನ ಹೊರತರಲು ಹಾಗೂ ಅದನ್ನು ತನ್ನ ಶಿಕ್ಷಕರಿಗೆ ಉಡುಗೊರೆಯಾಗಿ ಕೊಡಲು ನಿರ್ಧರಿಸುತ್ತಾನೆ.ಕಾರ್ಯಕ್ರಮ ಪ್ರಾರಂಭವಾಗುತ್ತೆ... ವೇದಿಕೆಯ ಮೇಲೆ ಊರಿನ ಗಣ್ಯರೆಲ್ಲ ಕುಳಿತಿರುತ್ತಾರೆ. ಆಗ ಎಲ್ಲಾ ವಿಧ್ಯಾರ್ಥಿಗಳು ತಮ್ಮ ಉಡುಗೊರೆಯನ್ನು ಕೊಟ್ಟು ಕೃತಜ್ಞತೆ ಮಾತುಗಳನ್ನು ಆಡುತ್ತಾರೆ. ಆಗ ಈತ ತನ್ನ ಎಲ್ಲಾ ಕವನ ಸಂಕಲನದ ಕವನಗಳನ್ನು ಓದಿ ತನ್ನ ಶಿಕ್ಷಕರ ಬಗ್ಗೆ ತನಗಿರುವ ಅಭಿಮಾನ ಅಕ್ಷರದ ಮೂಲಕ ಪ್ರಸ್ತುತ ಪಡಿಸುತ್ತಾನೆ. ಇದನ್ನು ಅರಿತ ಶಿಕ್ಷಕರೆಲ್ಲ ಅಂದೆ ಭವಿಷ್ಯ ನುಡಿಯುತ್ತಾರೆ... ನಿನೊಬ್ಬ ಕವಿಯಾಗುವದರಲ್ಲಿ ಸಂದೇಹವೆ ಇಲ್ಲಾ ಎಂದು.

ಆ ಕವನದ ಶೀರ್ಷಿಕೆ " ಅಕ್ಷರ ಕಲಿಸಿದ ಗುರುಗಳಿಗೆ ಅಕ್ಷರದ ಮಾಲೆ"! ಈ ಸಂಕಲನದ ಸುಮಾರು ಇಪ್ಪತ್ತಕ್ಕು ಹೆಚ್ಚು ಕವನಗಳನ್ನು ತನ್ನ ಶಿಕ್ಷಕರ ಜೊತೆಗೆ ಹಂಚಿಕೊಂಡ ಅನುಭವ ಸಾರವತ್ತಾಗಿ ಚಿತ್ರಿಸಿರುವದನ್ನು ಗಮನಿಸಿದ ಶಿಕ್ಷಕರು ಅವನ ಸಾಧನೆ ಮೆಚ್ಚಿಕೊಳ್ಳುತ್ತಾರೆ . ಈ ಘಟನೆ ನಡೆದಾಗ ಈತ ಇನ್ನು ನಾಲ್ಕನೆ ತರಗತಿಯ ಹುಡುಗ. ಒಂದು ಸಲ ಈತನ ಮಲತಾಯಿ ನೀನು ಶಾಲೆ ಕಲಿತು ಯಾರಿಗೆ ಉದ್ಧಾರ ಮಾಡತಿ ಶಾಲೆ ಕಲಿತೋರು ಯಾರು ಉದ್ಧಾರ ಆಗಿಲ್ಲಾ ಶಾಲೆ ಬಿಟ್ಟು ಕೆಲಸಕ್ಕೆ ಹೋಗು ಎಂದು ಜರಿದಾಗ ಹಠದಿಂದ ಮನೆಯಿಂದ ಊಟ ಮಾಡದೆ ಹೊರಬಂದು ದಿನವಿಡಿ ಊಟವಿಲ್ಲದೆ ಶಾಲೆ ಕಲಿತ ಹಠವಾದಿ. ಮನೆಗೆ ಮರಳುವಾಗ ಪ್ರಜ್ಞೆತಪ್ಪಿ ಬಿದ್ದ ಉದಾಹರಣೆಯಿಂದ ಅವರ ತಾಯಿ ಮುಂದೆಂದು ಆತನ ಶಿಕ್ಷಣ ಆಸಕ್ತಿಗೆ ಎದುರಾಗಲಿಲ್ಲಾ. ಊರಿನ ಜನರೆಲ್ಲಾ ಆಸ್ಪತ್ರೆಗೆ ತೋರಿಸಿದಾಗ ತಿಳಿಯಿತು ಆತ ತನ್ನ ಶಿಕ್ಷಣಕ್ಕಾಗಿ ಹೇಗೆ ಆಸಕ್ತಿ ಇದ್ದಾನೆ ಎಂಬುವುದು.

ಈತ ಯಾವುದೆ ಕೆಲಸ ಮಾಡಿದರು ಶುದ್ಧ ಮನಸ್ಸಿನಿಂದ ಸದ್ಭಾವನೆಯಿಂದ ಉತ್ತಮವಾದ ಕೆಲಸ ನಿರ್ವಹಿಸುತ್ತಿದ್ದನು. ವಿಶ್ವ ಜೀವನದಲ್ಲಿ ದೊಡ್ಡವನಾದಂತೆ ಜವಾಬ್ದಾರಿ ಹೆಚ್ಚಾದವು. ಕನಸುಗಳು ಆಸೆಗಳು ಹೆಚ್ಚಾದವು ಸಾಧನೆಯ ಹಾದಿ ಕೂಡಾ ಹೆಚ್ಚಾದಂತೆ ಭಾಸವಾಗತೊಡಗಿತು. ಆತ ಮುಂದೆ ತನ್ನ ಶಾಲೆ ರಜೆಗಳನ್ನು ತನ್ನ ಕೂಲಿ ಕೆಲಸಕ್ಕೆ ಬಳಸತೊಡಗಿದ. ಬೇಸಿಗೆ ರಜೆಯಲ್ಲಿ ಹೋಟೆಲೊವೊಂದರಲ್ಲಿ ಕೆಲಸ ಮಾಡಿ ತನ್ನ ರಜೆ ಸಾರ್ಥಕ ಪಡಿಕೊಳ್ಳತೊಡಗಿದ. ಮತ್ತೆ ಶಾಲೆಯು ಯಾವುದೆ ಕಾರಣಕ್ಕು ಬಿಡಲಿಲ್ಲಾ. ತನ್ನ ಪಿ.ಯು.ಸಿ ಹಂತದ ಶಿಕ್ಷಣ ಕಡೆಗೆ ವಾಲಿದಾಗ ಆತನ ಕಷ್ಟ ಹೇಳತೀರದು. ಆದರೂ ಈಜಿ ದಾಟಿದ ಆತನಿಗೆ ಬರವಣಿಗೆ ಎಂದರೆ ತುಂಬಾ ಆಸಕ್ತಿ .ಈತ ಹಾಗೆ ಸಮಯ ಸಿಕ್ಕಾಗಲೆಲ್ಲಾ ವಿಷಯ ಕುರಿತು ಬರೆಯುತ್ತಿದ್ದ. ಈತನಿಗೆ ಪತ್ರ ಬರೆಯುವ ಆಸಕ್ತಿ ತುಂಬಾ. ತನ್ನ ಗೆಳೆಯರಿಗೆ ಶಿಕ್ಷಕರಿಗೆ ಮುಖ್ಯಗುರುಗಳಿಗೆ ತನ್ನ ತಂದೆ ತಾಯಿಗೆ ಬರೆಯುತ್ತಿದ್ದ. ಅದರಲ್ಲೂ ವಿಶೇಷವಾಗಿ ತನ್ನ ಗೆಳೆಯರು ಯಾರು ಪ್ರೀತಿ ಪ್ರೇಮ ಮಾಡುತ್ತಾರೋ ಅಂತವರಿಗೆ ಇವನ ಪತ್ರಗಳೆ ದಾರಿದೀಪವಾಗಿ ಕಾಣುತ್ತಿದ್ದವು. ಅವೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು.. ಈ ಹವ್ಯಾಸವೇ ಮುಂದೆ ಜೀವನಕ್ಕೆ ಸಾಧಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಆತ ಎಣಿಸಿರಲಿಲ್ಲಾ .

ತನ್ನ ಶಿಕ್ಷಣದ ಹಾದಿಯನ್ನು ಮುಗಿಸಿ ಶಿಕ್ಷಕ ವೃತ್ತಿಗೆ ಕಾಲಿಟ್ಟಾಗ ಚಿಕ್ಕ ಸಂಬಳದಲ್ಲಿ ಕೆಲಸಕ್ಕೆ ಸೇರುತ್ತಾನೆ. ಎಲ್ಲರ ಬದುಕಿನಲ್ಲಿ ಒಂದು ಹೆಣ್ಣು ಬರುವದು ಸಹಜ ಎನಿಸುತ್ತದೆ. ಹಾಗೆ ಈ ವಿಶ್ವನ ಬದುಕು ಕೂಡಾ ಅದಕ್ಕೆ ಹೊರತಾಗಿಲ್ಲಾ ಎನ್ನುವಂತೆ ವಿಶ್ವ ನ ಜೀವನದಲ್ಲಿ ಒಂದು ಹೆಣ್ಣಿನ ಪ್ರವೇಶವಾಗುತ್ತದೆ . ಯಾರಿಗೆ ಗೊತ್ತಿತ್ತು ಈಕೆಯ ಫಲದಿಂದ ಆತ ಕಾಡಿನಿಂದ ನಾಡಿಗೆ ಬರುತ್ತಾನೆ ಎಂದು! ಅವಳ ಹೆಸರು ಸುಮಾ ಅತ್ಯಂತ ಸುಂದರಿಯು ಹೌದು. ಆಕೆ ಸುಂದರವಾಗಿದ್ದದು ಆತನ ಬಾಳಿನಲ್ಲಿ ಬಂದ ಹೋದ ಸಂಗತಿಯೆ ವಿಚಿತ್ರ...
ಅಂದು ದೀಪಾವಳಿಯ ರಾತ್ರಿ ವಿಶ್ವ ತನ್ನ ಪಾಡಿಗೆ ಯತಾ ಪ್ರಕಾರ ತನ್ನ ಮಾಲಿಕನಾದ ಶಾಂಸುಂದರರಾವ್ ರವರನ್ನು ಕಾಣಲು ಸಾಯಂಕಾಲ ಅವರ ಮನೆಗೆ ಹೋಗುತ್ತಾನೆ. ಹೆಜ್ಜೆ ಹಾಕುತಾ ಅಂದು ಆ ಮನೆಗೆ ತಲುಪಲು ಸ್ವಲ್ಪ ಕತ್ತಲೆಯೆ ಆಗಿತ್ತು ಮನೆ ಮುಂದೆ ನಡೆದ ಚಿಕ್ಕ ಸನ್ನಿವೇಶ ಹೀಗಿದೆ.

ಸರ್ ಮನೆಯಲ್ಲಿ ಯಾರಿದ್ದಿರಾ ? ಯಾವುದೆ ಉತ್ತರವಿಲ್ಲಾ ಮತ್ತೆ ಅದೇ ಕೂಗು ಮತ್ತೆ ಸದ್ದೆ ಇಲ್ಲಾ ನಂತರ ಒಳಗಡೆಯಿಂದ ಹೊರಬಂದ ನಾರಿಯೊಬ್ಬಳು ತಿಳಿ ನೀಲಿಬಣ್ಣದ ಸಿರೆಯಲ್ಲಿ ಚೆಂದ್ರನ ಹೊಳಪಿನಂತಿರುವ ಮುಖದವಳು ನೋಡುಗರ ಕಣ್ಣಿಗೆ ತಣಿಸುವ ಆಕೆ ಅದ್ಭುತ ಸುಂದರಿಯಾಗಿದ್ದಳು. ಆಕೆಯ ನಾಸಿಕ ತನ್ನ ಜಂಬವನ್ನು ಕೂಗಿ ಹೇಳುತ್ತಿತ್ತು ಅವಳ ಆ ಸೌಂದರ್ಯಕ್ಕೆ ಮಾರು ಹೋದವನಂತೆ ಹಾಗೆ ಆಕೆಯನ್ನು ನೋಡುತ್ತಾ ನಿಂತನು ಅಷ್ಟರಲ್ಲಿಯೆ ಆಕೆ ತಾವು ಯಾರು? ಯಾಕೆ ? ಬಂದಿದ್ದೀರಿ ? ಯಾರು ಬೇಕು ಎಂದು ಒಮ್ಮಲೆ ಪ್ರಶ್ನೆ ಕೇಳಿದಾಗ ಮತ್ತಷ್ಟು ದಿಗಿಲು ಬಡಿದಂತಾಗಿ ಗಾಬರಿಯಾಗಿ ತಡವಡಿಸುತ್ತಾ ಹೇಳಿದ.
ಆಯ್ಯಾಮ್ ವಿಶ್ವ ಕಮಿಂಗ್ ಫ್ರಾಂ ಸರ್ ಸ್ಕೂಲ್ ಅಂದಾ... ಆಗ ಆಕೆ ಓ ಓಕೆ ಓಕೆ ಅವರು ಮನೆಯಲ್ಲಿ ಇಲ್ಲಾ ಹೊರಗಡೆ ಹೋಗಿದ್ದಾರೆ ಇನ್ನು ತಡವಾಗಿ ಬರುತ್ತಾರೆ ಎಂದಳು ಏನಾದರು ವಿಷಯ ಇದ್ದರೆ ಮಾರನೆ ದಿನ ತನ್ನ ಶಾಲೆಯತ್ತ ತನ್ನ ಮಕ್ಕಳತ್ತ ಧಾವಿಸಿದ ವಿಶ್ವ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾನೆ ಅಷ್ಟರಲ್ಲಿಯೇ ಮಾಲಿಕರಾದ ಶ್ಯಾಂಸುಂದರ್ ರಾವ್ ರವರು ತನ್ನ ಸೊಸೆಯ ಜೊತೆಗೆ ಶಾಲೆಗೆ ಬರುತ್ತಾರೆ ಎಲ್ಲಾ ಮಕ್ಕಳಿಗೂ ಹಾಗೂ ಸಿಬ್ಬಂದಿಗಳಿಗೂ ಸುಮಾಳನ್ನು ಪರಿಚಯಮಾಡುತ್ತಾ ಇವರು ಇನ್ನು ಮುಂದೆ ಈ ಶಾಲೆಯ ಮುಖ್ಯಗುರುಗಳಾಗಿರುತ್ತಾರೆ ಮತ್ತು ದಿನಾಲೂ ನಿಮಗೆ ಪಾಠ ಕಲಿಸುತ್ತಾರೆ ಎಂದು ತಿಳಿಸಿ ಹೇಳಿದರು.

ಮಕ್ಕಳಲ್ಲಿ ಒಂದು ತರಹದ ಹೊಸ ಅನುಭವವಾಯಿತು ವಿಶ್ವನಿಗಂತು ಇದು ನಂಬಲು ಅಸಾಧ್ಯವಾದ ಮಾತು ಎನಿಸಿತು. ಈಕೆಯನ್ನು ಮನೆಯಲ್ಲಿ ನೋಡಿದ ಇನ್ನು ಇದೇ ಶಾಲೆಗೆ ಬಂದರೆ ಮುಂದೆ ನನ್ನ ಗತಿ ಏನು ಎಂದು ಯೋಚಿಸತೊಡಗಿದ. ಹೀಗೆ ಕೆಲವು ದಿನಗಳು ಕಳೆದು ಹೋದವು ಶಾಲೆಯು ಅಚ್ಚುಕಟ್ಟಾಗಿ ನಡೆಯತೊಡಗಿತು ಎಲ್ಲವು ಸುಗಮವಾಗಿ ನಡೆಯುತ್ತಿರುವಾಗ ಇಬ್ಬರ ಪರಸ್ಪರ ಪರಿಚಯವಾಯಿತು. ಈ ವಿಶ್ವನಿಗೆ ಆಕೆಯನ್ನು ಮಾತನಾಡಿಸಿದಾಗ ಒಂದೊಂದು ಬಾರಿ ಹೊಸ ಅನುಭವವನ್ನು ತಾಳಿ ಹೊಸದೊಂದು ಕವನ ರಚಿಸುತ್ತಾನೆ.

ಅವಳು ಬಂದಾಗಿನಿಂದ ಆತನ ಬರವಣಿಗೆ ಶೈಲಿಯು ಉತ್ತಮಗೊಳ್ಳುತ್ತದೆ ಒಂದು ದಿನ ಹೀಗೆ ಮಾತನಾಡುತ್ತಾ ಕುಳಿತ ಸುಮಾ ಮತ್ತು ವಿಶ್ವ ಅವರಿಬ್ಬರಿಗೂ ಅರಿವಿಲ್ಲದೆ ಪ್ರೀತಿ ಚಿಗುರುತ್ತದೆ. ಸುಮಾ ಆಗಾಗ ಆತ ಬರೆಯುತ್ತಿದ್ದ ಬರವಣಿಗೆಯನ್ನು ಕದ್ದು ಮುಚ್ಚಿ ಗಮನಿಸುತ್ತಾಳೆ ಆತನ ಚಿಂತನೆ ಆತನ ದೇಶಪ್ರೇಮ ಮಕ್ಕಳ ಮೇಲಿನ ಮಮತೆ ಸಾಧನೆಯ ಹಾದಿ ಎಲ್ಲವೂ ಅರಿತಿರುವ ಸುಮಾ ಹೀಗೆ ಆತನ ಪ್ರೀತಿಯಲ್ಲಿ ಮಾರು ಹೋಗುತ್ತಾಳೆ. ಈತನು ಇತ್ತ ತುಂಬಾ ಪ್ರೀತಿಸುತ್ತಾ ಇರುತ್ತಾನೆ ಆದರೆ ಅಲ್ಲಿರುವ ಸಂಧರ್ಬ ಅವರಿರುವ ಹುದ್ದೆ ಎಲ್ಲವೂ ಇದಕ್ಕೆ ಮಾರಕವಾಗಿ ಪರಿಣಮಿಸುತ್ತದೆ, ಇಬ್ಬರು ಈ ಬಗ್ಗೆ ಕುರಿತು ಚಿಂತನೆ ಮಾಡುತ್ತಾರೆ. ಆದರೂ ಪ್ರೀತಿ ಚಿಗುರಲು ಹಾಗೆಯೇ ಬಿಡುತ್ತಾರೆ ಇತ್ತ ವಿಶ್ವ ದಿನೇದಿನೇ ಕವನಗಳನ್ನು ಬರೆಯುವುದು ಪತ್ರ ಬರೆಯುವುದು ಹಾಗೂ ಸಾಧನೆಯ ಕಡೆಗೆ ಗಮನ ಹರಿಸುತ್ತಾ ಕೂಡಾ ಇರುತ್ತಾನೆ.

ವಿಶ್ವನ ಸಾಧನೆಯ ಹಾದಿಯಲ್ಲಿನ ಈ ಬರವಣಿಗೆ ಒಂದು ಪ್ರಮುಖ ಘಟ್ಟವಾಗಬಹುದೆಂದು ಸುಮಾ ಭವಿಷ್ಯ ನುಡಿಯುತ್ತಾಳೆ. ಹೀಗೆ ಅವರಿಬ್ಬರ ಜೀವನ ಶಾಲಾ ಮಕ್ಕಳೊಂದಿಗೆ ಶಾಲಾ ಪರಿಸರದೊಂದಿಗೆ ಸುಮಾರು ವರ್ಷಗಳು ಕಳೆದು ಹೋಗುತ್ತವೆ. ಅವರಿಬ್ಬರ ಪ್ರೀತಿ ಜಗಳ ಮುಂದೆ ಸಾಗುತ್ತದೆ ಆದರೆ ಇವರಿಬ್ಬರಿಗೆ ಕರ್ಮಕಾಂಡ ಕಾದಿದೆ ಎಂದು ತಿಳಿದಿರಲಿಲ್ಲ.

ಮತ್ತೊಂದು ದೀಪಾವಳಿಯ ದಿನವಿದು ಮಕ್ಕಳೊಂದಿಗೆ ದೀಪಾವಳಿಯನ್ನು ಹಬ್ಬ ಆಚರಿಸುತ್ತಾ ಇರುವ ಸಮಯ ಸುಮಾ ಸುಂದರ ಸೀರೆಯನ್ನು ಉಟ್ಟು ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿರುವಾಗ ಪ್ರೀತಿ ತಾನಾಗಿ ಉಕ್ಕಿ ಬರುವಂತೆ ಆಕೆಯನ್ನು ನೋಡಿದ ಯಾವ ಗಂಡಸು ಕೂಡಾ ಸೌಂದರ್ಯಕ್ಕೆ ಮಾರು ಹೋಗಲೆಬೇಕಾದ ವಿಷಯವಾಗಿತ್ತು. ಅಂದು ಅವರಿಬ್ಬರು ಮಾಡಿದ ಚಿಕ್ಕ ಸ್ಪರ್ಷವೆಂದರೆ ನಾಸಿಕದ ಸ್ಪರ್ಶ ಅವರಿಗೇನು ಗೊತ್ತು ಇದು ಕೊನೆಯ ಸ್ಪರ್ಶವೆಂದು...

ಶ್ಯಾಂಸುಂದರ್ ರವರ ಯೋಜನೆ ಮುಗಿಯುವ ಹಂತಕ್ಕೆ ಬರುತ್ತದೆ ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಾ ತನ್ನ ಸೊಸೆಯನ್ನು ಆಕೆಯ ಊರಿಗೆ ಕಳುಹಿಸುತ್ತಾರೆ. ವಿಶ್ವನಿಗೆ ಬೇರೆ ಕೆಲಸ ಕೊಟ್ಟು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುತ್ತಾರೆ. ಈಗ ಇಬ್ಬರು ಪ್ರೇಮಿಗಳು ದೂರವಾಗಿ ಹೋಗುತ್ತಾರೆ. ಮುಂದಿನ ದೀಪಾವಳಿಯನ್ನು ಮೊಬೈಲಿನಲ್ಲೆ ಆಚರಿಸುತ್ತಾರೊ ಅಥವಾ ಮೊದಲಿನಂತೆ ಆಚರಿಸುತ್ತಾರೊ ಎಲ್ಲವೂ ನಿಗೂಢವಾಗಿತ್ತು. ಹೀಗೆ ಅವರ ಮಾತುಗಳ ಮಧ್ಯೆ ಅವರ ಜಗಳಗಳ ಮಧ್ಯೆ ಒಂದು ವರ್ಷ ಕಳೆದೆ ಹೋಗುತ್ತದೆ.

ಒಂದು ದಿನ ವಿಶ್ವ ಕರೆ ಮಾಡಿ ಏನಾದರಾಗಲಿ ಈ ಸಲ ದೀಪಾವಳಿಯನ್ನು ನಿಮ್ಮ ಮನೆಯಲ್ಲಿ ಆಚರಿಸುತ್ತೇನೆ ಎಂದು ಭಾಷೆ ಕೊಡುತ್ತಾನೆ. ಅದಕ್ಕೆ ವಿರೋಧವಾಗಿ ಸುಮಾಳು ನಿನ್ನ ಬರಮೆಯನ್ನು ನನ್ನ ಮನೆಯಲ್ಲಿ ಸಹಿಸುವುದಿಲ್ಲ ಇದು ಆಗದ ಮಾತು ನೀನು ಎಲ್ಲವೂ ಮರೆತು ನಿನ್ನ ಸಾಧನೆಯ ಕಡೆಗೆ ಗುರಿಯ ಕಡೆಗೆ ನಿಗಾ ವಹಿಸು ನಮ್ಮಿಬ್ಬರ ಪ್ರೀತಿ ಒಂದು ಕನಸೆಂದು ಮರೆ ಎಂದು ಉತ್ತರಿಸುತ್ತಾಳೆ. ಆದರೆ ತಾಳ್ಮೆಯಿಲ್ಲದ ವಿಶ್ವ ಅಂದು ದೀಪಾವಳಿಯ ದಿನದಂದು ಆಕೆಯ ಊರಿನ ಕಡೆ ಹೆಜ್ಜೆ ಹಾಕುತ್ತಾನೆ...

ಸುಮಾರು ಯೋಜನೆಗಳನ್ನು ಹಾಕಿಕೋಂಡ ವಿಶ್ವ ತನ್ನ ಮನಸ್ಸಿನೊಳಗೆ ಅನೇಕ ಸಂತೋಷಗಳನ್ನು ಪಡುತ್ತಾ ಹೋಗುತ್ತಾನೆ... ಆಕೆಯ ಊರು ಹತ್ತಿರ ಬಂದಂತೆ ಆತನಿಗೆ ಉದ್ವೇಗ ಹೆಚ್ಚಾಗಿ ಆಕೆಯೊಂದಿಗಿನ ಮಾತುಗಳನ್ನು ಮೆಲುಕು ಹಾಕುತ್ತಾ ಊರಿಗೆ ಬಂದು ಇಳಿಯುತ್ತಾನೆ. ಊರಿನ ತುಂಬಾ ದೀಪದ ಬೆಳಕು ಪಠಾಕಿಗಳ ಸದ್ದು ಊರ ತುಂಬಾ ಗಲಾಟೆ ಎಲ್ಲವೂ ನೋಡಿ ಸಂತೋಷ ಗೊಳ್ಳುತ್ತಾನೆ... ಇನ್ನು ಸುಮಾಳ ಮನೆಯನ್ನು ಹುಡುಕಲು ಹರಸಾಹಸವೇ ಮಾಡಬೇಕಾಯಿತು... ಆತನ ದೃಷ್ಠಿ ಒಮ್ಮೆಲೆ ಒಂದು ಮನೆಯತ್ತ ಬೀಳುತ್ತದೆ ಎಲ್ಲರ ಮನೆಯಲ್ಲಿ ಪಠಾಕಿಗಳ ಸದ್ದಿದ್ದರೆ ಈ ಮನೆಯಲ್ಲಿ ಮಾತ್ರ ಮೌನ ಆವರಿಸಿತ್ತು ...ಒಂದು ತರಹದ ಅರ್ಥನಾದ ತಿಳಿಸುತ್ತಿತ್ತು ...ಆ ಮನೆಯನ್ನು ಹೊರತು ಪಡಿಸಿ ಬೇರೆ ಮನೆಯ ಕಡೆಗೆ ನೋಡುತ್ತಾನೆ... ಹಾಗೆ ಆಕೆಯ ಮೊಬೈಲ್ ಗೆ ಒಂದು ಕರೆಯನ್ನು ಮಾಡುತ್ತಾನೆ... ಯಾರೋ ಮೊಬೈಲ್ ಕರೆಯನ್ನು ಮಾತನಾಡಿ ಅವರ ಮನೆಯಲ್ಲಿ ತೀರಿಕೊಂಡಿದ್ದಾರೆ ತಾವ್ಯಾರು ಎಂದು ಪ್ರಶ್ನೆ ಕೇಳುತ್ತಾರೆ... ಇದನ್ನು ವಿಶ್ವನಿಗೆ ಮುಂದೇನು ಮಾತನಾಡಬೇಕು ಎಂಬುವದು ಅರ್ಥವಾಗದೆ ಮುಂದೇನು ಮಾತನಾಡುವುದು ಎಂದು ಕರೆ ಕಟ್ ಮಾಡುತ್ತಾನೆ....

ವಿಶ್ವನಿಗೆ ಏಕಾಏಕಿ ಆಕೆ ಹೇಳಿದ ಒಂದು ಮಾತು ನೆನೆಪಾಗುತ್ತದೆ ತನ್ನ ಮನೆಯಲ್ಲಿ ಒಬ್ಬ ಅಜ್ಜಿ ಇರುವುದಾಗಿ ಹೇಳಿದ್ದಳು ಅವಳೇನಾದರೂ ತೀರಿಕೊಂಡಳೆ ಎಂದು ತಿಳಿದು ಆ ಮೌನಾವರಿಸಿದ ಮನೆಯತ್ತ ಧಾವಿಸುತ್ತಾನೆ ಮನೆಯ ಮುಂಭಾಗದಲ್ಲಿ ಹೆಜ್ಜೆ ಇಟ್ಟ ತಕ್ಷಣವೇ ಅಲ್ಲಿಯ ಜನ ಆಡುತ್ತಿರುವ ಕೆಲವು ಮಾತುಗಳು ಈತನ ಕಿವಿಗೆ ಬೀಳುತ್ತವೆ ಈ ಹುಡುಗಿ ತುಂಬಾ ಚಿಕ್ಕವಳು ಇನ್ನು ಮದುವೆ ಇಲ್ಲ ಮುಂಜಿ ಇಲ್ಲ ಅದು ಇಂತಹ ದೀಪಾವಳಿಯ ದಿನವೇ ಸಾವು ಬರಬೇಕೆ... ಎಂತಹ ಸಾವು ಆಕೆಯದು ತುಂಬಾ ಸುಂದರವಾಗಿದ್ದ ಈ ಹುಡುಗಿ ಮುಂದಿನ ಜೀವನವು ಕೂಡಾ ಸುಂದರವಾಗಿರುತ್ತಿತ್ತು... ಆದರೆ ದೇವರಿಗೆ ಅದು ಇಷ್ಟವಿರಲಿಲ್ಲ ಎನಿಸುತ್ತದೆ ಈ ಕುಟುಂಬದ ಜೀವನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ ಈ ಮಾತನ್ನು ಕೇಳಿದ ವಿಶ್ವನ ಎದೆ ಝೆಲ್ಲೆಂದಿತು.

ಹಾಗೆ ಒಂದು ಹೆಜ್ಜೆ ಕಿತ್ತಿಡುವ ತಕ್ಷಣವೇ ನೀಳಾಕಾರದ ಸೀರೆಯ ಉಟ್ಟು ಇನ್ನೆನು ಹಾಲು ಕುಡಿದು ಮಲಗಿರುವ ಸುಂದರ ಹೆಣ್ಣು ಮಗುವಿನಂತೆ ಅವನ ಪ್ರೇಯಸಿ ಕಣ್ಣು ಮುಚ್ಚಿ ಮಲಗಿದ್ದಳು. ಈ ದೃಷ್ಯ ನೋಡಿದ ತಕ್ಷಣ ನಿಂತಲ್ಲಿಯೇ ಕುಸಿದು ಬಿದ್ದ ಅಲ್ಲಿ ನೆರೆದಿರುವ ಜನರಿಗೆ ಈತ ಯಾರು ಎಂಬುವುದೇ ಗೊತ್ತಿರಲಿಲ್ಲ. ಕೆಲವರು ಗೆಳೆಯ ಎಂದರೆ ಕೆಲವರು ಸಂಬಂದಿಕರು ಇರಬಹುದು ಹಾಗೆ ಧಾವಿಸುತ್ತಾ ಆಕೆಯ ಮುಖ ನೋಡಿ ಅಳುವು ತಾಳದೆ ಹಿಂದಿರುಗುತ್ತಾನೆ. ವಿಶ್ವನಿಗೆ ಹುಚ್ಚೆ ಹಿಡಿಯಿತು ಎನ್ನುವಷ್ಟರ ಮಟ್ಟಿಗೆ ಅಳುತ್ತಾನೆ. ಮೂರು ದೀಪಾವಳಿಗಳನ್ನು ಒಟ್ಟಿಗೆ ಆಚರಿಸಿದ ಇವರು ಈ ಮೂರನೇ ದೀಪಾವಳಿಯ ಆಕೆಯ ದಿವ್ಯ ಸೌಂದರ್ಯದ ಬೆಳಕಿನಲ್ಲಿ ಆಕೆಯ ನೆನಪುಗಳು ಲೀನವಾಗುತ್ತವೆ .

ಹೀಗೆ ಆಕೆಯ ನೆನಪುಗಳನ್ನು ತನ್ನ ಹೃದಯದಲ್ಲಿ ಸ್ಮರಿಸುತ್ತಾ ಕೆಲವು ದಿನಗಳು ಕಳಿದ ನಂತರ ಆಕೆಯು ಬರೆದ ಒಂದು ಪತ್ರ ವಿಶ್ವನ ಕೈ ಸೇರುತ್ತದೆ ಅದರ ಸಾರ ಹೀಗಿದೆ." ಆತ್ಮಿಯಾ ಒಡೆಯ ಈ ಹೃದಯದ ಮಾತೊಂದು ನಿನ್ನೊಂದಿಗೆ ಹಚ್ಚಿಕೊಳ್ಳುತ್ತಿದ್ದೇನೆ ನಿನ್ನ ಮುಗ್ದ ಮನಸ್ಸಿಗೆ ನೊವು ಆಗಬಹುದು ಎನಿಸುತ್ತೆ... ಆದರೆ ಇದು ನನ್ನ ಹೃದಯದ ಕೊನೆಯ ಮಾತು ನೀನು ಕೇಳಲೆಬೇಕು ನಾನು ಬೇಡಿಕೊಂಡತೆ ನೀನು ನಡೆಯಲೆಬೇಕು. ವಿಶ್ವ ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸಿರುವ ಏಕೈಕ ವ್ಯಕ್ತಿಗಳೆಂದರೆ ನನ್ನ ತಾಯಿ ಮತ್ತು ತಂದೆ ಅವರ ನಂತರ ನಿನ್ನನ್ನೆ ಅತಿಯಾಗಿ ಪ್ರೀತಿಸಿದ್ದು. ನಿನ್ನ ಗುಣಗಾಕ್ಕೆ ನನ್ನಲ್ಲಿ ಪದಗಳಿಲ್ಲಾ... ಆದರೆ ಅಪಾರ ಅಭಿಮಾನವಿದೆ... ನಿನ್ನ ಸಾಧನೆಯ ಹಾದಿ ತುಂಬಾ ಮನಸ್ಸಿಗೆ ಬಂತು ನಿನ್ನಂತಹ ಯುವಕರು ಸಿಗುವುದು ಕೆಲವರು ಮಾತ್ರ ... ಈ ಯುಗದಲ್ಲಿ ಬರಿ ಪಠ್ಯ ಓದದೆ ಕಾಲಹರಣ ಮಾಡುವ ಯುವಕರಿದ್ದಾರೆ... ಆದರೆ ನಿನ್ನ ವಿಚಾರಗಳು ಆಸಕ್ತಿ, ಯೋಚಿಸುವ ರೀತಿ ಎಲ್ಲವು ವಿಬಿನ್ನವಾಗಿದೆ... ಅದೂ ಈ ಯುಗಕ್ಕೆ ಬೇಕಾದ ಒಂದು ಅವಶ್ಯಕತೆ... ಇದೆ... ಅದನ್ನು ಮುಂದುವರೆಸು. ಇದು ನನ್ನ ಕೊನೆಯ ಪತ್ರವಾಗಿದೆ. ಆದರೆ ನನ್ನ ಮನಸ್ಸು ಹೃದಯ ಮಾತ್ರ ಯಾವಾಗಲು ನಿನ್ನಲ್ಲಿಯೆ ಇರುತ್ತದೆ. ಮರೆಯಬೇಡಾ ಹಾಗೆಯ ನನಗೊಂದು ಆಸೆ. ನೀನು ಈ ಜಗತ್ತು ನೋಡುವ ಹಾಗೆ ಒಂದು ಸಾಧನೆಯನ್ನು ಮಾಡಬೇಕು ಎಲ್ಲರು ನೋಡಿ ಇದು ಅದ್ಬುತ ಎನ್ನುವಂತೆ ಸಾಧಿಸಬೇಕು. ಆ ಸಾಧನಯ ಹಾದಿಯಲ್ಲಿ ನನ್ನ ನೆನಪಿದ್ದರೆ ಸಾಕು. ಆದಷ್ಟು ಬೇಗ ಈ ಕೆಲಸವನ್ನು ನಿನ್ನಿಂದ ನೆರವೇರಲಿ ಎಂದು ಆಶಿಸುತ್ತೇನೆ. ಹಾಗೂ ಈ ಸಾಧನೆ ನೀನು ನಿಜವಾಗಿ ಮಾಡಿಯೆ ತಿರುತ್ತಿ ಎಂದು ನಂಬಿದ್ದೇನೆ. ಇಂತಿ ನಿನ್ನ ಪ್ರೀತಿಯಾ ಸುಮಾ..

ಈ ಪತ್ರ ಓದಿದ ಈತ ತನ್ನ ಜೀವನದ ಗುರಿಯೇನು ಎಂಬ ಕಲ್ಪನೆ ಮೂಡಿಸಿಕೊಳ್ಳುತ್ತಾನೆ. ಹಾಗೆಯೆ ಆಕೆಯ ನೆನಪಲ್ಲಿ ಕೆಲವು ಬರಹ ಕೆಲವು ಕವನ ಬರೆಯಲು ಪ್ರಾರಂಬಿಸುತ್ತಾನೆ. ಬರವಣಿಗೆಯ ಬೆನ್ನು ಹತ್ತಿ ಅನೇಕ ಎಡರತೊಡರುಗಳನ್ನು ದಾಟುತ್ತಾ ಕೊನೆಗೆ ಸಾಕು ಇದು ಆಗಲ್ಲಾ ಎನ್ನುವಷ್ಟು ಬೇಸರಕ್ಕೆ ಮಾರುಹೋಗುತ್ತಾನೆ. ಆದರು ಮತ್ತೆ ಎಚ್ಚೆತ್ತು ತನ್ನ ಪ್ರೇಯಸಿಗೆ ಬರೆದ ಹಲವು ಪ್ರೇಮ ಪತ್ರಗಳನ್ನು ಒಂದು ಕಡೆ ಕಲೆಹಾಕುತ್ತಾ ಹೋಗುತ್ತಾನೆ ಅದರ ಬಗ್ಗೆ ಚಿಂತಿಸುತ್ತಾ ಮತ್ತೆ ಬರವಣಿಗೆ ಕಡೆಗೆ ಗಮನ ಹರಿಸುತ್ತಾನೆ.

ಆತ ಬರೆದ ಮೊದಲ ಒಂದು ಬರಹವೆಂದರೆ ' ಅನ್ನವಿಲ್ಲದೆ ಸಾಯುತ್ತಿರುವರು ಹಲವರು ಅನ್ನವಿದ್ದು ಸಾಯುತ್ತಿರುವರು ಕೆಲವರು ಅನ್ನದ ಬಗ್ಗೆ ಬರೆದ ಈ ಲೇಖನ ಯಾವಾಗಿನಂತೆ ಎಲ್ಲಾ ಪತ್ರಿಕೆಗಳಿಗೂ ಕಳಿಸುತ್ತಾನೆ ಆಗ ಸುಮಾರು ದಿನಗಳ ನಂತರ ಬೆಂಗಳೂರಿನಿಂದ ಕರೆಯೊಂದು ಬರುತ್ತದೆ. ಸರ್ ನಾವು ರಾಜ್ಯದ ಒಂದು ಪತ್ರಿಕೆಯಿಂದ ಮಾತಾನಾಡುತ್ತಿದ್ದೇವೆ . ನೀವು ಕಳುಹಿಸಿದ ಬರಹಗಳನ್ನು ನಮ್ಮ ಪತ್ರಿಕೆಯಲ್ಲಿ ಹಾಕಿಕೊಳ್ಳುತ್ತಿದ್ದೇವೆ ಅದಕ್ಕಾಗಿ ನಿಮಗೆ ತಿಳಿಸುತ್ತೀದ್ದೇವೆ. ಇದಕ್ಕಾಗಿ ನಿಮಗೆ ಗೌರವಧನವನ್ನು ನಿಮ್ಮ ವಿಳಾಸಕ್ಕೆ ಚೆಕ್ ನ್ನು ಕಳಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಈ ಸುದ್ದಿ ತಿಳಿದ ವಿಶ್ವನಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಹೀಗೆ ಆತನ ಬರವಣಿಗೆ ಜೀವನ ಮುಂದುವರಿಯುತ್ತದೆ. ಆತ ಮುಂದೊಂದು ದಿನ ಹಲವು ಪತ್ರಿಕೆಗಳಿಗೆ ಹಲವು ಬರಹಗಳು ಬಿಡುಗಡೆಯಾಗಿ ಪ್ರಸಿದ್ದನಾಗುತ್ತಾನೆ ಈಡಿ ರಾಜ್ಯದಲ್ಲಿ ತನ್ನ ಓದುಗರನ್ನು ಸೃಷ್ಠಿಸಿಕೊಳ್ಳುತ್ತಾನೆ.

ಒಂದು ಸುಂದರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡುವ ಕಾರ್ಯಕ್ರಮವಿರುತ್ತದೆ. ಅಲ್ಲಿ ತನ್ನ ಮಾತಿನಲ್ಲಿ ತನಗೆ ಸ್ಪೂರ್ತಿಯಾದ ತಂದೆ ತಾಯಿ ಹಾಗೂ ಪ್ರೇಮ ದೇವತೆ ಮತ್ತು ತನ್ನ ಬರವಣಿಗೆ ಬೆಳೆದು ಬಂದ ಹಾದಿಯ ಬಗ್ಗೆ ನೆನಪು ಮಾಡುತ್ತಾನೆ ಮತ್ತು ಅದರ ಹಿನ್ನಲೆ ಬಿಚ್ಚಿಡುತ್ತಾನೆ ಈತ ಬರೆದ ಹಲವು ಬರಹಗಳು ಕಥೆಗಳು ಮುಂದೆ ಸಮಾಜದ ಕೆಲವು ಓರೆಕೊರೆಗಳನ್ನು ತಿದ್ದಲು ಸಾಹಾಯಕವಾಗುತ್ತವೆ.

ಅನೇಕ ಕಥೆಗಳು ಮಕ್ಕಳ ಪುಸ್ತಕದ ಭಾಗವಾಗಿ ಎಲ್ಲರ ಮೆಚ್ಚುಗೆಯ ಕವಿಯಾಗುತ್ತಾನೆ. ಶಿಕ್ಷಣಕ್ಕೆ ಇವರ ಬರಹ ಅವಶ್ಯಕ ಎಂದು ಅನಿಸಲು ಕಾರಣನಾಗುತ್ತಾನೆ. ಇಂತಹ ಮಾಹನ್ ವ್ಯಕ್ತಿ ಮುಂದೆ ಸಮಾಜದ ಅನೇಕ ರೀತಿಯ ಬದಲಾವಣೆ ಮಾಡಿ ಮುಂದಿನ ತನ್ನ ಬದುಕು ಬದಲಾಯಿಸಿಕೊಂಡು ಜೀವನ ಮುಂದಿನ ಬದುಕನ್ನು ತನ್ನ ಸುಮಾಳ ಜೊತೆಯೆ ಕಳಿಯುತ್ತಾನೆ ಈಗ ಅವಳೆಲ್ಲಿಂದ ಬಂದಳು ಎಂದಿರಾ ಅದೂ ಅವನ ಮಗಳ ಹೆಸರು. ಹತ್ತು ವರುಷದ. ಹುಡುಗಿ ತುಂಬಾ ಮುಗ್ದೆ ಹಾಗೂ ಚೂಟಿ. ಯಾವಾಗಲು ದೊಡ್ಡ ದೊಡ್ಡ ಮಾತೆ ಆಡುತ್ತಾಳೆ. ಹಾಗೂ ದೊಡ್ಡ ವ್ಯಕ್ತಿಗಳ ಜೊತೆಗೆ ಮಾತಾಡುತ್ತಾಳೆ... ಎಷ್ಟಾದರು ದೊಡ್ಡ ವ್ಯಕ್ತಿಯ ಮಗಳಲ್ಲವೆ?

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

0 comments:

Post a Comment