ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಪೋಲಿಸ್ ಇಲಾಖೆಯೆಂದರೆ ರೌಡಿಗಳನ್ನು ಮಟ್ಟ ಹಾಕುವ, ವಂಚಕರನ್ನು ಸೆರೆ ಹಿಡಿಯುವ, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯಕಾಪಾಡುವ ನಿಟ್ಟಿನಲ್ಲಿ ತಮ್ಮ ಹೃದಯವನ್ನು ಕಠೋರ ಮಾಡಿಕೊಂಡು, ಅದನ್ನು ತಮ್ಮ ಪೊಲೀಸ್ ಮತ್ತು ವೈಯುಕ್ತಿಕ ಜೀವನದಲ್ಲಿ ಮೈಗೂಡಿಸಿಕೊಂಡು ಹೊರಗಿನ ವ್ಯಕ್ತಿಗಳಿಗೆ ಕಠೋರವಾಗಿ ಕಾಣುತ್ತಾರೆ. ಆದರೆ ಇಂಥ ಇಲಾಖೆಯಲ್ಲಿಯೂ ಸಹ ಕವಿ ಹೃದಯ ಇದೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಅವರೇ ಆಶೋಕ ಕೊಂಡ್ಲಿ.

ಕಳೆದ 10 ವರ್ಷದಿಂದ ಹಾವೇರಿ ಜಿಲ್ಲೆಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶೋಕ ಪೊಲೀಸ್ ಇಲಾಖೆಗೆ ಮಾದರಿಯಾಗಿದ್ದಾರೆ. ಇವರಲ್ಲಿರುವ ಹಾಸ್ಯ ಕವಿತೆಗಳುನ್ನು ಕಂಡು ಹಿರಿಯ ಆಧಿಕಾರಿಗಳು ತಲೆದೂಗಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯ ಅಮ್ಮಿನಬಾವಿಯವರಾದ ಇವರು ಒಬ್ಬ ಬಡಕೂಲಿಕಾರನ ಮಗನಾಗಿ ಬಡತನದ ಮಧ್ಯೆಯೂ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆಗೊಂಡು ತಾವೂ ಕೂಡಾ ತಂದೆಯ ಜೊತೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾಗ ಆಕಸ್ಮಕವಾಗಿ ದೊರೆತ ಈ ಪೋಲಿಸ್ ಹುದ್ದೆಯನ್ನು ಪ್ರೀತಿ ಗೌರವದಿಂದ ಸ್ವೀಕರಿಸಿದ ಇವರು ಹಾವೇರಿ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ ತಮಗೆ ಅಲ್ಪ ಬಿಡುವಿನ ವೇಳೆಯಲ್ಲಿ ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಆದ ಘಟನೆಗಳನ್ನು ಕವಿತೆಗಳ ಮೂಲಕ ಹೊರಹೊಮ್ಮಿಸಿ ಇಲಾಖೆಗೆ ಹೆಸರು ತಂದಿದ್ದಾರೆ.


ಸಮಾಜದ ಸಾಮಾನ್ಯ ಜನರ ಜೀವನ ಮೂಢನಂಬಿಕೆಗಳು, ಸಮಾಜಿಕ ಪ್ರಜ್ಞೆ, ಪೋಲಿಸರ ಮಹತ್ವ, ಪರಿಸರ ಪ್ರಜ್ಞೆ, ಇವೇ ಮುಂತಾದ ಸಂಗತಿಗಳು ಆಶೋಕರವರ ಚುಟುಕುಗಳು ವಸ್ತುಗಳಾಗಿವೆ.ಕರ್ತವ್ಯನಿರತವಾಗಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಬಸ್ ನಿಲ್ದಾಣದ ಬಳಿ ಕಾವಲು ಕಾಯುತ್ತಿದ್ದಾಗ ಕಂಡ ದೃಶ್ಯಗಳೂ ಸಹ ಅವರ ಚುಟುಕಗಳಲ್ಲಿ ಒಡಮೂಡಿವೆ.

ಚಿಕ್ಕಂದಿನಿಂದಲೇ ಕಥೆ, ಕವನ,ಸಾಹಿತ್ಯವನ್ನು ಓದುವ ಗೀಳನ್ನು ಹಚ್ಚಿಕೊಂಡಿರುವ ಇವರಿಗೆ ಸಾಹಿತ್ಯ ರಚನೆ ಕಡೆಗೆ ಗಮನ ಹರಿದ ಪ್ರಯುಕ್ತ ಮೂರು ಕವನ ಸಂಕಲನಗಳನ್ನು ಮತ್ತು ಹನಿಗವನಗಳನ್ನು ರಚಿಸಿದ್ದಾರೆ. ಮೊಡಗಳಿಲ್ಲದ ಮುಗಿಲು, ನಾ ಮರೆಯಲಿ ಹೆಂಗ್, ಹಾಗೂ ಬಸ್ಸಿನಲ್ಲಿ ಬಾಂಬ್, ಎಂಬ ನಗೆ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಿರುವ ಇವರಿಗೆ ಅನೇಕ ಪ್ರಶಸ್ತಿಗಳು ಸನ್ಮಾನಗಳು ಇವರನ್ನು ಹುಡುಕಿಕೊಂಡು ಬಂದಿವೆ.
ಉದಯ ಟಿ.ವಿ.ಯಲ್ಲಿ ಬರುವ 'ನಗೆ ಸಖತ್ಸವಾಲ್' ಕಾಮಿಡಿ ಕಿಲಾಡಿಗಳು, ಚಂದನ ಟಿ.ವಿ ಯಲ್ಲಿ ಬೆಳಗು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸುಮಾರು 250 ಕ್ಕೂ ಹೆಚ್ಚು ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿರುತ್ತಾರೆ.


ಅನೇಕ ಹಾಸ್ಯಸಂಜೆ, ಹಾಗೂ ಹಾಸೋತ್ಸವಗಳಲ್ಲಿ, ಸಾಕ್ಷರತಾ ಕಾರ್ಯಕ್ರಮಗಳಲ್ಲಿ,ಜಾತ್ರಾ ಮಹೋತ್ಸವಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಿರುವ ಇವರು ಈಗಾ ಐದಾರು ಜನರ ಒಂದು ತಂಡವನ್ನು ಕಟ್ಟಿಕೊಂಡು ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಹಳ್ಳಿಗಳಿಗೆ ಹೋಗಿ ಮೂಢನಂಬಿಕೆ, ಸಾಕ್ಷರತೆಯ ಬಗ್ಗೆ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರಿಗೆ ತಿಳುವಳಿಕೆಯನ್ನು ನೀಡುತ್ತಿದ್ದಾರೆ.

ಇವರ ಕವನ ಸಂಕಲನಗಳನ್ನು ಓದಿದರೆ ಅವರ ಸಾಹಿತ್ಯದ ಸವಿ ನೋಡಬಹುದು. ಕೇವಲ ಕವಿತೆಗಳನ್ನು ಬರೆಯುವುದರಷ್ಟೇ ಅಲ್ಲಾ ತಮ್ಮ ಕರ್ತವ್ಯಗಳನ್ನು ಅಷ್ಟೇ ಪ್ರಾಮಾಣಿಕವಾಗಿ ನಿಭಾಯಿಸಿ ಇಲಾಖೆಯ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು, ಸಿಬ್ಬಂದಿವರ್ಗ ಇವರ ಸಾಹಿತ್ಯತೃಷೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನು ಹೆಚ್ಚಿನ ಕವಿತೆಗಳು ಇವರ ಲೇಖನಿಯಿಂದ ಬರಲಿ ಸಮಾಜದ ಲೋಪದೋಷಗಳನ್ನು ತಿದ್ದುವಂತಾಗಲಿ. ಜನರ ಹೃದಯಕ್ಕೆ ತಲುಪಲಿ ಎನ್ನುವುದು ಎಲ್ಲರ ಆಶಯ

ಟಿ.ಶಿವಕುಮಾರ್
ಸ.ಹಿ.ಪ್ರಾ.ಶಾಲೆ ಅರಳೇಶ್ವರ, ಹಾನಗಲ್ಲ

0 comments:

Post a Comment