ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:07 AM

ಜ.5 - 9: ರಾಮಕಥೆ

Posted by ekanasu

ರಾಜ್ಯ - ರಾಷ್ಟ್ರ

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಪ್ರವಚನದೊಂದಿಗೆ 2013ರ ಜನವರಿ 5ರಿಂದ 9ರ ತನಕ ಪ್ರತಿದಿನ ಸಂಜೆ 6ರಿಂದ ಪುಣ್ಯಕೋಟಿ ನಗರ - ಕೈರಂಗಳ ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿ ಜಗದೊಳಿತಿಗೆ ಜಗದ್ಗುರುವಿನಿಂದ ಶ್ರೀ ರಾಮಾಯಣದ ಮಹಾದರ್ಶನ "ಶ್ರೀರಾಮಕಥಾ" ಕಾರ್ಯಕ್ರಮ ನಡೆಯಲಿದೆ.
ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಪುಣ್ಯಕಥೆಯಾದ ರಾಮಾಯಣವನ್ನು ಭವ್ಯವಾದ ವೇದಿಕೆಯಲ್ಲಿ ಪವಿತ್ರ ಅರ್ಚನೆ, ಉನ್ನತ ನಿರೂಪಣೆ, ಶ್ರೇಷ್ಠ ಸಾಹಿತ್ಯ, ಸುಶ್ರಾವ್ಯ ಸಂಗೀತ, ಸುಮಧುರ ವಾದನ, ವಿಶೇಷ ರೂಪಕ, ಅದ್ಭುತ ದೃಶ್ಯ ವೈಭವ, ನಯನ ಮನೋಹರ ಚಿತ್ರಕಲೆ, ಕೈ ಚಳಕದ ಮರಳು ಶಿಲ್ಪ, ಯಕ್ಷಗಾನ ಇವುಗಳ ಸಂಗಮದೊಂದಿಗೆ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳು ಪ್ರವಚನಗೈಯಲಿದ್ದಾರೆ.ಈ ಅನರ್ಘ್ಯ ಕಾರ್ಯಕ್ರಮಕ್ಕೆ ಆಸ್ತಿಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.

0 comments:

Post a Comment