ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮೂಡಬಿದಿರೆ: ಆಳ್ವಾಸ್ ಕಾಲೇಜು ಆಂಗ್ಲಭಾಷಾ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ವೈ ಪಾಟೀಲ್ ಅವರಿಗೆ ನವದೆಹಲಿಯ ಗ್ಲೋಬಲ್ ಸೊಸೈಟಿ ಫಾರ್ ಹೆಲ್ತ್ ಅಂಡ್ ಎಜುಕೇಷನಲ್ ಗ್ರೋಥ್ ಸಂಸ್ಥೆಯಿಂದ ನೀಡಲ್ಪಡುವ ಪರಮೋಚ್ಛ ರಾಷ್ಟ್ರೀಯ ಪ್ರಶಸ್ತಿ "ಭಾರತ್ ಶಿಕ್ಷಾ ರಥನ್ ಅವಾರ್ಡ್" ಲಭಿಸಿದೆ.ಇಂಡಿವಿಜ್ಯುವಲ್ ಅಚೀವ್ ಮೆಂಟ್ಸ್ ಅಂಡ್ ನ್ಯಾಷನಲ್ ಡೆವಲಪ್ ಮೆಂಟ್ " ವಿಷಯದಲ್ಲಿ ಇದೇ ದಶಂಬರ್ 17ರಂದು ನವದೆಹಲಿಯಲ್ಲಿ ನಡೆದ 36ನೇ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು.

ಡಾ.ಬಿ.ವೈ ಪಾಟೀಲ್ ಅವರು ಸಂಶೋಧನಾ ಕ್ಷೇತ್ರದಲ್ಲಿ ನಡೆಸಿದ ಸಾಧನೆ, ಈ ತನಕ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸೇವೆ ಹಾಗೂ ಸಮರ್ಥ ಸಂಶೋಧನಾ ಮಾರ್ಗದರ್ಶನ ಸೇವೆಗಳನ್ನು ಪರಿಗಣಿಸಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಡಾ.ಬಿ.ವೈ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ತನಕ 33 ಮಂದಿ ಎಂ.ಫಿಲ್ ಪದವಿ ಹಾಗೂ 7 ಮಂದಿ ಪಿ.ಎಚ್.ಡಿ. ಪದವಿಯನ್ನು ಪೂರೈಸಿರುತ್ತಾರೆ. ಶಿಕ್ಷಣ, ಸಂಶೋಧನೆ, ಮಾರ್ಗದರ್ಶನ ಕ್ಷೇತ್ರದಲ್ಲಿ ನಿರಂತರ ಕ್ರಿಯಾಶೀಲವಾಗಿ ಇವರು ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಸಾಧನೆಗೆ ಅಭಿನಂದನೆ

ಡಾ.ಬಿ.ವೈ ಪಾಟೀಲ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದಕ್ಕೆ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಹಲವು ಶಿಕ್ಷಕರು ಈ ರೀತಿಯ ಸಾಧನೆಯನ್ನು ನಿರಂತರ ಮಾಡುತ್ತಾ ಬರುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದ್ದಾರೆ.

0 comments:

Post a Comment