ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಧರ್ಮಸ್ಥಳ: ರಾಜ್ಯ ಸರಕಾರ ಸಂಪೂರ್ಣ ಕುಸಿದು ಹೋಗಿದೆ. ಯಾರಿಗೂ ಅಭಿವೃದ್ಧಿಯ ಬಗೆಗಿನ ಚಿಂತೆಯೇ ಇಲ್ಲದಾಗಿದೆ. ಈ ಕಾರಣಕ್ಕಾಗಿ ಸರಕಾರದ ಅನೇಕ ಯೋಜನೆಗಳು ಕಡತದಲ್ಲಷ್ಟೇ ಉಳಿದು ಹೋಗಿವೆ. ಇವುಗಳ ಅನುಷ್ಠಾನವನ್ನು ಒತ್ತಾಯಿಸಿ ವಿಧಾನ ಸೌಧ ಚಲೋ, ಜಿಲ್ಲಾ ಮಟ್ಟದ ಹೋರಾಟ, ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಧರ್ಮಸ್ಥಳಕ್ಕೆ ಆಗಮಿಸಿದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬೇಕೆಂದು ಜನ ಅಪೇಕ್ಷಿಸಿದ್ದಾರೆ. ರಾಜ್ಯದ ಜನತೆಗೆ ಅಭಿವೃದ್ಧಿ ಪರ ಚಿಂತನೆ ಮಾಡುವ ಸರಕಾರದ ಅವಶ್ಯಕತೆಯೊಂದಿದೆ. ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೆ.ಜೆ.ಪಿ ಪಕ್ಷಕ್ಕೆ ಸುಮಾರು 25 ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ 3 ಲಕ್ಷ ಮಂದಿ ಸದಸ್ಯರು ರಾಜ್ಯದಲ್ಲಾಗಿದೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಸಂಚರಿಸಿದ ಸಭೆಗಳನ್ನು ಸಮಾವೇಶಗಳನ್ನು ನಡೆಸಿ ಸಂಘಟನಾ ಕಾರ್ಯ ಮುಂದುವರಿಸಲಾಗುವುದು ಎಂದರು.
ತನ್ನದು ಸೇಡಿನ ರಾಜಕಾರಣವಲ್ಲ ಬದಲಾಗಿ ಕನಸನ್ನು ನನಸು ಮಾಡುವ ರಾಜಕಾರಣ. ಆ ಕಾರಣಕ್ಕಾಗಿಯೇ ಬಿಜೆಪಿ ತೊರೆದು ಕೆ.ಜೆ.ಪಿ ಸ್ಥಾಪಿಸಿದ್ದೇನೆ. ಕೆ.ಜೆ.ಪಿ ಮೂಲಕ ತನ್ನ ಕನಸನ್ನು ನನಸು ಮಾಡುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ.
ಮುಂದಿನ ವಿಧಾನ ಸಭಾಚುನಾವಣೆಯಲ್ಲಿ ಕೆ.ಜೆ.ಪಿ ಬಹುಮತದಿಂದ ಆರಿಸಿ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎಂದೂ ಯಾವ ಪಕ್ಷದೊಂದಿಗೂ ಮೈತ್ರಿ ಮಾಡುವುದಿಲ್ಲ ಎಂದ ಯಡಿಯೂರಪ್ಪ ಗುಜರಾತ್ ನಲ್ಲಿ ಬಿಜೆಪಿ ಗೆದ್ದಿಲ್ಲ ಬದಲಾಗಿ ಮೋದಿಯವರ ವೈಯಕ್ತಿಕ ವರ್ಚಸ್ಸು ಆ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದರು.

0 comments:

Post a Comment