ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಇದೂ ಹೌದು... ಬಿಡೋಣ ಅಸಡ್ಡೆ...ತಿನ್ನೋಣ ಗಡ್ಡೆ... ಇದೊಂದು ವಿಶಿಷ್ಟ ಕಾರ್ಯಕ್ರಮ. ಹಲಸು ಸ್ನೇಹಿ ಕೂಟದ ವತಿಯಿಂದ ಈ ಕಾರ್ಯಕ್ರಮದ ಆಯೋಜನೆ. ಬಂಟ್ವಾಳ ತಾಲೂಕಿನ ಕಜೆ ಮನೆಯಲ್ಲಿ ಡಿಸೆಂಬರ್ 25ರಂದು ಕಾರ್ಯಕ್ರಮ. ಬಲು ಉಪಕಾರಿ ಗಡ್ಡೆ ತರಕಾರಿಯ ಬಗೆಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ. ಒಂದಷ್ಟು ಸಸ್ಯಗಳು ಜೀವನ ಪರ್ಯಂತ ಕೂಡಿಟ್ಟ ಪೋಷಕಶಕ್ತಿಯನ್ನೆಲ್ಲ ಭೂಮಿಯೊಳಗೊಂದು ತಿಜೋರಿ ತೆರೆದು ಒತ್ತಿ ಸಂಗ್ರಹಿಸಿಟ್ಟು , ಸಮಯ ಬಂದಾಗ ಚಿಗುರಿ ಮೇಲೆದ್ದು ಬರುವ ಅದಮ್ಯ ಜೀವಶಕ್ತಿಯನ್ನು ಅದರ ಒಳಗೆ ಅಲ್ಲಲ್ಲಿ ಊರಿ, ಜೀವತ್ಯಾಗ ಮಾಡುತ್ತವೆ. ಆ ತಿಜೋರಿಗಳೇ ಗಡ್ಡೆಗಳು!. ಅವು ಜೀವ ಶಕ್ತಿಯ ಗುಡ್ಡೆಗಳು!. ಕಾಯಿಲೆಗೆ ಔಷಧಿ, ಹಸಿವೆಗೆ ತರಕಾರಿ. ಈ ಮೂಲಕ ನಮಗೆ ಉಪಕಾರಿ! ಅವುಗಳ ಉಳಿಕೆ, ಬಳಕೆಗಳ ಕಲಿವಿಕೆಗಾಗಿ ಸೇರುವ ಮಹೋನ್ನತ ಕಾರ್ಯಕ್ರಮವೇ ಬಿಡೋಣ ಅಸಡ್ಡೆ...ತಿನ್ನೋಣ ಗಡ್ಡೆ!

ಕಾರ್ಯಕ್ರಮ ಬೆಳಗ್ಗೆ 9.30ರಿಂದ ಆರಂಭ. ಕೊಲ್ಲರಮಜಲು ಶಂಕರ ಭಟ್, ಶ್ರೀ ಪಡ್ರೆ, ಕೃಷ್ಣ ಶೆಟ್ಟಿ ಉದ್ಘಾಟನಾ ಸಮಾರಂಭದಲ್ಲಿರುತ್ತಾರೆ. ಪ್ರಸ್ತಾವನೆಯನ್ನು ಮುಳಿಯ ವೆಂಕಟಕೃಷ್ಣ ಶರ್ಮ ಮಾಡುವರು. ಕೃಷ್ಣ ಶೆಟ್ಟಿ ಮತ್ತು ಶಿವಕುಮಾರ್ ಕಂದಮೂಲ ಕೃಷಿ ಬಳಕೆ ಮತ್ತು ಮಾರಾಟದ ವಿಷಯದಲ್ಲಿ ಮಾಹಿತಿ ನೀಡುವರು. 11.30ರಿಂದ ಗಡ್ಡೆ ಕೃಷಿ ಮತ್ತು ಉಪಯೋಗ ನಮ್ಮ ಪ್ರಯೋಗದ ಬಗ್ಗೆ ಡಾ.ಕೆ.ಯಸ್.ಕಾಮತ್ ಮತ್ತು ಎ.ಪಿ.ಚಂದ್ರಶೇಖರ ವಿಷಯ ಮಂಡಿಸುವರು. ಮಧ್ಯಾಹ್ನ 1ಗಂಟೆಗೆ ಗಡ್ಡೆ ತರಕಾರಿಗಳ ಊಟ. ಇದೊಂದು ವಿಶಿಷ್ಠ! ಅನುಭವ. 2.30ರಿಂದ ವೆಂಕಟ್ರಾಮ ದೈತೋಟ ಮತ್ತು ಜಯಲಕ್ಷ್ಮೀ ದೈತೋಟ ಅವರಿಂದ ಗಡ್ಡೆ ಉಪಯೋಗ ಮಾಡಿ ಮತ್ತು ಬೇಡಿ ವಿಷಯದಲ್ಲಿ ಅನುಭವದ ಮಾತು. 4ಗಂಟೆಗೆ ಸಮಾರೋಪ ಸಮಾರಂಭ. ರಾಮ್ ಕಿಶೋರ್ ಕಜೆ ಮತ್ತು ಸಂಜೀವ ನಾಯ್ಕ ಈ ಕಾರ್ಯಕ್ರಮ ನಡೆಸುವರು. ನಾ.ಕಾರಂತ ಪೆರಾಜೆ ಸೂತ್ರದಾರಿಕೆ ಈ ಸಮಗ್ರ ಕಾರ್ಯಕ್ರಮದ್ದು.

0 comments:

Post a Comment