ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೇಣೂರು: ಗೋವುಗಳ ಸಂರಕ್ಷಣೆ ಸರಕಾರದ ಕರ್ತವ್ಯ. ಗೋ ಸಂರಕ್ಷಣೆ, ಗೋ ತಳಿಗಳ ಉಳಿವು ಹಾಗೂ ಆ ಸಂತತಿ ಬೆಳೆಸುವುದು ಸರಕಾರದ ಕೆಲಸ. ಸರಕಾರ ತನ್ನ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಗೋ ಸಂರಕ್ಷಣೆಗೆ ಮುತುವರ್ಜಿವಹಿಸುವಂತಾಗಲಿ ಎಂದು ಶ್ರೀ ಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇಲ್ಲಿನ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದ್ದಾರೆ.

ಸೋಮವಾರ ವೇಣೂರು ಬಳಿಯ ಗುಂಡೂರಿ ಶ್ರೀ ಕಾವೇರಮ್ಮ ಅಮೃತಧಾರಾ ಗೋಶಾಲೆ ಇಲ್ಲಿ ಗೋಶಾಲೆಯ ವಿಸ್ತೃತ ಕಟ್ಟಡಗಳಿಗೆ ಶಿಲಾನ್ಯಾಸ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನಡೆಸಿ ಆಶೀರ್ವಚನ ನೀಡಿದರು.
ಗೋಶಾಲೆಯಲ್ಲಿ ಶ್ರೀ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿರುವುದು ಸಂತಸದ ಸಂಗತಿ ಎಂದ ಶ್ರೀಗಳು ವೇಣೂರಿನಲ್ಲಿ ಗೋ ಶಾಲೆ ಸ್ಥಾಪನೆಯಾಗಿ ಗೋವುಗಳಿಗೆ ಆಸರೆಯನ್ನು ನೀಡುತ್ತಿದೆ. ಈಗ "ವೇಣೂರು" ಎಂಬ ಹೆಸರಿಗೆ ನಿಜಾರ್ಥ ಪ್ರಾಪ್ತವಾಗುವಂತಾಗಿದೆ. ಗೋವು ಬಂದ ನಂತರ ವೇಣೂರು ವೇಣೂರಾಗಿ ಪರಿವರ್ತನೆಯಾಗಿದೆ ಎಂದು ಶ್ರೀಗಳು ನುಡಿದರು.
ಮಾಜಿ ಶಾಸಕ ಪ್ರಭಾಕರ ಬಂಗೇರ,ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಣೇಶ್ ಭಟ್, ಡಾ.ಕೃಷ್ಣಮೂರ್ತಿ,ಬಾಲಕೃಷ್ಣ ಭಟ್ ದಡ್ಡು ವೇದಿಕೆಯಲ್ಲಿದ್ದರು.

ಗಂಗಾ ಸುಪ್ರಭ ಪ್ರಾರ್ಥನೆಗೀತೆ ಹಾಡಿದರು. ಕಾಂತಾಜೆ ಈಶ್ವರಭಟ್ ಸಭಾಪೂಜನ ನೆರವೇರಿಸಿದರು. ಬಾಲ್ಯ ಶಂಕರ ಭಟ್ ಕಾರ್ಯಕ್ರಮ ನಿರ್ವಹಿಸಿದರು.0 comments:

Post a Comment