ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ದೈನಂದಿನ ಧಾರಾವಾಹಿ - ಭಾಗ 31 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಪ್ರಿಯ ಓದುಗರೇ...ಕಳೆದ 30 ಸಂಚಿಕೆಗಳಿಂದ ಈ ಕನಸು.ಕಾಂ ಅನು ಬೆಳ್ಳೆ ಅವರ ಎಲ್ಲಿರುವೆ ಕುಣಿಸದೆ ಕರೆವೆನ್ನ ಕೊರಳೇ...? ಧಾರಾವಾಹಿಯನ್ನು ಪ್ರಕಟಿಸುತ್ತಿದೆ. ಓದುಗರಾದ ತಮ್ಮ ಅಭಿಪ್ರಾಯವೂ ಚೆನ್ನಾಗಿಯೇ ಇವೆ... ಇನ್ನು ಕೆಲವೇ ಕಂತುಗಳಲ್ಲಿ ಈ ಧಾರಾವಾಹಿ ಕೊನೆಯಾಗಲಿವೆ...ಅದಕ್ಕೂ ಮೊದಲು ತಮ್ಮಲ್ಲೊಂದು ವಿನಂತಿ. ಇದರ ಕೊನೆ ನೀವು ನೀಡಬೇಕು...ಧಾರಾವಾಹಿ ನಮ್ಮದು...ಕೊನೆ ನಿಮ್ಮದು...ಉತ್ತಮ ಬರಹಕ್ಕೆ ಬಹುಮಾನವಿದೆ. ಬರಹಗಳು ಇದೇ ತಿಂಗಳ ಕೊನೆ ಅಂದರೆ ಡಿಸೆಂಬರ್ 31ರೊಳಗೆ editor@ekanasu.com ಗೆ ನುಡಿ/ಬರಹ ತಂತ್ರಾಂಶದಲ್ಲಿ ಕಳುಹಿಸಿ...ಜೊತೆಗೆ ಭಾವಚಿತ್ರವಿರಲಿ...


ಅವಳು, 'ಥ್ಯಾಂಕ್ಸ್ ಅಂದು ಕೆಳಗಿಳಿದು ತನ್ನ ಆಫೀಸ್ನತ್ತ ನಡೆದಾಗ ಸೆಕ್ಯುರಿಟಿ ಸೆಲ್ಯೂಟು ಹೊಡೆದು ನಿಂತ.
ಎ.ಸಿಯ ಹವೆಯನ್ನು ನಿಯಂತ್ರಿಸಿ ಕಂಪ್ಯೂಟರ್ ಆನ್ ಮಾಡಿ ತನ್ನ ಕೆಲಸ ಪ್ರಾರಂಭಿಸುವಾಗ ರಾಮರಾಜ್ ಬಾಗಿಲು ತೆರೆದು, ಬರಬಹುದೆ ಅಂದ.
ಬನ್ನಿ ರಾಮರಾಜ್. ಏನಾದರೂ ಪೇಮೆಂಟ್ಸ್ಗಳಿದೆಯೆ? ಆತ ತಂದ ಕಡತದ ಕಡೆಗೆ ನೋಡುತ್ತಾ ಕಂಪ್ಯೂಟರ್ ಅನ್ನು ಹಾಗೆ ಬಿಟ್ಟು ಅವನತ್ತ ತಿರುಗಿದಳು.ಮೇಡಂ, ಆದಿತ್ಯ ಗ್ರೂಪ್ಸ್ ಮೊದಲ ಚೆಕ್ ಕಳುಹಿಸಿಕೊಟ್ಟಿದೆ. ಚೆಕ್ ಅಟ್ ಪಾರ್ ಆಗಿದೆ. ಇದನ್ನು ಅಕೌಂಟಿಗೆ ಹಾಕಿದ್ರೆ ಕಮಿಷನ್ ಕಟ್ ಆಗೋದಿಲ್ವೆ?

ಚೆಕ್ ಅಟ್ ಪಾರ್ ಅನ್ನುವುದು ಹೊಸ ಮಾದರಿಯವು. ಇದರಿಂದ ಬ್ಯಾಂಕ್ಗಳಿಗೆ ಕಮಿಷನ್ ಚಾರ್ಜ್ ಲಾಸ್ ಆದ್ರೂ ನಮ್ಮಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಇದರಿಂದ ಅನುಕೂಲವೆ. ಆದ್ರೆ ಇಲ್ಲಿ ನೀವು ಒಂದು ವಿಚಾರವನ್ನು ತಿಳಿದುಕೊಳ್ಳಬೇಕು. ಅದೇನು ಅಂದ್ರೆ, ಆ ಚೆಕ್ ಯಾವ ಬ್ಯಾಂಕ್ನದೂಂತ ತಿಳ್ಕೊಂಡು ಅದೇ ಬ್ಯಾಂಕ್ನ ನಮ್ಮ ಖಾತೆಗೆ ಕಳುಹಿಸಿದರೆ ಕಮಿಷನ್ ಮುರಿಯುವುದಿಲ್ಲ. ಅವು ಬೇರೆ ಬ್ಯಾಂಕ್ಗೆ ಕಳುಹಿಸಿದ್ರೆ ಬ್ಯಾಂಕ್ ಚಾರ್ಜ್ ಕಟ್ ಮಾಡ್ತಾರೆ. ಇಲ್ಲಿ ಕೊಡಿ, ಆ ಚೆಕ್ ಯಾವ ಬ್ಯಾಂಕಿದ್ದು?

ಮೇಡಂ, ಸಿಂಡಿಕೇಟ್ ಬ್ಯಾಂಕಿದ್ದು
ಆ ಚೆಕ್ನ್ನು ಪರಿಶೀಲಿಸಿದ ಬಳಿಕ, ಸರಿ, ಇದನ್ನು ಸಿಂಡಿಕೇಟ್ ಬ್ಯಾಂಕ್ನ ನಮ್ಮ ಬ್ರಾಂಚ್ಗೆ ಕಳುಹಿಸಿ ಅನ್ನುತ್ತಾ ಅದನ್ನು ಅವನಿಗೆ ಹಿಂತಿರುಗಿಸಿದಳು.
ರಾಮರಾಜ್, ಇನ್ನೊಂದು ವಿಷಯ. ಮೊನ್ನೆ ಬಂದಿರೊ ಸ್ಟಾಕ್ಗಳ ವಿವರ ನನಗೆ ಬೇಕು. ಸಂಬಂಧಪಟ್ಟವರಿಂದ ಅದನ್ನು ಕಲೆಕ್ಟ್ ಮಾಡಿ ಮಧ್ಯಾಹ್ನದ ಒಳಗೆ ನನಗೆ ಒಪ್ಪಿಸಿ ಅಂದಳು.
ಆತ ತನ್ನ ಕೈಯಲ್ಲಿದ್ದ ಫೈಲ್ ತೆರೆದು, ಮೇಡಂ ಒಂದೆರಡು ಚೆಕ್ಗಳಿವೆ ಪೇಮೆಂಟ್ಗೆ. ಸಿಗ್ನೇಚರ್ ಮಾಡ್ತೀರಾ? ಅಂದು ಅವುಗಳನ್ನು ತೆರೆದು ಅವಳ ಎದುರಿಗಿಟ್ಟ.
ಸರಿ ಮಾಡೋಣ, ಬಾಸ್ ಬಂದಿರೋ ಹಾಗೆ ಕಾಣಿಸ್ತಿಲ್ಲ. ನಾನೇ ಸಿಗ್ನೇಚರ್ ತೆಗೆದುಕೊಂಡು ನಿಮಗೆ ಹೇಳ್ತೀನಿ ಅಂದಳು. ರಾಮರಾಜ್ 'ಸರಿ' ಎನ್ನುತ್ತಾ ಹೊರಗೆ ನಡೆದ.

ನಿಖಿಲ್ನ ಜೊತೆಗೆ ನಾರ್ಮಲ್ ಆಗಿಯೇ ಇರಬೇಕು. ಹಾಗಾಗಿ ಅವಕಾಶವಿರುವಾಗ ಒಳಗೆ ಹೋಗಿ ತಮ್ಮ ನಡುವೆ ಏನೂ ನಡೆದಿಲ್ಲವೆನ್ನುವಷ್ಟು ಸಹಜವಾಗಿರಬೇಕೆಂದುಕೊಂಡಳು.
ಗಂಟೆ ಹನ್ನೊಂದು ಮೀರಿದರೂ ನಿಖಿಲ್ ಬರುವ ಸೂಚನೆ ಕಾಣಿಸಲಿಲ್ಲ. ರಫ್ತಿಗೆ ಸಂಬಂಧ ಪಟ್ಟ ಡಾಕ್ಯುಮೆಂಟ್ಸ್ಗಳನ್ನು ಪರಿಶೀಲಿಸಿ ಕಂಪ್ಯೂಟರ್ನತ್ತ ಕೈಯಾಡಿಸಿದಳು. ನಿಖಿಲ್ನ ಮಾತುಗಳೇನು ಅವಳ ಮೇಲೆ ಪರಿಣಾಮ ಬೀರದಿದ್ದರೂ ಯಾವುದೋ ಅಳುಕು ಅವಳನ್ನು ಕಾಡುತ್ತಿತ್ತು. ಆ ಹೊತ್ತಿಗೆ ನೆನಪಾದವನು 'ಅರವಿಂದ್'.

ಹ್ಯಾಕಿಂಗ್ ಕಲಿತ ಬಳಿಕ ಅವನನ್ನು ಪತ್ತೆ ಮಾಡಬೇಕೆನ್ನುವ ತುಡಿತ ಬಹಳವಿದ್ದರೂ ಹತ್ತಿಕ್ಕಿಕೊಂಡು ಆಫೀಸಿನ ಕೆಲಸಗಳತ್ತ ಗಮನ ಕೊಟ್ಟಳು. ಮಾಮೂಲಿನಂತೆ ಅವನ ಮೇಲ್ ಬರುತ್ತಲೇ ಇತ್ತು. ಕೆಲವೊಮ್ಮೆ ಉತ್ತರಿಸಿದರೆ, ಉತ್ತರಿಸದಿದ್ದುದೇ ಹೆಚ್ಚು. ಹಾಗಂತ ಅವನಿಂದ ನಿರಾಶೆಯ ಉತ್ತರವಾಗಲಿ, ತನ್ನಿಂದ ಹತಾಶೆಯ ಮೇಲ್ ಆಗಲಿ ಇರಲಿಲ್ಲ. ಆಫೀಸಿನ ಕೆಲಸದ ಒತ್ತಡಗಳ ನಡುವೆಯೂ ಅವನ ನೆನಪು ಕಾಡುವಾಗಲೆಲ್ಲಾ ನಿಖಿಲ್ ಹತ್ತಿರವಿದ್ದು ದೂರವಾದಂತೆಯೂ ಅರವಿಂದ್ ದೂರವಿದ್ದರೂ ಹತ್ತಿರವಿರುವಂತೆಯೂ ಅವಳಿಗೆ ಭಾಸವಾಗುತ್ತಿತ್ತು.

'ಅರವಿಂದ್'ನೆನ್ನುವ ವ್ಯಕ್ತಿ ಮತ್ತು ಅಶುತೋಶ್ನ ವ್ಯಕ್ತಿತ್ವಕ್ಕೂ ಬಹಳಷ್ಟು ಸಾಮ್ಯತೆ ಇತ್ತು. ಆದ್ದರಿಂದ ಅಶುತೋಶ್ನೇ ಮೇಲ್ಗಳನ್ನು ಕಳುಹಿಸುತ್ತಿದ್ದಾನೆ ಅನಿಸಿದ್ದಿದೆ. ಆದರೆ ಅದನ್ನು ನಿಖರವಾಗಿ ಹೇಳುವಂತೆ ಇಲ್ಲ. ಆತನಲ್ಲದಿದ್ದರೆ ನಿಖಿಲ್ ಕೂಡ ಇಂತಹ ಮೇಲ್ ಕಳುಹಿಸರಬಹುದು ಅನಿಸಿದರೂ ಅಷ್ಟೊಂದು ನಿಗೂಢವಾಗಿ ಉಳಿದು ಬಿಡುವನನಾಗಿದ್ದರೆ ತನ್ನನ್ನು ನೇರವಾಗಿ ಪ್ರಪೋಸ್ ಮಾಡುತ್ತಿರಲಿಲ್ಲ. ಆದ್ದರಿಂದ ನಿಖಿಲ್ ಇರುವ ಸಾಧ್ಯತೆಯಿರಲಿಲ್ಲ.
ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ನಿಖಿಲ್ ಬಂದಾಗ ಮನಸ್ವಿತಾ ಎರಡು ಚೆಕ್ಗಳನ್ನು ಹಿಡಿದುಕೊಂಡು ಒಳಗೆ ಹೋದಳು. ಎಂದಿನಂತೆ ಆತ್ಮೀಯ ಮುಗುಳ್ನಗೆಯಿಂದ ಸ್ವಾಗತಿಸಿದ. ಚೆಕ್ಗಳನ್ನು ವೋಚರ್ಸ್ ಜೊತೆಗೆ ಅವನ ಎದುರಿಗಿಟ್ಟು ಅವನು ಹೇಳುವ ಮೊದಲೇ ಕುಳಿತಳು.
ಮನಸ್ವಿತಾ, ನಿನ್ನೆ ದಿನ ಆದಿತ್ಯ ಗ್ರೂಪ್ ಮುಂಬೈ ಬ್ರಾಂಚ್ನಿಂದ ಒಂದು ಚೆಕ್ ಬಂದಿತ್ತು. ನೋಡಿದ್ರಾ?
ಹೌದು ಸರ್, ಚೆಕ್ ಅಟ್ ಪಾರ್ ಅದು. ಅದನ್ನು ಕಲೆಕ್ಷನ್ಗೆ ಕಳುಹಿಸುವುದಕ್ಕೆ ರಾಮರಾಜ್ರಿಗೆ ಹೇಳಿಯಾಗಿದೆ
ಅದು ಅಟ್ ಪಾರ್ ಆಗಿರೋದ್ರಿಂದ ಯಾವ ಅಕೌಂಟಿಗೆ ಹಾಕ್ಬೇಕನ್ನೋದು ಗಮನದಲ್ಲಿರಲಿ...
ಹೌದು ಸಾರ್, ಹೇಳಿದ್ದೀನಿ, ಸಮಸ್ಯೆಯಿಲ್ಲ. ರಾಮರಾಜ್ಗೆ ಆ ಬಗ್ಗೆ ತಿಳಿಸಿದ್ದೀನಿ. ಅಂತಹ ಚೆಕ್ಗಳನ್ನು ಯಾವ ರೀತಿ ಹ್ಯಾಂಡಲ್ ಮಾಡ್ಬೇಕು ಅನ್ನೋದನ್ನು ಹೇಳಿದ್ದೀನಿ...
... ಮುಂದುವರಿಯುವುದು...

0 comments:

Post a Comment