ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಒಬ್ಬ ವ್ಯಕ್ತಿ ವಕೀಲನ ಎದುರು ಕುಳಿತು ತನ್ನಿಂದ ಆದಂತಹ ಒಂದು ತಪ್ಪನ್ನು ಹೇಳಿಕೊಳ್ಳುತ್ತಾನೆ. ಏನಾದರೂ ಮಾಡಿ ತನ್ನನ್ನು ರಕ್ಷಿಸಿ ಎಂದು ಕೇಳಿಕೊಳ್ಳುತ್ತಾನೆ. ತಪ್ಪು ಚಿಕ್ಕದಾದರೂ ಅದು ಬಹಳ ದೊಡ್ಡದು ಎಂಬಂತೆ ಪ್ರತಿಕ್ರಿಯೆ ನೀಡುತ್ತಾನೆ ವಕೀಲ. ತಪ್ಪಿಗಾಗಿ ನಿನಗೆ ಬಹಳ ದೊಡ್ಡ ಶಿಕ್ಷೆ ಆಗಬಹುದು ಎಂದು ಹೆದರಿಸುತ್ತಾನೆ, ಹಾಗೂ ಈ ಕಷ್ಟದ ಸ್ಥಿತಿಯಿಂದ ಪಾರು ಮಾಡುವುದಾಗಿ ಭರವಸೆಯನ್ನೂ ನೀಡುತ್ತಾನೆ. ತಪ್ಪನ್ನು ದೊಡ್ಡ ತಪ್ಪು ಎಂದು ಬಿಂಬಿಸಿದರೆ ಕಕ್ಷಿದಾರ ವಕೀಲನಲ್ಲಿ ಇನ್ನಷ್ಟು ಅಂಗಲಾಚುತ್ತಾನೆ, ಹೆಚ್ಚು ಅವಲಂಬಿತನಾಗುತ್ತಾನೆ. ಅದೇನು ದೊಡ್ಡ ತಪ್ಪಲ್ಲ ಬಿಡು ಎಂದರೆ ಕಕ್ಷಿದಾರ ಹಾಗೆ ಎದ್ದು ಹೋಗುತ್ತಾನೆ ! ವಕೀಲನಿಗೆ ಗಿರಾಕಿಗಳೇ ಇರುವುದಿಲ್ಲ. ! ಒಬ್ಬ ರೋಗಿ ವೈದ್ಯರ ಬಳಿ ತನ್ನ ಆರೋಗ್ಯದ ಸಮಸ್ಯೆ ಹೇಳಿಕೊಳ್ಳುತ್ತಾನೆ.

ಅದು ಸಾಮಾನ್ಯ ಸಮಸ್ಯೆಯಾದರೂ ವೈದ್ಯ ಅದನ್ನು ಗಂಭೀರ ಸಮಸ್ಯೆ ಎಂದು ಹೇಳುತ್ತಾನೆ. ಅದರಿಂದ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ. ರೋಗವನ್ನು ದೊಡ್ಡ ರೋಗವೆಂದು ಬಿಂಭಿಸಿದರೆ ಅದರ ಔಷಧಕ್ಕೆ ಕೇಳಿದಷ್ಟು ಹಣ ಸಿಗುತ್ತದೆ ಎನ್ನುವುದು ವೈದ್ಯನ ಲೆಕ್ಕಾಚಾರ ! ಸಣ್ಣ ರೋಗವೆಂದು ಹೇಳಿ ದೊಡ್ಡ ಮೊತ್ತವನ್ನು ಕೇಳಿದರೆ ರೋಗಿ ನೀಡುವುದಿಲ್ಲ. ನಿನ್ನ ಜೀವಕ್ಕೆ ಅಪಾಯವಿತ್ತು ಈಗ ಸರಿ ಮಾಡಿದೆ ಎಂದು ಹೇಳಿದರೆ ದೊಡ್ಡ ಮೊತ್ತ ಸಿಗುತ್ತದೆ. ಈ ಎರಡೂ ಸಂದರ್ಭದಲ್ಲಿ ವ್ಯಕ್ತಿಯನ್ನು ಹೆದರಿಸಿ, ಅಭದ್ರತೆಯ ಭಾವ ಮೂಡಿಸಿ ನಂತರ ಭದ್ರತೆಯ ಭರವಸೆ ನೀಡಿ ಸುಲಿಗೆ ಮಾಡಲಾಯಿತು.

ಈ ಎರಡೂ ಸಂದರ್ಭ ಕಾಲ್ಪನಿಕವೇ. ಆದರೆ ಇಂತಹ ಅದೆಷ್ಟೊ ಅಭದ್ರ-ಸುಭದ್ರ ಆಟಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಆಗಿದೆ. ಅದಕ್ಕೊಂದು ಉದಾಹರಣೆ ಕೋಮು ಗಲಭೆಗಳ ನಂತರ ಸಂಭವಿಸುವ ಬೆಳವಣಿಗೆಗಳು.
ಕೋಮು ಗಲಭೆಯಿಂದಾಗಿ ಹಿಂದು ಮತಗಳ ಧ್ರುವಿಕರಣವಾಗುತ್ತದೆ. ಆ ಮತಗಳು ಬಿ.ಜೆ.ಪಿ.ಗೆ ಸಿಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇನ್ನೊಂದು ಬದಿಯಲ್ಲಿ ಅಲ್ಪಸಂಖ್ಯಾತರ ಮತಗಳು ಕೂಡ ಧ್ರುವಿಕರಣವಾಗುತ್ತದೆ. ಅವುಗಳು ಕಾಂಗ್ರೆಸ್ನ ಪಾಲಾಗುತ್ತದೆ. ನೆನಪಿರಲಿ ಅಲ್ಪಸಂಖ್ಯಾತರಲ್ಲಿ ಹಿಂದುಗಳಿಗಿಂತ ಹೆಚ್ಚು ಒಗ್ಗಟ್ಟು ಇದೆ. ಆದ್ದರಿಂದ ಹಿಂದುಗಳ ಮತಗಳು ಧ್ರುವಿಕರಣಗೊಂಡು ಎಷ್ಟರ ಮಟ್ಟಿಗೆ ಬಿ.ಜೆ.ಪಿ.ಗೆ ದೊರೆಯುತ್ತದೆಯೊ ಅದಕ್ಕಿಂತ ಹೆಚ್ಚಿನ ಒಗ್ಗಟ್ಟಿನೊಂದಿಗೆ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ನ ಪಾಲಾಗುತ್ತದೆ.

ಬಿ.ಜೆ.ಪಿ. ಹಿಂದುಗಳ ಪರವಾಗಿ ಹೇಳಿಕೆ ನೀಡುತ್ತದೆ. ಆದ್ದರಿಂದ ಹಿಂದುಗಳ ಮತಗಳು ಅದರ ಪಾಲಾಗುತ್ತದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿ ಮಾತನಾಡುತ್ತದೆ. ಆದ್ದರಿಂದ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ನ ಪಾಲಾಗುತ್ತದೆ. ಒಂದು ವೇಳೆ ಕೋಮು ಗಲಭೆಗಳು ಸಂಭವಿಸದಿದ್ದರೆ ಈ ಎರಡು ಪಕ್ಷಗಳು ಮತಗಳನ್ನು ಕಳೆದುಕೊಳ್ಳುತ್ತದೆ. ಈ ಕಾರಣದಿಂದಾಗಿಯೇ ಕೋಮು ಗಲಭೆಗಳು ಆಗಾಗ ನಡೆಯುತ್ತಿದ್ದರೆ ಕಾಂಗ್ರೆಸ್ಗೆ ಲಾಭ !

ನಾನು ಮೇಲೆ ಹೇಳಿದ ವಕೀಲನಂತೆ, ವೈದ್ಯನಂತೆ ಕಾಂಗ್ರೆಸ್ ಹಾಗೂ ಇನ್ನೂ ಕೆಲವು ಪಕ್ಷಗಳು ವರ್ತಿಸುತ್ತದೆ, ಅದರೊಂದಿಗೆ ಕೆಲವು ಬುದ್ಧಿಜೀವಿಗಳು ಎಂದು ಕರೆಸಿಕೊಂಡವರೂ ಸೇರುತ್ತಾರೆ. ಅಲ್ಪಸಂಖ್ಯಾತರು ಕಕ್ಷಿದಾರ ಇದ್ದಂತೆ, ರೋಗಿ ಇದ್ದಂತೆ ಅವರ ಎದುರು ಗುಜರಾತಿನಲ್ಲಿ ಬಸಿರಾದ ಮುಸ್ಲಿಂ ಮಹಿಳೆಯೊಬ್ಬಳ ಹೊಟ್ಟೆ ಸೀಳಲಾಯಿತು. ಎಂದು ಕತೆ ಕಟ್ಟಲಾಗುತ್ತದೆ. (ಬಸಿರಾದ ಹೆಂಗಸಿನ ಹೊಟ್ಟೆ ಸೀಳಿದ್ದು ಕಟ್ಟುಕತೆ ಎಂದು ಸಾಭಿತಾಗಿದೆ) ಇದಕ್ಕೆ ನರೇಂದ್ರ ಮೋದಿಯವರೇ ನೇರ ಹೊಣೆ.

ಅವರು ಹಿಟ್ಲರ್ ಎಂದು ಅಲ್ಪಸಂಖ್ಯಾತರಿಗೆ ನಂಬಿಸಲಾಗುತ್ತದೆ. ಬಿ.ಜೆ.ಪಿ. ಅಧಿಕಾರಕ್ಕೆ ಇಂತಹ ಘಟನೆಗಳು ಮರುಕಳಿಸುತ್ತದೆ ಎನ್ನಲಾಗುತ್ತದೆ. ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವ ಮೂಡಿಸಲಾಗುತ್ತದೆ. ನಂತರ ತಾವು ಅವರ ರಕ್ಷಕರು ಎಂಬಂತೆ ವರ್ತಿಸಿ ಮತ ಪಡೆಯಲಾಗುತ್ತದೆ. ಕಾಂಗ್ರೆಸ್ ಗೂಂಡಾಗಿರಿಯನ್ನು ಕೇಸರಿ ಭಯೋತ್ಪಾದನೆ ಎಂದು ಕರೆದದ್ದು. ಭಯೋತ್ಪಾದನೆಗಿಂತ ಬಲಪಂಥಿಯರು ಅಪಾಯಕಾರಿ ಎಂದು ರಾಹುಲ್ಗಾಂಧಿ ಹೇಳಿದ್ದು. ಹೋಮ್ ಸ್ಟೇ ಧಾಳಿಗೆ ಭಯೋತ್ಪಾದನಾ ಚಟುವಟಿಕೆಗಿಂತ ಹೆಚ್ಚು ಪ್ರಚಾರ ನೀಡಿದ್ದು. ಪಬ್ ದಾಳಿಗೆ ಬಾಂಬ್ ಸ್ಫೋಟದಿಂದ ಹೆಚ್ಚು ಪ್ರಚಾರ ನೀಡಿದ್ದು. ನರೇಂದ್ರ ಮೋದಿಯವರನ್ನು ಸಾವಿನ ದಲ್ಲಾಳಿ ಎಂದು ಕಾಂಗ್ರೆಸ್ ಕರೆದದ್ದು ಇವುಗಳೆಲ್ಲ ಅಭದ್ರ ಭಾವ ಮೂಡಿಸುವ ಕೆಲಸವೇ. ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿಯಲ್ಲ ಎಂಬ ನಂಬುಗೆ ಅಲ್ಪಸಂಖ್ಯಾತರಲ್ಲಿ ಮೂಡಿದರೆ ಖಂಡಿತ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ಗೆ ಸಿಗುವುದಿಲ್ಲ.

ಆದ್ದರಿಂದಲೇ ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರೋಧಿ ಎಂದೇ ಬಿಂಬಿಸಲಾಗುತ್ತದೆ, ಹಾಗೂ ಬಿ.ಜೆ.ಪಿ.ಯಿಂದ ಅಲ್ಪಸಂಖ್ಯಾತರಿಗೆ ಭಯಂಕರ ಅಪಾಯವಿದೆ ಎಂದೇ ನಂಬಿಸಲಾಗುತ್ತದೆ. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡಗಲಾಯಿತು ಎಂದು ಅಲ್ಪಸಂಖ್ಯಾತರು ಎಷ್ಟು ಬಾರಿ ಹೇಳಿದ್ದಾರೊ ಅದಕ್ಕಿಂತ ಹೆಚ್ಚು ಬಾರಿ ಕಾಂಗ್ರೆಸ್ ಹೇಳಿದೆ. ಬುದ್ಧಿಜೀವಿ ಎಂದು ಕರೆಸಿಕೊಂಡವರೂ ಹೇಳಿದ್ದಾರೆ! ಕಾಂಗ್ರೆಸ್ ಅಭದ್ರತೆಯ ಲಾಭವನ್ನು ಚುನಾವಣೆಗೆ ಬಳಸಿಕೊಂಡರೆ ಬುದ್ಧಿಜೀವಿ ಎಂದು ಕರೆಸಿಕೊಂಡವರು ತಮ್ಮ ಸೆಕ್ಯುಲರ್ Image ವಿಸ್ತರಿಸಲು ಬಳಸಿಕೊಳ್ಳುತ್ತಾರೆ.

ಬಿ.ಜೆ.ಪಿ.ಯು ಇದೇ ರೀತಿಯ ಲಾಭ ಪಡೆದಿದೆ, ಆದರೆ ಭಯೋತ್ಪಾದಕರ ದಾಳಿ ನಡೆದ ನಂತರ ಹಿಂದುಗಳಿಗೆ ನಿಮಗೆ ಅಪಾಯವಿದೆ ಎಂದು ಹೇಳಿದೆ. ಆದ್ದರಿಂದ ಬಿ.ಜೆ.ಪಿ. ಹೇಳಿದ್ದು ಸತ್ಯವೇ. ಸತ್ಯವನ್ನೇ ಹೇಳಿದರು ಅಧಿಕಾರಕ್ಕೆ ಬಂದ ನಂತರ ಹಿಂದುಗಳ ಅಭದ್ರತೆ ಹೋಗಲಾಡಿಸಲು ಬಿ.ಜೆ.ಪಿ. ಏನೂ ಮಾಡಲಿಲ್ಲ ಎನ್ನುವುದೂ ಸತ್ಯ. ಕರ್ನಾಟಕದಲ್ಲಿ ಕಸಾಯಿಖಾನೆ ಬಂದ್ ಮಾಡುವ ಧೈರ್ಯವಿದೆಯೆ ಬಿ.ಜೆ.ಪಿ.ಗೆ? ಇಲ್ಲವೆಂದಾದರೆ ಯಾಕೆ ಬೇರೆ ಕೋಮಿನವರತ್ತ ಬೊಟ್ಟು ಮಾಡಿ ಅವರು ಗೋ ಹತ್ಯೆ ಮಾಡುತ್ತಾರೆ.

ಎಂದು ಹೇಳುವುದು? ಆಂಧ್ರ ಪ್ರದೇಶದ ಎಂ.ಪಿ.ಯೊಬ್ಬ ಪಾರ್ಲಿಮೆಂಟ್ನಲ್ಲಿ ಪರೋಕ್ಷವಾಗಿ ಭಯೋತ್ಪಾದನೆಯನ್ನು ಬೆಂಬಲಿಸಿದ ಆದರೂ ಬಿ.ಜೆ.ಪಿ.ಯ ಯಾವ ಎಂ.ಪಿ.ಯು ಅದರ ವಿರುದ್ಧ ಮಾತನಾಡಲಿಲ್ಲ! ಆದರೆ ಅಂತಹ ಭಯೋತ್ಪಾದಕ ಎಂ.ಪಿ.ಗಳನ್ನೇ ಜನರಿಗೆ ತೋರಿಸಿ, ಅವರಲ್ಲಿ ಭಯವನ್ನು ಉತ್ಪಾದಿಸಿ, ಅಭದ್ರತೆಯ ಭಾವ ಬೆಳೆಸಿ, ಬಿ.ಜೆ.ಪಿ. ಮತ ಪಡೆಯುತ್ತದೆ!

ಈ ಅಭದ್ರ-ಭದ್ರ ಆಟವನ್ನು ಮೀರಿ ಯೋಚಿಸುವ ಕಾಲ ಬಂದಿದೆ. ಜನ ಜಾಗೃತರಾಗಬೇಕು. ಯಾರಿಂದ ದೇಶದ ರಕ್ಷಣೆಗೆ ಐಕ್ಯತೆಗೆ ಧಕ್ಕೆ ಇದೆ ಎಂದು ಯೋಚಿಸಬೇಕು. ಅಭದ್ರತೆ ನಿರ್ಮಾಣ ಮಾಡಲು ರಾಜಕಾರಣಿಗಳು ಆಡುವ ಕೇಸರಿ ಭಯೋತ್ಪಾದನೆಯಂತಹ ಸುಳ್ಳುಗಳಿಗೆ ಕಿವಿ ಕೊಡಬಾರದು. ಎಲ್ಲಾ ಪಕ್ಷದವರನ್ನು ಪ್ರಶ್ನಿಸುವ ಕಾಲ ಬಂದಿದೆ. ಮತದಾರರು ಪ್ರಬುದ್ಧರೇ ಆದರೆ ಧಾರ್ಮಿಕ ವಿಷಯಗಳಿಗೆ ತುಂಬಾ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಅದೇ ಅಭದ್ರ-ಸುಭದ್ರ ಆಟದ ಪ್ರಾರಂಭ. ಯಾವಾಗ ವೈಚಾರಿಕತೆ ಭಾವನೆಗಳು ಮೀರಿ ನಿಲ್ಲುತ್ತದೆಯೊ ಆಗ ಈ ಅಭದ್ರ-ಸುಭದ್ರ ಆಟ ನಿಲ್ಲುತ್ತದೆ. ಜನ ಜಾಗೃತರಾಗಬೇಕು. ಪರಾಂಬರಿಸಿ ನೋಡುವ, ವಿಶ್ಲೇಷಿಸುವ ಗುಣ ಹೆಚ್ಚಾಗಬೇಕು. ಆಗ ಈ ಎಲ್ಲಾ ಆಟ ಮುಗಿಯುತ್ತದೆ. ಎರಡು ಹೊತ್ತಿನ ಊಟಕ್ಕೆ ಇಲ್ಲದ ಕೋಟ್ಯಾಂತರ ಜನರು ಇರುವ ಭಾರತದಲ್ಲಿ ಮಂದಿರ-ಮಸಿದಿಗಾಗಿ ಹೊಡೆದಾಟ ತೀರ ಅಸಂಬದ್ಧ. ಆದರೂ ಇದು ನಡೆಯುತ್ತಿದೆ. ಕಥೆ ಕೇಳಿ ಚುನಾಯಿತರಾದವರು ಚುನಾಯಿತರಾದ ನಂತರ ಏನು ಮಾಡಿದರು ಎಂದು ಮತದಾರರು ವಿಶ್ಲೇಷಿಸಬೇಕಾಗಿದೆ.

ಆದಿತ್ಯ ಭಟ್
ಉಪನ್ಯಾಸಕ
ಆಳ್ವಾಸ್ ಪದವಿ ಕಾಲೇಜು, ಮೂಡಬಿದಿರೆ
ಫೋನ್: 9886597125

0 comments:

Post a Comment