ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:56 PM

ತಪನೆ

Posted by ekanasu

ಕಾರಿಡಾರ್ : ಭಾವಗೀತ
ಇನ್ನು ಸಾಧ್ಯವೇ ಇಲ್ಲ... ಏನನ್ನಾದರೂ ಬರೆಯಲು ನನ್ನಿಂದಾಗೋಲ್ಲ.. ಅನ್ನಿಸಿಬಿಟ್ಟಿತ್ತು. ಬರೆಯಲು ನನ್ನಲ್ಲಿನ ಸರಕುಗಳೆಲ್ಲಾ ಸೋರಿಹೋದಂತಾಗಿ ಕೈಚೆಲ್ಲುವಂತಾಗಿತ್ತು..ಹೀಗೆಂದ ಮಾತ್ರಕ್ಕೆ ನಾನೇನು ಬರೆದು ಗುಡ್ಡೆ ಹಾಕಿದವಳೂಲ್ಲ, ಅಥವಾ ಬರವಣಿಗೆ ನನಗೆ ವೃತ್ತಿಯೂ ಅಲ್ಲ. ನನಗದು ಪ್ರವೃತ್ತಿ ಅಷ್ಟೇ...! ನಿಜವಾಗಿ ಹೇಳಬೇಕೆಂದರೆ, ನನ್ನೊಂದಿಗೆ ನಾನು ಸಂಭಾಷಿಸಲು ನನಗಿರುವ ಏಕೈಕ ಮಾರ್ಗ. ನನ್ನ ಅನಾವರಣಕ್ಕೊಂದು ರಹದಾರಿ...

ಮೊನ್ನೆ ಮೊನ್ನೆಯ ತನಕ ಸಣ್ಣ ಬೇಸರ, ಉಮ್ಮಳಿಸುವ ದುಃಖ, ತುಂಬು ಖುಷಿಯಾದಗಲೆಲ್ಲಾ ಬರೆಯುವತ್ತ ಮುಖಮಾಡುತ್ತಿದ್ದವಳು, 'ಲ್ಯಾಪ್ಟಾಪ್' ಎಂಬ ಸಂಗಾತಿ ಬಂದ ದಿನದಿಂದ, ಹೊಸನೀರ ಸೆಳೆತಕ್ಕೆ ಹಳೆನೀರು ಕೊಚ್ಚಿಹೋದಂತೆ, ಅತ್ತ ಮುಖಮಾಡುವುದನ್ನೇ ಬಿಟ್ಟಿದ್ದೆ...
ಹೊಸತೊಂದರ ಅನ್ವೇಷಣೆಯ ಮತ್ತು ಇಳಿಯುವಾಗ, ನನ್ನೊಳಗೆ ಖಾಲಿತನ, ಒಂದು ಸಣ್ಣ ಚಡಪಡಿಕೆ, ಲೇಖನಿಯ ಮೇಲಿನ ಹಿಡಿತ ಕೈಜಾರುತ್ತಿರುವ ಬೇಸರ... ಅದಕ್ಕಾಗಿ ಇಂದು ಬರೆಯುತ್ತಿದ್ದೇನೆ ಇವುಗಳನ್ನೇ ಹಂಚಿಕೊಳ್ಳುತ್ತಾ... ಹೀಗೂ ಎಲ್ಲಾ ಅನಿಸುವುದುಂಟೆಂದು ಆಲೋಚಿಸುತ್ತಾ, ನಿಧಾನವಾಗಿ ನಿರಾಳವಾಗುತ್ತಾ.
ಓಹ್ಹ್ ಮರೆತ್ತಿದ್ದೆ... ನನ್ನಲ್ಲಿಯ ಆಲೋಚನೆಗಳಿಗೆ, ಸಂಬಂಧಗಳೆಡೆಗಿನ ನೋಟಕ್ಕೆ, ನನ್ನ ಅಭಿರುಚಿಗೆ ಹೊಸರುಚಿಯ ನೀಡಿದ್ದು...ಪೈಪೋಟಿಗೆ ಬಿದ್ದಂತೆ ನಿದ್ದೆಬಿಟ್ಟು ನೋಡಿದ 'ಕೊರಿಯನ್' ಸಿನೆಮಾ - ಸೀರಿಯಲ್ಗಳು.! ಆಡಂಬರದ ಹಂಗಿಲ್ಲದೆ ಅಪ್ಯಾಯವೆನಿಸುವ, ಭಾಷೆಯನ್ನೇ ಮೀರಿದ ಭಾವವಾಗುವ, ಕಥೆಯೇ ಇಲ್ಲದೆ ಕಾವ್ಯವಾಗುವ ಅವುಗಳನ್ನು ಸಾಧ್ಯವಾದರೆ ನೀವೂ ನೋಡಿ.... ನಿಮ್ಮ ಪ್ರವೃತ್ತಿಯನ್ನು ಹೊಸಕಿಹಾಕದೆ...!

0 comments:

Post a Comment