ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಹಾಗಲಕಾಯಿ ದೊಡ್ಡದು 1, ಹುಳಿ- ನೆಲ್ಲಿಕಾಯಿ ಗಾತ್ರ, ಬೆಲ್ಲ ಹುಳಿಗಿಂತ ತುಸು ಹೆಚ್ಚು. ಉಪ್ಪು, ತೆಂಗಿನ ತುರಿ 1 ಕಪ್, ಒಣ ಮೆಣಸು (ಕುಮ್ಟೆ) 5, ಕೊತ್ತಂಬರಿ ಬೀಜ 2 ಚಮಚ, ಉದ್ದಿನ ಬೇಳೆ 2 ಚಮಚ, ಒಗ್ಗರಣೆ ವಸ್ತುಗಳು. ವಿಧಾನ: ಹಾಗಲಕಾಯಿಯನ್ನು ನಾಲ್ಕಾಗಿ ಸೀಳಿ ಒಂದಿಂಚು ಉದ್ದದ ತುಂಡು ಮಾಡಿಟ್ಟುಕೊಳ್ಳಿ. ಹುಳಿ ಕಿವಿಚಿ ಉಪ್ಪು ಬೆಲ್ಲ ಹಾಕಿ ಕುದಿಸಿ. ಚೆನ್ನಾಗಿ ಕುದಿದ ನಂತರ ಹಾಗಲಕಾಯಿ ತುಂಡನ್ನು ಹಾಕಿ ನೀರು ಆರುವವರೆಗೆ ಬೇಯಿಸಿ. ತೆಂಗಿನತುರಿ, ಉದ್ದಿನಬೇಳೆ, ಕೊತ್ತಂಬರಿಯನ್ನು ಬೇರೆ ಬೇರೆಯಾಗಿ ಹುರಿದು ನೀರು ಹಾಕದೆ ಹುಡಿ ಮಾಡಿ. ಬಾಣಲೆಯಲ್ಲಿ ಒಗ್ಗರಣೆಗಿಟ್ಟು (ಎಣ್ಣೆ ತುಸು ಜಾಸ್ತಿಯಿರಲಿ) ಬೆಂದ ಹಾಗಲಕಾಯಿ ಹಾಗೂ ಪುಡಿ ಮಾಡಿಟ್ಟ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ. ಒಂದು ವಾರದವರೆಗೂ ಈ ಉಪ್ಕರಿ ಕೆಡುವುದಿಲ್ಲ.
*ಸುಮತಿ ಕೆ.ಸಿ.ಭಟ್ ಆದೂರು

0 comments:

Post a Comment