ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಅಂಧಕಾರದಲ್ಲಿ ಮುಳುಗಿದ ಯುವಕ, ಸಹಾಯದ ನಿರೀಕ್ಷೆಯಲ್ಲಿರುವ ಕುಟುಂಬ

ಎಲ್ಲರಿಗಿಂತ ಸುಂದರನಾಗಿ ಕಾಣಬೇಕೆಂಬ ಬಯಕೆಯೋ... ಬಾಲ್ಯದಲ್ಲಿ ಮಕ್ಕಳಿಗಿರುವ ಆಸೆಯೋ ತಿಳಿಯದು ಮುಖಕ್ಕೆ ಹಚ್ಚುವ ಪೌಡರ್ ಒಂದು ಯುವಕನ ಬಾಳಿನಲ್ಲಿ ಅಂಧಕಾರವನ್ನು ಮೂಡಿಸಿತು ಎಂದರೆ ಆಶ್ಚರ್ಯವಾಗಬಹುದು ಆದರೆ ನಿಜ. ವರ್ಕಾಡಿ ಪಂಚಾಯತ್ 4ನೇ ವಾರ್ಡ್ ವ್ಯಾಪ್ತಿಯ ನಿವಾಸಿ ಬಂಟಪ್ಪ ಶೆಟ್ಟಿ-ಕಮಲ ದಂಪತಿ ಪುತ್ರ ದಾಮೋದರ ಶೆಟ್ಟಿ(27) ಯ ಕಣ್ಣುಗಳೆರಡು ನಷ್ಟಗೊಂಡಿದ್ದು ಹೆತ್ತವರನ್ನು ಸಾಕಬೇಕಾದ ವಯಸ್ಸಲ್ಲಿ ಅವರ ಸಹಾಯ ಪಡೆದೆ ಮುನ್ನಡೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

ದಾಮೋದರ ಎಂಟನೇ ತರಗತಿಯಲ್ಲಿರ ಬೇಕಾದರೆ ಅಂಗಡಿಯಿಂದ ತಂದ ಪೌಡರ್ ಹಚ್ಚಿ ಶಾಲೆಗೆ ತೆರಳಿದ್ದರು. ಸ್ವಲ್ಪ ಸಮಯದ ಬಳಿಕ ಕಣ್ಣು ತುರಿಸಲಾರಂಬಿಸಿದ್ದು ಅನಂತರ ಅದು ತೀವ್ರಗೊಂಡಿದ್ದು ವೈದ್ಯರ ಬಳಿ ತೆರಳಿದಾಗ ಹಚ್ಚಲು ಮುಲಾಮು ಮಾತ್ರೆಗಳನ್ನು ನೀಡಿ ಅವಧಿ ಮುಗಿದ ಪೌಡರ್ ಬಳಸಿದ್ದುದೇ ಇದಕ್ಕೆ ಕಾರಣ ಎಂದು ತಿಳಿಸಿದ್ದರು. ಆ ಬಳಿಕವೂ ರೋಗ ಉಲ್ಬಣಗೊಂಡಿದ್ದು, ಕಣ್ಣಿನಲ್ಲಿ ಕೀವು ಬರಲು ಆರಂಭವಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಣ್ಣಿನ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಕಣ್ಣಿನ ನರಗಳಿಗೆ ಹಾನಿಯಾಗಿದ್ದು ಕಣ್ಣುಗಳನ್ನು ಅಪರೇಶನ್ ಮಾಡಿ ತೆಗೆಯಬೇಕು ಇಲ್ಲವಾದಲ್ಲಿ ಜೀವಕ್ಕೆ ಅಪಾಯ ಎಂದು ಸೂಚಿಸಿದರು. ಇದರಿಂದ ಗಾಬರಿಗೊಂಡ ಹೆತ್ತವರು ಅಪರೇಶನ್ ಮಾಡಲು ಒಪ್ಪಿಕೊಂಡರು.
ಸುಮಾರು ಏಳೂವರೆ ಲಕ್ಷ ರೂಪಾಯಿ ಅದಕ್ಕಾಗಿ ವ್ಯಯಿಸಿದ್ದರು. ಅಂದಿನಿಂದ ಕತ್ತಲೆ ಪ್ರಪಂಚದಲ್ಲೇ ದಿನ ದೂಡುತ್ತಿರುವ ದಾಮೋದರನಿಗೆ ಇಬ್ಬರು ಸಹೋದರಿಯರಿದ್ದಾರೆ. ಮದುವೆ ವಯಸ್ಸು ಆಗಿದ್ದರೂ ಆರ್ಥಿಕ ಸಮಸ್ಯೆಗಳಿಂದಾಗಿ ಮದುವೆ ಎಂಬುದು ಮರೀಚಿಕೆಯಾಯಿತು. ಬೀಡಿ ಕಾರ್ಮಿಕೆಯಾರಾಗಿ ದುಡಿಯುತ್ತಿರುವ ಇವರು ಅಲ್ಪಸ್ವಲ್ಪ ಮನೆ ಖರ್ಜನ್ನು ನಿಭಾಯಿಸುವಲ್ಲಿ ಹೆತ್ತವರಿಗೆ ಸಹಾಯಮಾಡುತ್ತಿದ್ದಾರೆ. ಇನ್ನೋರ್ವ ಸಹೋದರ ಮನೆಯ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿರುವ ದಾಮೋದರ ಶಾಲಾದಿನಗಳಲ್ಲೇ ಹಾಡುವುದನ್ನು ಕರಗತ ಮಾಡಿಕೊಂಡಿದ್ದ.

ವೈದ್ಯರು ಹೇಳಿದಂತೆ ಯಾರಾದರೂ ದಾನಿಗಳು ಕಣ್ಣನ್ನು ನೀಡಿದರೆ ಅಪರೇಶನ್ ಮಾಡಿ 12 ವರ್ಷಗಳಿಂದ ಕತ್ತಲ ಲೋಕದಲ್ಲಿ ನರಳುತ್ತಿರುವ ದಾಮೋದರನನ್ನು ಬೆಳಕಿನ ಲೋಕಕ್ಕೆ ತರಲು ಸಾಧ್ಯ. ಆದರೆ ಆರ್ಥಿಕ ಆಡಚಣೆ ಕುಟುಂಬದವರನ್ನು ಕಂಗಾಲು ಮಾಡಿದೆ. ಕಣ್ಣಿದ್ದು ಕುರುಡರಾಗಿರುವ ಜನಗಳ ಮಧ್ಯೆ ಕಣ್ಣು ಕಳೆದುಕೊಂಡಿರುವ ಇವರಿಗೆ ಸಹಾಯ ಮಾಡಲು ಬಯಸುವವರು ಅವರನ್ನು ನೇರವಾಗಿ ಸಂಪರ್ಕಿಸಬಹುದು.
ವಿದ್ಯಾ ಭೂಷಣರ ಅಭಿಮಾನಿ
ದಾಸ ಕೀರ್ತನ ಶ್ರೇಷ್ಠರಾದ ವದ್ಯಾಭೂಷಣರ ಬಹಳದೊಡ್ಡ ಅಭಿಮಾನಿ ಈತ;ಅಲ್ಲದೆ ಅಂತಹ ಅದೆಷ್ಟೋ ಗೀತೆಗಳನ್ನು ಕಂಠಪಾಠಮಾಡಿ ಹಾಡುವ ಹವ್ಯಾಸ ಈತನದು ಜೊತೆಗೆ ಸಂಗೀತ ಕಲಿಯಬೇಕೆಂಬ ಮಹದಾಸೆ ತೋಡಿಕೊಳ್ಳುತ್ತಾನೆ. ಆದರೆ ಆತನನ್ನು ಕರೆದೊಯ್ದು ಸಂಗೀತ ಪಾಠದ ಬಳಿಕ ಮತ್ತೆ ಕರೆದುಕೊಂಡು ಬರುವುದು ಕಷ್ಟಕರ ಅಂತಹ ಪರಿಸ್ಥಿತಿ ಈತನ ಮನೆಯಲಿಲ್ಲ. ಒಂದು ಸಿಡಿ ಪ್ಲೇಯರ್ ತಂದು ಕೇಳುವಂತಾಗಲಿ ಎಂದರೆ ಅದನ್ನು ನಿಯಂತ್ರಿಸುವುದು ಈತನಿಗೆ ತುಸು ಕಷ್ಟವೇ ಸರಿ. "ಕತ್ತಲೆ ಸಾದಿಗ್ ಬೊಳ್ಪುದ ಜೀಟಿಗೆ ಪತ್ತ್ ದ್ ತೋಜಾಲ" ಎನ್ನುವ ವಿದ್ಯಾಭೂಷಣರು ಹಾಡಿದ ಅಮೃತ ಸೋಮೇಶ್ವರರ ಪ್ರಸಿದ್ಧ ಗೀತೆ ಈತನಿಗೆ ಇಷ್ಟ ಜೊತೆಗೆ ಈತನ ಬದುಕಿಗೂ ಪ್ರಸ್ತುತ ಗೀತೆ ಇದು ವಿಧಿ ವಿಪರ್ಯಾಸ
ಸಿಂಡಿಕೇಟ್ ಬ್ಯಾಂಕ್ ವರ್ಕಾಡಿ ಶಾಖೆಯ ಖಾತೆ ಸಂಖ್ಯೆ 42282210011880ದಲ್ಲಿ ಜಮಾವಣೆ ಮಾಡಬಹುದಾಗಿದೆ. ದೂರವಾಣಿ; 9495374874, 9633847835 ಸಂಪರ್ಕಿಸಬಹುದಾಗಿದೆ.
ಕಣ್ಣುಗಳೆರಡು ಲಭಿಸಿದರೆ ಇಡೀ ಕುಟುಂಬವೇ ಬೆಳಕಿಗೆ ಬರಲಿದೆ. ಓದುಗರು ಇವರತ್ತ ಗಮನಹರಿಸಬೇಕೆಂದು ನಮ್ಮ ಆಶಯ.


0 comments:

Post a Comment