ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಳೆದ ಸಂಚಿಕೆಯಿಂದ...ಭಾಗ - 2
ಮೋಹನ ಕುಂಟಾರ್
ಕನ್ನಡದಲ್ಲಿ ಮಲಯಾಳಂ ಸ್ವೀಕೃತ ಪದಗಳು
ಕಡಕಟ್ಟು (ಯೋಜನೆ) ಗುಳಿಗೆ (ಮಾತ್ರೆ)
ಬುದ್ದಿಮುಟ್ಟು (ತೊಂದರೆ) ಮೊಲಿಯಾರ್ (ಮೌಲವಿ)
ಮುಂಡು (ಪಂಚೆ) ಬಲಿವಾಡು (ಹರಕೆ)

ತೋರ್ತು (ಬೈರಾಸು) ಕೊಡಿಮರ (ಧ್ವಜಸ್ತಂಭ)
ವರ್ಗೀಯಶಕ್ತಿ (ಕೋಮುಶಕ್ತಿ) ಕೇಳಿಕೊಟ್ಟ್ (ಯಕ್ಷಗಾನ ಪರಿಭಾಷೆ)
ಸ್ಥಿರ ಮದ್ಯಪಾನಿ (ನಿತ್ಯ ಮದ್ಯಪಾನಿ) ತೆರೆಪುರಪ್ಪಾಡ್ (ಯಕ್ಷಗಾನ ಪರಿಭಾಷೆ)
ಕಾರ್ಯಸ್ಥ (ಉಸ್ತುವಾರಿ ನೋಡಿಕೊಳ್ಳುವವ) ಜೊಟ್ಟೆ (ಏತ)
ಪಟ್ನಿ (ಉಪವಾಸ) ಸೈತಾನ್
ಅವಘಡ (ಅಪಘಾತ) ಪ್ರತಿಪಕ್ಷ (ವಿರೋಧ ಪಕ್ಷ)
ನೊಣೆ (ಸುಳ್ಳು) ಪ್ರಭಾಷಣ (ಉಪನ್ಯಾಸ)
ಜಮ್ಮ (ಆಸ್ತಿ) ಉತ್ತರವಾದಿತ್ವ (ಜವಾಬ್ದಾರಿ)
ಸ್ಥಾನಾರ್ಥಿ (ಅಭ್ಯರ್ಥಿ) ಕ್ಷೇತ್ರ ಪರಿಸರ (ದೇವಾಲಯ ವಠಾರ)
ಸಮರ (ಮುಷ್ಕರ) ಸಾಲು (ಏರಿ)

ಅಮ್ಮಿಕಲ್ಲು (ಅರೆಯುವ ಕಲ್ಲು) ಕೂರುಕಚ್ಚೋಡ (ಪಾಲುವ್ಯವಹಾರ)
ಕೈಯ್ಯಾಲೆ (ದರೆ) ಚುಡುಕುಳಿ (ಸ್ಮಶಾನ)
ಕ್ಷೇತ್ರೋತ್ಸವ (ಜಾತ್ರೆ) ಆಲಿಕತ್ತ್ (ಕಿವಿಯ ಆಭರಣದ ಒಂದು ಬಗೆ)

ಈ ಪದಗಳೆಲ್ಲ ಮಲಯಾಳಂ ಪದಗಳಾದರೂ ಕನ್ನಡದ ಸಹಜ ಪದಗಳೆಂಬಂತೆ ಕನ್ನಡಿಗರು ಬಳಸುವ ಪದಗಳಾಗಿವೆ (ಇವುಗಳ ಅನುವಾದ ಅಗತ್ಯವೇ ಇಲ್ಲ).ಆದರೆ ಇನ್ನು ಕೆಲವು ಸಂದರ್ಭದಲ್ಲಿ ಕೆಲವು ಸಾಂಸ್ಕೃತಿಕ ಪದಗಳು ಮಲಯಾಳಂ ಪದ ಗಳಾಗಿಯೇ ಕನ್ನಡಿಗರ ನಡುವೆ ಬಳಕೆಯಲ್ಲಿವೆ ಉದಾಹರಣೆಗೆ;
ತರವಾಡ್ ಕೈಕೊಟ್ಟು ಕಳಿ ಮೂಪ್ಪರ್
ವೆಳಿಚ್ಚಪಾಡ್ ತಿರುವಾದಿರ ಕಾರಣವರ್

ಇನ್ನು ಕೆಲವು ಸಂದರ್ಭಗಳಲ್ಲಿ ಕೆಲವೊಂದು ಪದಗಳು ಕನ್ನಡದಲ್ಲಿ ಬಳಕೆಯಾದವುಗಳೇ ಆದರೂ ಕಾಸರಗೋಡಿನ ಸಾಮಾಜಿಕ ಸಂದರ್ಭದಲ್ಲಿ ಮಲಯಾಳಂ ಅರ್ಥಗಳಲ್ಲಿಯೇ ಬಳಕೆಯಾಗುತ್ತವೆ. ಉದಾಹರಣೆಗೆ:
ಪದಗಳು ಅರ್ಥ ಪದಗಳು ಅರ್ಥ
ಶೀಲ - ರೂಢಿ ಮೋನೆ - ಮಗನೇ
ಅವಸರ - ಸಂದರ್ಭ ಮೋಳೆ - ಮಗಳೇ
ದೈವಾದೀನ - ದೈವಕೃಪೆ ಸಮರ - ಮುಷ್ಕರ
ಪತ್ರ - ಪತ್ರಿಕೆ ಅವಕಾಶ - ಹಕ್ಕು
ಕೆಲವು ಮಲಯಾಳಂ ಸಮುದಾಯಗಳಲ್ಲಿ ಅನೇಕ ಪದಗಳು ಕನ್ನಡದ ಪ್ರಭಾವದಿಂದಲೇ ರೂಪುಗೊಂಡಿವೆ. ಇವುಗಳನ್ನು ಕನ್ನಡದ ಪ್ರಭಾವದಿಂದ ಮಲಯಾಳಿಗರು ರೂಪಿಸಿಕೊಂಡರೆಂದು ಭಾವಿಸಬಹುದು. ಇವು ಕನ್ನಡ ಸಮಾಜದ ನಡುವೆ ಬದುಕುವ ಮಲಯಾಳಿಗರಲ್ಲಿ ಮಾತ್ರ ಇದೆ. ಇವುಗಳ ಅನುವಾದ ಸರಳ.
ಉದಾಹರಣೆಗೆ:
ಕನ್ನಡ ಕನ್ನಡ ಪರಿಸರದ ನಿದರ್ಿಷ್ಟ ಮಲಯಾಳಂನಲ್ಲಿ
ಮಲಯಾಳಂ ಸಮುದಾಯದಲ್ಲಿ
ಎಲೆ ಎಲ ಇಲ
ಬೆಳೆ ಬೆಳ ವಿಳ
ಒರಳು ಒರಳ್ ಉರಲ್
ಹೊಗೆ ಪೊಗ ಪುಗ
ಹೊಳೆ ಪೊಯ ಪು-

ಚೆಂಡು ಚೆಂಡ್ ಪಂದ್
ಅಜ್ಜ ಅಜ್ಜೆ ಅಪ್ಪೂಪ್ಪನ್
ಅಜ್ಜಿ ಅಜ್ಜಿ ಅಮ್ಮೂಮ್ಮ
ಮಗಳು ಮೋಳು ಮಕಳ್
ಜಾಗೆ ಜಾಗ ಸ್ಥಲಂ
ಜಾರು ಜಾರ್ ತೆನ್ನ್
ತೆಂಗಿನೆಣ್ಣೆ ತೇಙ ಎಣ್ಣ ವೆಳಿಚ್ಚೆಣ್ಣ
ಬೆಳ್ಳುಳ್ಳಿ ಬೆಳ್ತುಳ್ಳಿ ವೆಳ್ಳಪೂಡ್
ಈರುಳ್ಳಿ ಉಳ್ಳಿ ಸವೋಳ
ಬಟಾಟೆ ಬಟಾಟ ಉರುಳ ಕಿಳಂಗ್
ಅಡಕೆ ಅಡಕ ಪಾಕ್
ಹತ್ತುಸಾವಿರ ಪತ್ತಾಯಿರ ಪದಿನಾಯಿರಂ
ಹನ್ನೆರಡುಸಾವಿರ ಪಂದ್ರಂಡಾಯಿರ ಪಂದೀರಾಯಿರಂ
ಹದಿನೈದುಸಾವಿರ ಪದಿನೆಂಜಾಯಿರ ಪದಿನೈಯ್ಯಾಯಿರಂ
ಹದಿನೆಂಟುಸಾವಿರ ಪದಿನೆಟ್ಟಾಯಿರ ಪದಿನೆಣ್ಣಾಯಿರಂ

... ಮುಂದುವರಿಯುವುದು...

0 comments:

Post a Comment