ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಬೆಂಗಳೂರು: ಗೋವಿನಿಂದ ಮಾನವನಿಗೆ ಅಪಾರ ಲಾಭವಿದೆ ಗೋವಿನ ಕುರಿತು ವೈಜ್ಞಾನಿಕವಾಗಿ ಚಿಂತಿಸಿ ಅದರ ಉಪಯೋಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹಾನ್ ದಾರ್ಶನಿಕ ಶ್ರೀರಾಘವೇಶ್ವರರು ಎಂದು ಆದಿಚುಂಚನಗಿರಿ ಮಹಾಸಂಶ್ಥಾನದ ಶ್ರೀ ಬಾಲಗಂಗಾಧರ ನಾಥ ಸ್ವಾಮಿಜಿಯವರು ತಿಳಿಸಿದರು. ನಗರದ ಶಿಕ್ಷಕ ಸದನದಲ್ಲಿ ನಂದನ ಚಾತುರ್ಮಾಸ್ಯ ಸಮಿತಿ ಮತ್ತು ಶ್ರೀಭಾರತೀ ಪ್ರಕಾಶನ ಜಂಟಿಯಾಗಿ ಆಯೋಜಿಸಿದ್ದ ಗೋ ವಿಶ್ವಕೋಶ ಗ್ರಂಥ ಮತ್ತು ರಾಮಕಥಾ ಧ್ವನಿಮುದ್ರಿಕೆಗಳನ್ನು ಗವ್ಯೊತ್ಪನ್ನಗಳನ್ನು ಲೋಕಾರ್ಪಣೆಮಾಡಿ ಅವರು ಮಾತನಾಡಿದರು.


ಗೋವು ನಿರುಪಯುಕ್ತ ಅದರಿಂದ ಯಾವುದೇ ಲಾಭವಿಲ್ಲಎನ್ನುವ ಬ್ರಮೆಯನ್ನು ಜನರಲ್ಲಿ ಹೋಗಲಾಡಿಸಿದರು ಶ್ರೀ ರಾಘವೇಶ್ವರರು ಗೋವಿನ ಮಹತ್ವವನ್ನು ನಮಗೆ ನಿರಂತರವಾಗಿ ತಿಳಿಸುತ್ತದ್ದಾರೆ. ಅಲ್ಲದೇ ಗೋವಿನಿಂದ ವೈಜ್ಞಾನಿಕವಾಗಿ ನಮಗಾಗುವ ಪ್ರಯೋಜನವನ್ನು ತಿಳಿಸಿದ್ದಾರೆ. ಗೋವಿನ ವಿಷಯವಲ್ಲದೆ ಇನ್ನೂ ಅನೇಕ ಸಾಮಾಜಿಕ ಏಳಿಗೆಗಾಗಿ ಶ್ರಮಿಸುತ್ತದ್ದಾರೆ ಅವರ ಕುರಿತು ನಮಗೆ ವಿಶೇಷ ಪ್ರೀತಿ ಹಾಗೂ ಗೌರವಗಳಿವೆ ಎಂದು ಅಭಿಪ್ರಾಯಪಟ್ಟರು.

ತುಮುಕೂರು ವಿ.ವಿ ಕುಲಪತಿ ಡಾ. ಎಸ್.ಸಿ ಶರ್ಮಾ ಮಾತನಡಿ ಹಣಗಳಿಕೆಗಿಂತ ಅದನ್ನು ಸಧ್ವಿನಿಯೋಗ ಗೊಳಿಸುವುದು ಶ್ರೇಷ್ಠ, ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮುಖಮಾಡದೆ, ದೇಶೀಯ ಸಂಸ್ಕೃತಿಯತ್ತ ನಮ್ಮ ಯುವಜನತೆ ಮನಮಾಡಬೇಕಿದೆ ಎಂದು ತಿಳಿಸಿದರು.

ಸಂಸ್ಕೃತ ವಿ.ವಿ ಕುಲಪತಿ ಡಾ||ಮಲ್ಲೇಪುರಂ ಜಿ.ವೆಂಕಟೇಶರವರು ಮಾತನಾಡಿ ಒಂದು ವಿಶ್ವಕೋಶವನ್ನು ರಚಿಸುವುದು ಸುಲಭದ ಮಾತಲ್ಲ ಅಲ್ಲದೇ ಗೋವಿಶ್ವಕೋಶ ಈವರೆಗೆ ಭಾರತದ ಯಾವುದೇ ಭಾಷೆಯಲ್ಲಿ ಬಂದಿಲ್ಲ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಂದಿರುವುದು. ಶ್ಲಾಘನೀಯ. ಗೋವು ಮಾನವನ ಬದುಕಿನ ಒಂದು ಅವಿಭಾಜ್ಯ ಅಂಗ ಎಂದು ತಿಳಿಸಿದರು.
ರಾಮಕಥಾ ವೆಬ್‌ಸೈಟ್ ಕೂಡ ಲೋಕಾರ್ಪಣೆಗೊಂಡಿತು. ಕನ್ನಡಪ್ರಭ ಮತ್ತು ಸುವರ್ಣಸುದ್ದಿವಾಹಿನಿಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ರವರು ರಾಮಕಥಾ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿದರು. ಅಲ್ಲದೇ ’ಇನ್ನಷ್ಟು ಬೇಕೆನ್ನ ಹೃದಯಕ್ಕೆರಾಮ’, ’ಮಾತು - ಕಥೆ’, ’ನರಶಿಂಗ್ ದಿ ಸೋಲ್’, ’ರಾಮಾವತರಣ’, ’ಹನುಮ ಜನುಮ’, ಧ್ವನಿಮುದ್ರಿಕೆಗಳು ಹಾಗೂ ಪುಸ್ತಕಗಳು ಬಿಡುಗಡೆ ಗೊಂಡವು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಘವೇಶ್ವರ ಶ್ರೀಗಳು ಗೋಹತ್ಯೆಗೆ ಮಾನವನ ಅಜ್ಞಾನವೇ ಕಾರಣ, ಗೋವಿನ ಮಹತ್ವವನ್ನು ಸರಿಯಾಗಿ ತಿಳಿದು ಕೊಳ್ಳದೆ ಇಂತಹ ಕೆಲಸವನ್ನು ಮಾಡುತ್ತಿದ್ದಾನೆ ಎಂದರು ಹಾಗೇ ಎಲ್ಲರ ಅಂತರಾತ್ಮ ಎನ್ನುವುದು ಅಂತರ್ಜಾಲ ತಾಣವಿದ್ದಂತೆ ಆ ತಾಣದಲ್ಲಿ ಶ್ರೀರಾಮ ಸದಾನೆಲಸಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಇದಕ್ಕೂ ಮೊದಲು ಇಮಾಮಿ ಉದ್ಯಮ ಸಮೂಹದ ಸಹಸಂಸ್ಥಾಪಕರಾದ ಶ್ರೀರಾಧೇಶ್ಯಾಮ್ ಅಗ್ರವಾಲ್ ಮತ್ತು ಶ್ರೀರಾಧೇಶ್ಯಾಮ್ ಗೊಯಂಕರವರಿಗೆ ನಂದನ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಮಠದ ಅಧ್ಯಕ್ಷ ಎಮ್.ಎನ್ ಭಟ್ ಸಭಾಪೂಜೆ ನೆರೆವೇರಿಸಿದರು, ಸಿ.ಹೆಚ್.ಎಸ್ ಭಟ್. ವಿದ್ವಾನ್ ಜಗದೀಶ ಶರ್ಮಾ, ಮೋಹನ ಭಾಸ್ಕರ ಹೆಗಡೆ ನಿರೂಪಿಸಿದರು.
ವರದಿ: ವಿನಯ್ ಸಾಮ್ರಾಟ್.

0 comments:

Post a Comment