ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಅದೆಷ್ಟೋ ವರ್ಷಗಳಿಂದ ಸುಳ್ಯ ಗೃಹರಕ್ಷಕ ದಳದ ಸದಸ್ಯರು ಸ್ವಂತ ಸೂರಿನ ಆಶ್ರಯವಿಲ್ಲದೆ ಯಾರದೋ ಕೃಪಾದೃಷ್ಟಿಯಿಂದ ನೀಡಲಾದ ಒಂದು ಸಣ್ಣ ಕೊಠಡಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇದ್ದರೂ ಪೋಲೀಸ್ ಸಿಬ್ಬಂದಿಗಳಿಗೆ ಹೆಗಲೆಣೆಯಾಗಿ ನಿಂತು ನಿಷ್ಕಾಮ ಸೇವೆ ಸಲ್ಲಿಸುವ ಇವರ ಪಾಲಿಗೆ ಸ್ವಂತ ಗೃಹರಕ್ಷಕ ದಳ ಕಛೇರಿ ಅನ್ನುವುದು ಕನಸಿನ ಮಾತಾದರೂ, ಪ್ರಶಸ್ತಿಗಳನ್ನು ಮುಡಿಗೇರಿಸುವ ಕನಸು ನನಸಾಗಿಸಿದವರು ಇವರು. ತರಬೇತಿಯ ಸಂದರ್ಭಗಳಲ್ಲಿ ಚಿನ್ನ ಅಥವಾ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡು ತಮ್ಮ ಕಛೇರಿಗೆ ಮರಳುವ ಈ ಘಟಕ ಈ ಬಾರಿ ಮುಖ್ಯಮಂತ್ರಿಯವರು ಚಿನ್ನದ ಪದಕವನ್ನು ನೀಡಿ ಗೌರವಿಸಲ್ಪಟ್ಟಿತು. ವರ್ಷಂಪ್ರತಿ ನಡೆಸಲಾಗುವ ಪಶ್ಚಿಮ ವಲಯ ಗೃಹರಕ್ಷಕರ ಕ್ರೀಡಾಕೂಟದಲ್ಲಿ ಒಂದೆರಡು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಇವರು ಈ ವರ್ಷ ಪ್ರಶಸ್ತಿಯ ಸಂಖ್ಯೆಯನ್ನು 5ಕ್ಕೆ ಏರಿಸಿ ತಮ್ಮ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದ ನಿಸ್ಸೀಮರಿವರು.

ಅಕುಮಾ ಸುಳ್ಯ(ಮಾಧವಿ)

0 comments:

Post a Comment