ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್: ಪದ್ಮಾ ಭಟ್
ಪಕ್ಕದ ಮನೆಯ ಪುಟ್ಟ ಬಂದು ಅಕ್ಕ ನಮಗೆ ನಾಳೆ ಟ್ರಿಫ್ ಗೆ ಹೋಗಬೇಕು ಸ್ಕೂಲಿಂದ ಕರ್ಕೊಂಡು ಹೋಗ್ತಾರಂತೆ ಎಂದ. ಅದಕ್ಕೆ ನಾನು ಪ್ರವಾಸದ ಚೀಟಿ ಮಾಡಿ ಆಯ್ತೇನೋ ಕೇಳ್ದೆ.. ಹಾಗಂದ್ರೇನು ಎನ್ನೋ ಅವನ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಗೊತ್ತಾಗದೇ ನನ್ನ ಶಾಲಾ ದಿನದ ನೆನಪುಗಳಲಿ ನಾನೇ ಕಳೆದು ಹೋದೆ..

ಪ್ರಾಥಮಿಕ ಶಾಲೆಗೆ ಹೋಗುವಾಗ ಪ್ರವಾಸವೆಂದರೆ ಎಲ್ಲಿಲ್ಲದ ಸಂಭ್ರಮ. ಹೋಗಲು ಹದಿನೈದು ದಿನಗಳಿರುವಾಗಲೇ ಪುಸ್ತಕದ ಹಾಳೆಯನ್ನು ಹರಿದು ಚೌಕಾಕಾರವಾಗಿ ಕತ್ತರಿಸಿ ನಮ್ಮ ಶಾಲೆಯ ಹೆಸರು ಬರೆದು "ಪ್ರವಾಸಕ್ಕೆ ಜಯವಾಗಲಿ" ಎಂದು ಎಲ್ಲಾ ಚೀಟಿಗಳೂ ಮಾತನಾಡುವಂತೆ ಮಾಡುತ್ತಿದ್ದೆವು..ನಮ್ಮೊಳಗಿನ ಸ್ಪರ್ಧೆ ಎಷ್ಟಿತ್ತೆಂದರೆ ಸಾವಿರ ಚೀಟಿಗಳನ್ನು ಮಾಡಿ ಮನೆಯಲ್ಲಿ ಬೈಸಿಕೊಳ್ಳುತ್ತಿದ್ದೆವು..ಅಪ್ಪನ ಹತ್ತಿರ ಪ್ರವಾಸದ ಅನುಮತಿಗಾಗಿ ಅವನ ಮೂಡ್ ಚೆನ್ನಾಗಿರುವಾಗಲೇ ಹೋಗಿ ಮಾತನಾಡಿಸುತ್ತಿದ್ದೆವು.ಇನ್ನು ಎಲ್ಲಾ ಸ್ನೇಹಿತರೂ ಬರಲಿ ಎಂದು ಎಲ್ಲರ ಮನೆಗೂ ಹೋಗಿ ಅವರ ಅಪ್ಪ ಅಮ್ಮನ ಹತ್ತಿರವೂ ಪ್ಲೀಸ್ ಅವಳನ್ನು ನಮ್ ಜೊತೆ ಕಳಿಸಿ ಎಂದು ಬೇಡಿಕೊಳ್ಳುತ್ತಿದ್ದೆವು..

ನಮ್ಮ ಎಲ್ಲಾ ತರಹದ ಬೇಕು ಬೇಡಗಳು ಹೋಗುವ ಒಂದು ವಾರ ಮೊದಲೇ ಸಿದ್ದವಾಗಿಬಿಡುತ್ತಿತ್ತು..ಅಮ್ಮನ ಹತ್ತಿರ ತೆಗೆದುಕೊಂಡ ದುಡ್ಡನ್ನು ಅಪ್ಪನಿಗೆ ಹೇಳದೇ ಅಪ್ಪನ ಹತ್ತಿರ ತೆಗೆದುಕೊಂಡ ದುಡ್ಡನ್ನು ಅಮ್ಮನಿಗೆ ಹೇಳದೇ ಖರ್ಚಿಗಾಗಿ ಅಲ್ಲಿ ಇಲ್ಲಿ ಕೂಡಿಟ್ಟ ಹಣಗಳು ಪ್ರವಾಸದ ಖರ್ಚಿಗುತ್ತಿದ್ದವು. ಅಮ್ಮ ಅಪ್ಪ ಹೇಳಿದ ಹಾಗೆಯೇ ಕೇಳುತ್ತಿದ್ದೆವು ಪ್ರವಾಸಕ್ಕೆ ಹೋಗುವ ದಿನದವರೆಗೂ ಹೇಳಿದ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿ ಅವರನ್ನು ಗೆಲ್ಲಬೇಕೆಂಬ ಹಠ ನಮ್ಮದಾಗಿರುತ್ತಿತ್ತು.

ಹೋಗುವ ಹಿಂದಿನ ದಿನ ರಾತ್ರಿಯ ಪಾಡಂತೂ ಹೇಳತೀರದು ಆವತ್ತು ರಾತ್ರಿ ಮನೆಯಲ್ಲಿ ಯಾರಿಗೂ ನಿದ್ರೆ ಇರುತ್ತಿರಲಿಲ್ಲ..ನನಗಂತೂ ಕಣ್ಣು ಮುಚ್ಚಿದರೆ ಸಾಕು ಪ್ರವಾಸಕ್ಕೆ ನನ್ನನ್ನು ಬಿಟ್ಟು ಹೋದಂತೆ...!ನಿದ್ರೆ ಬಂದು ಬೆಳಿಗ್ಗೆ ಬೇಗ ಎಚ್ಚರವಾಗದಿದ್ದರೆ ಬಿಟ್ಟು ಹೋಗುತ್ತಾರೆ ಎಂದು ರಾತ್ರಿ ಪೂರ್ತಿ ಜಾಗರಣೆ.
ಮರುದಿನ ಬೆಳಗಿನ ಆ ಖುಷಿಗೆ ನನ್ನ ಮನವು ಕುಣಿದಾಡುತ್ತಿತ್ತು... ವಾಹ್ ಆ ಪ್ರವಾಸದ ತಯಾರಿಯ ಸವಿ ಸೊಬಗನ್ನು ಪದಗಳಲ್ಲಂತೂ ಹೇಳಲು ಅಸಾಧ್ಯ..ಎಲ್ಲವೂ ನೆನಪಾಗಿ ಆಖುಷಿಗಳೆಂದೂ ಮನದ ಮೂಲೆಯಲ್ಲಿ ಇಂದಿಗೂ ಅಚ್ಚಾಗಿ ಉಳಿದಿದೆ.2 comments:

praveen said...

chennaagide baraha.nimma barahadalli naanu nanna haleya nenapugali kaledu hode.nanna shaalaa jeevanada nenapu maadikotta nimage dhanyavaadagalu.

Sadashiva S said...

Are! Paddu, Howdalvene!? nin baraha odtha Nam shaalaa Dinagala pravaasada kshanagalu kanna munde addaadthaayide... innashtu baree..

Post a Comment