ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ನೂಪುರ ಭ್ರಮರಿಯಿಂದ ನೃತ್ಯ ವಿಮರ್ಶಕರಿಗಾಗಿ ರಾಜ್ಯಮಟ್ಟದ ಸ್ಪರ್ಧೆ
ನರ್ತನ ಮತ್ತು ಪ್ರದರ್ಶಕ ಕಲೆಗಳ ಕುರಿತ ದ್ವೈಮಾಸಿಕ ಮತ್ತು ಪ್ರತಿಷ್ಠಾನ `ನೂಪುರ ಭ್ರಮರಿ' - ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸುವ, ಗೌರವಿಸುವ ಮತ್ತು ವಿಮರ್ಶನ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ 2010ನೇ ಸಾಲಿನಲ್ಲಿ ರಾಜ್ಯಮಟ್ಟದ 'ವರ್ಷದ ಶ್ರೇಷ್ಠ ನರ್ತನ ವಿಮರ್ಶೆ' ಸ್ಪರ್ಧೆಯನ್ನು ಆರಂಭಿಸಿದ್ದು; ಮೊದಲಿನ 2 ವರುಷಗಳಲ್ಲಿ ಈ ಪ್ರಶಸ್ತಿಯು ವಿಮರ್ಶಕರಾದ ಪ್ರಿಯಾ ರಾಮನ್ ಮತ್ತು ಪ್ರತಿಭಾ ಸಾಮಗ ಅವರಿಗೆ ಸಂದಿರುತ್ತದೆ.

ಈ ಹಿನ್ನೆಲೆಯಲ್ಲಿ 2012ನೇ ಸಾಲಿನ ಪ್ರಶಸ್ತಿಗಾಗಿ ವಿಮರ್ಶಕರಿಂದ ರಚಿತ ಪ್ರಕಟಿತ ವಿಮರ್ಶೆಗಳನ್ನು ಆಹ್ವಾನಿಸಿದ್ದು ; ಪ್ರವೇಶಗಳನ್ನು ಕಳುಹಿಸಲು ಅಂತಿಮ ದಿನಾಂಕ ಜನವರಿ 15, 2013.
ನಿಯಮಾವಳಿಗಳು
ರಾಜ್ಯದ ಕನ್ನಡ/ಇಂಗ್ಲೀಷ್ ಪತ್ರಿಕೆ/ನಿಯತಕಾಲಿಕೆ/ಅಂತರ್ಜಾಲ ಪತ್ರಿಕೆಗಳಲ್ಲಿ 2012 ಜನವರಿಯಿಂದ 2012 ಡಿಸೆಂಬರ್ ಒಳಗೆ ಪ್ರಕಟವಾದ ನೃತ್ಯ/ನಾಟ್ಯ ಸಂಬಂಧೀ ಪ್ರದರ್ಶನ/ರಂಗಪ್ರವೇಶ/ ಸಮ್ಮೇಳನ/ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳಿಸಬಹುದಾಗಿದೆ.
ಲೇಖಕರು ತಮ್ಮ ಅತ್ಯುತ್ತಮವೆನಿಸುವ 3 ವಿಮರ್ಶೆಗಳನ್ನು ಅಥವಾ ಅದರ ಜೆರಾಕ್ಸ್ ಪ್ರತಿಯನ್ನು ಅಥವಾ ನಾಮನಿರ್ದೇನದ ಶಿಫಾರಸ್ಸುಗಳನ್ನು ಅಂಚೆ ಅಥವಾ ಈಮೇಲ್ ಮೂಲಕ ಜನವರಿ 15, 2013ರ ಒಳಗೆ ತಲುಪುವಂತೆ ಕಳುಹಿಸಬೇಕು.
ಕಾರ್ಯಕ್ರಮದ ಸಾಧಕ-ಬಾಧಕ ಅಂಶಗಳನ್ನು ಚರ್ಚಿಸುವ ವಿಮರ್ಶೆಗಳಿಗೆ ಮಾತ್ರ ಸ್ವಾಗತ. ಕಾರ್ಯಕ್ರಮ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಓರ್ವ ಲೇಖಕ/ಲೇಖಿಕೆ ತಲಾ 3 ವಿಮರ್ಶೆಗಳನ್ನು ಕಳುಹಿಸಲು ಅವಕಾಶವಿದ್ದು ; ಪ್ರತ್ಯೇಕ ಹಾಳೆಯಲ್ಲಿ ಸ್ವವಿವರ ಮತ್ತು ವಿಮಶರ್ೆಯ ವಿವರಗಳನ್ನು ಬರೆದು ಲಗತ್ತಿಸಬೇಕು.
ಈ ಕುರಿತಂತೆ ಕಲಾವಿದರು/ಗುರು-ಶಿಕ್ಷಕರು/ಕಲಾಸಕ್ತ ಬಂಧುಗಳು ಉತ್ತಮರೆನಿಸುವ ವಿಮರ್ಶಕರನ್ನು ಸೂಕ್ತವೆನಿಸುವ ವಿವರಗಳೊಂದಿಗೆ ನಾಮನಿರ್ದೇಶನಗೊಳಿಸಲು (ನಾಮಿನೇಟ್) ಅವಕಾಶವಿದೆ.
ಸೂಕ್ತವೆನಿಸುವ ಪ್ರವೇಶಗಳು ಬಾರದೇ ಹೋದಲ್ಲಿ ಪ್ರಶಸ್ತಿಯ ಗುಣಮಟ್ಟದ ದೃಷ್ಟಿಯಿಂದ ಪ್ರಶಸ್ತಿಯನ್ನು ಆ ವರುಷಕ್ಕೆ ತಡೆಹಿಡಿಯಲಾಗುವುದು. ಸ್ಪರ್ಧೆಯ ಸಂಬಂಧವಾಗಿ ಯಾವುದೇ ವೈಯಕ್ತಿಕ ಲಾಬಿಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ.

ಅತ್ಯುತ್ತಮನಿಸುವ ವಿಮರ್ಶೆಗೆ ಫೆಬ್ರವರಿ 15, 2013ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ 'ನೃತ್ಯ ಸಂಶೋಧನಾ ಸಮ್ಮೇಳನ'ದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸನ್ಮಾನಪತ್ರ, ಸ್ಮರಣಿಕೆ, ನಗದು ಮತ್ತು ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.

ಪ್ರವೇಶಗಳನ್ನು ಕಳುಹಿಸಬೇಕಾದ ವಿಳಾಸ:
ಮನೋರಮಾ ಬಿ.ಎನ್
ಸಂಪಾದಕರು, `ನೂಪುರ ಭ್ರಮರಿ'
'ಸಾನ್ನಿಧ್ಯ', ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು 571201
ದೂರವಾಣಿ: 9964140927

0 comments:

Post a Comment