ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಬೆಂಗಳೂರು:ಕೃಷಿರಂಗದ ಸಾಧಕರ ಅನುಭವಗಳನ್ನು ಆಧರಿಸಿ ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸುತ್ತಿರುವ ಪುಸ್ತಕಗಳ ಸರಣಿಗೆ ಇನ್ನೊಂದು ಪುಸ್ತಕ ಸೇರ್ಪಡೆಯಾಗುತ್ತಿದೆ.ಉತ್ತಮ ಯೋಜನೆ ಹಾಗೂ ಪರಿಶ್ರಮದ ನಿರ್ವಹಣೆಯಿಂದ ಸಣ್ಣ ಹಿಡುವಳಿಯಲ್ಲೂ ಸ್ವಾವಲಂಬಿ ಕೃಷಿ ಬದುಕು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬೆಂಗಳಿ ಊರಿನ ಬೆಂಗಳಿ ವೆಂಕಟೇಶ-ಗಂಗಾ ಅವರ ಕುಟುಂಬದ ಯಶೋಗಾಥೆಯನ್ನು ಒಳಗೊಂಡಿರುವ ’ಸುಸ್ಥಿರ ಕೃಷಿಗೆ ಹತ್ತಾರು ಹಾದಿ’ ಪುಸ್ತಕವನ್ನು ಜನವರಿ ೧೩, ೨೦೧೩ರಂದು ಸಾಯಂಕಾಲ ೪.೦೦ ಗಂಟೆಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದ ಆರ್.ಡಿ. ನಂಜಯ್ಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಗುವುದು. ಪಶುವೈದ್ಯಾಧಿಕಾರಿ ಹಾಗೂ ಬರಹಗಾರ ಡಾ. ಗಣೇಶ ಎಂ. ನೀಲೇಸರ ಅವರು ಬರೆದಿರುವ ಈ ಪುಸ್ತಕವನ್ನು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಎಸ್. ಯತಿರಾಜ್ ಬಿಡುಗಡೆ ಮಾಡುವರು. ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಶ್ರೀ ಪಡ್ರೆ, ಹೆಚ್. ಎನ್. ಆನಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.


ವರದಿ:ಅನಿತಾ ಪೈಲೂರು

0 comments:

Post a Comment