ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಮಿಜಾರು : ಪತ್ರಿಕಾರಂಗದಲ್ಲಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಸಣ್ಣ ಪ್ರಮಾಣದ ಕಷ್ಟ, ಅಷ್ಟೇ ಪ್ರಮಾಣದ ತ್ಯಾಗ ಇವೆರಡೂ ಅಗತ್ಯವಾಗಿರುತ್ತವೆ.ಕರ್ತವ್ಯನಿಷ್ಠೆ,ಬದ್ಧತೆ,ಗಾಂಭೀರ್ಯ,ಧೈರ್ಯ,ವ್ಯಾವಹಾರಿಕ ಜ್ಞಾನವೂ ಅಷ್ಟೇ ಮುಖ್ಯವಾಗಿರುತ್ತದೆ.ಕೇವಲ ಗ್ಲಾಮರ್ ಗೋಸ್ಕರ ಪತ್ರಿಕೋದ್ಯಮಕ್ಕೆ ಬರುತ್ತೇನೆಂದರೆ ಅದು ಸರಿಯಲ್ಲ; ಈ ಮಾತು ಹೇಳಿರೋದು ಪಬ್ಲಿಕ್ ಟಿ.ವಿ.ಯ ಚೇರ್ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಎಚ್.ಆರ್.ರಂಗನಾಥ್.

ಆಳ್ವಾಸ್ ಪದವಿ ಕಾಲೇಜು ಪತ್ರಿಕೋದ್ಯಮ ವಿಭಾಗಕ್ಕೆ ಹತ್ತು ವರುಷ ಪೂರೈಸಿದ ಹಿನ್ನಲೆಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾದ "ಮಿಡಿಯಾ ಬಝ್ - 2013" ಮಾಧ್ಯಮ ಉತ್ಸವ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ರಂಗದಲ್ಲಿ ಇರುವಂತೆ ಪತ್ರಿಕಾ ರಂಗದಲ್ಲೂ ಭ್ರಷ್ಟಾಚಾರವಿದೆ. ಉತ್ತಮ ಪತ್ರಕರ್ತರು ಹೊರಬಂದಲ್ಲಿ ಉತ್ತಮ ಮಾಧ್ಯಮ ರಂಗದ ನಿರ್ಮಾಣ ಸಾಧ್ಯವಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಅದರದ್ದೇ ಆದ ಇತಿಮಿತಿಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಿದ್ದರು. ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಅತಿಥಿಗಳಾಗಿದ್ದರು. ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ವೇದಿಕೆಯಲ್ಲಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಮೌಲ್ಯ ಜೀವನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಿತಾ ಮತ್ತು ರೇಣುಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಹರೀಶ್ ಕೆ.ಆದೂರು ವಂದಿಸಿದರು.

ಪಬ್ಲಿಕ್ ಟಿ.ವಿ.ಯ ಚೇರ್ಮೆನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಎಚ್.ಆರ್.ರಂಗನಾಥ್ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಹರೀಶ್ ಕೆ.ಆದೂರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಮ್ಯಗ್ನಂ ಇಂಟರ್ ಗ್ರಾಫಿಕ್ಸ್ ಸಂಸ್ಥೆಯ ಅಧ್ಯಕ್ಷ ಸುಧೀರ್ ಘಾಟೆ ಜಾಹೀರಾತು ವಿಷಯದಲ್ಲಿ ಉಪನ್ಯಾಸ ನೀಡಿದರು. ನುಡಿಚಿತ್ರ ಬರವಣಿಗೆ ಹಾಗೂ ಗ್ರಾಮೀಣ ವರದಿಗಾರಿಕೆಯ ಕುರಿತಾಗಿ ಡಾ.ನಿರಂಜನ ವಾನಳ್ಳಿ ಹಾಗೂ ಶಿವಾನಂದ ಕಳವೆ ಕಾರ್ಯಕ್ರಮ ನಡೆಸಿಕೊಟ್ಟರು.
ರಾಜ್ಯದ 14ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

0 comments:

Post a Comment