ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ - ಇದು ಕೃಷಿ ಲೋಕದ ಅಚ್ಚರಿ...!

ಇಲಿ ಹೆಗ್ಗಣಗಳ ಹಾವಳಿಯಿಂದ ಪಸಲು ನಾಶವಾಗುವದು ಸರ್ವೇ ಸಾಮಾನ್ಯವಾದರೆ ಈ ಮೂಕ ಪ್ರಾಣಿಗಳೇ ಮುಂದೆ ನಿಂತು ಕೃಷಿ ಪೂರಕ ಚಟುವಟಿಕೆಗೆ ಸ್ಪಂದಿಸುವ ದೃಶ್ಯಾವಳಿಯೂ ನಡೆಯುತ್ತಿದೆ ಎಂದರೆ ನಂಬುವಿರಾ...? ಅಂಕೋಲಾ ವ್ಯಾಪ್ತಿಯ ಪ್ರಶಾಂತ ಭಟ್ಟರ ತೋಟದಲ್ಲಿ ಅಚ್ಚರಿ ಕಾಣಸಿಗುತ್ತದೆ. ಹೆಗ್ಗಣಗಳ ಸಹಾಯದಿಂದ ಸಾವಯವ ಗೊಬ್ಬರವನ್ನು ತಯಾರಿಸಿ ಪ್ರಶಾಂತ ಭಟ್ಟ ತಮ್ಮ ತೋಟಕ್ಕೆ ಬಳಸುತ್ತಲಿದ್ದಾರೆ. ಹೆಗ್ಗಣಗಳು ತಯಾರಿಸಿದ ಗೊಬ್ಬರದಿಂದ ಮಣ್ಣಿನ ಪಲವತ್ತತೆಯೂ ಅಧಿಕವಾಗಿದೆಯೆನ್ನುತ್ತಾರೆ ಅವರು.

ಸಗಣಿ ಹಾಗೂ ಇತರೆ ತ್ಯಾಜ್ಯಗಳನ್ನು ಕೊಳೆಯಲಿಕ್ಕೆಂದು ಬಿಸಾಡುವ ಪ್ರದೇಶದಲ್ಲಿ ಆಕಸ್ಮಿಕವಾಗಿ ತಮ್ಮ ನಿವಾಸವನ್ನು ನಿರ್ಮಿಸಿಕೊಂಡ ಹೆಗ್ಗಣಗಳ ಕಾರ್ಯ ಚಟುವಟಿಕೆಗಳನ್ನು ಮೊದ ಮೊದಲು ನಿರ್ಲಕ್ಷಿಸಿದ ಪ್ರಶಾಂತ ಭಟ್ಟರು ನಂತರ ಮೂಕಪ್ರಾಣಿಗಳ ವಾಸಸ್ಥಾನದ ಸಮೀಪ ಉತ್ತಮ ಇಳುವರಿ ಬಂದಿರುವದನ್ನು ಗಮನಿಸಿದರು.


ಅದಕ್ಕೆ ಕಾರಣವನ್ನು ಬೆನ್ನತ್ತಿದಾಗ ತ್ಯಾಜ್ಯಗಳನ್ನು ಹಂತ ಹಂತವಾಗಿ ಮಿಶ್ರಣ ಮಾಡಿ ಬಾಳೆಗಿಡಗಳಿಗೆ ಸಿಂಪಡಿಸುತ್ತಿದ್ದರೆ ಇಳುವರಿ ಅಧಿಕ ಎಂಬ ಸತ್ಯ ಅರಿವಾಯಿತು. ಅದೇ ಸ್ಥಳದಲ್ಲಿ ಇನ್ನಷ್ಟು ಮಣ್ಣು ಹಾಗೂ ಕಸ ಗೊಬ್ಬರಗಳನ್ನು ಸುರುವಿದರು. ಅದನ್ನು ಸಮರ್ಪಕವಾಗಿ ಹೆಗ್ಗಣಗಳು ಮಿಶ್ರಣ ಮಾಡುತ್ತಲಿದ್ದವು. ಅಡಿಕೆಯ ಸೊಪ್ಪು, ತೆಂಗಿನ ಸೋಗೆಗಳನ್ನು ಇವು ಸಮತಟ್ಟಾಗಿ ಮಿಶ್ರಣ ಮಾಡಿ ಮಣ್ಣಿನೊಂದಿಗೆ ಬೆಸೆದು ಗೊಬ್ಬರ ತಯಾರಿಸುತ್ತಿದ್ದವು.


ದಿನಕಳೆದಂತೆ ಇಲ್ಲಿ ತಯಾರಾದ ಗೊಬ್ಬರವನ್ನೇ ತಮ್ಮ ತೋಟಗಳಿಗೆ ಉಣಬಡಿಸಿದ ಪ್ರಶಾಂತ ಉತ್ತಮ ಇಳುವರಿಯನ್ನು ಪಡೆದರು. ಹೆಗ್ಗಣಗಳ ವಂಶವೃಕ್ಷವೂ ಬೆಳೆದಂತೆ ಗೊಬ್ಬರ ತಯಾರಿಕೆಯ ಪ್ರಮಾಣವೂ ಅಧಿಕವಾಯಿತು.

ಅಚ್ಯುತಕುಮಾರ, ಯಲ್ಲಾಪುರ, ಉತ್ತರ ಕನ್ನಡ

2 comments:

ನಿರಂತರ ಚಲನೆಯಲ್ಲಿರು said...

ಜೈ ಹೆಗ್ಗಣ ಲಕ್ಷಮೀಯೇ ನಮಃ>

prashasti said...

ಸೂಪರ್ :-)

Post a Comment