ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ದೈನಂದಿನ ಧಾರಾವಾಹಿ - ಭಾಗ 33 ಕಳೆದ ಸಂಚಿಕೆಯಿಂದ...
-ಅನು ಬೆಳ್ಳೆ
ಅಲ್ಲಿ ಹೆಚ್ಚು ಸಮಯ ವ್ಯಯಿಸುವುದು ಸರಿಯಿಲ್ಲವೆಂದಾಗ ಅಡುಗೆಯಾಳು ಬಾಯಾರಿಕೆಗೆಂದು ಜ್ಯೂಸ್ ತಂದು ಅವಳ ಮುಂದೆ ಹಿಡಿದ. ಕ್ಷಮಿಸಿ, ನಾನು ಕುಡಿಯೋದಿಲ್ಲ ಅನ್ನುತ್ತಾ ಹೊರಗೆ ಬಂದಾಗ ವಾಣಿಶ್ರೀಯವರು ಹಾಗೆ ಮುಖ ನೋಡ್ತಾ ನಿಂತರೆ ಇಂದ್ರಸೇನರು ಅವಳ ಶಿಸ್ತಿಗೆ ತಲೆತೂಗಿದರು.ಮನೆ ಬಾಗಿಲಿನವರೆಗೂ ಬಂದಿದ್ದೀರಿ. ಜ್ಯೂಸ್ ಕುಡಿಯುವುದಕ್ಕೇನಾಗಬೇಕು? ಇಂದ್ರಸೇನ್ರ ಮಾತು ಬಾಗಿಲಿನವರೆಗೆ ಮಾತ್ರ ಹರಿಯಿತು.

ಮನಸ್ವಿತಾ ಅದಾಗಲೇ ತನ್ನ ನೀಳ ಜಡೆಯನ್ನು ಕುಣಿಸುತ್ತಾ ಕಾರಿನ ಒಳಗೆ ತೂರಿಕೊಂಡಾಗಿತ್ತು.
ಕಾರು ಹೋದತ್ತಲೇ ಇಬ್ಬರೂ ನೋಡುತ್ತಿದ್ದರೂ ಅವರ ಮೆದುಳಿನಲ್ಲಿ ಕೊರೆಯುತ್ತಿದ್ದುದು ನಿಖಿಲ್ಗೆ ಸರಿಯಾದ ಹೆಣ್ಣು ಅನ್ನುವುದು. ವಾಣಿಶ್ರೀಯವರಿಗೆ ಮಗನ ಮೇಲೆ ಸಂಶಯ ಸುಳಿದಾಡಿತು. ಇಷ್ಟೊಂದು ಸೌಂದರ್ಯದ ಚುರುಕಿನ ಹೆಣ್ಣನ್ನು ತನ್ನ ವ್ಯವಹಾರದ ಮೇಲೆ ನಿಗಾವಿಡಲು ನಿಯುಕ್ತಿಗೊಳಿಸಿದ್ದು ಆತನ ಬುದ್ಧಿವಂತಿಕೆಗೆ ಸಾಕ್ಷಿಯೆನಿಸಿತು.

ಮನಸ್ವಿತಾ ನಿರಾಶೆಯಿಂದ ಹಿಂತುರುಗಿದಳಾದರೂ ನಿಖಿಲ್ನಿಗೆ ಫೋನು ಮಾಡಬೇಕಾದ ಅನಿವಾರ್ಯತೆ ಇತ್ತು. ಲಕ್ಷಗಟ್ಟಲೆ ಲಾಭ ಮತ್ತು ಅದರಿಂದ ಬ್ಯಾಂಕ್ ಬಡ್ಡಿಯ ಕಡಿತ ಕೂಡ ಸೇರಿ ದೊಡ್ಡ ಮೊತ್ತವೇ ನಷ್ಟವಾಗುವುದಿತ್ತು. ಕ್ಯಾಬಿನ್ಗೆ ಬಂದವಳೇ ಫೋನ್ ಹಚ್ಚಿದಳು. ಅತ್ತಲ್ಲಿಂದ ನಿಖಿಲ್ನ ದನಿಯ ಬದಲಿಗೆ ಅಪರಿಚಿತ ದನಿಯೊಂದು ಕೇಳಿತು. ತಟ್ಟನೆ ರಿಸೀವರನ್ನು ದೂರ ಹಿಡಿದು ತಾನು ಡಯಲಿಸಿದ ಸಂಖ್ಯೆ ಸರಿಯಾದುದೇ ಎಂದು ಪರಿಶೀಲಿಸಿದಳು. ಮತ್ತೊಮ್ಮೆ ಕಟ್ ಮಾಡಿ ಡಯಲ್ ಮಾಡಿದಾಗಲೂ ಅಪರಿಚಿತ ದನಿಯೆ. ಅತ್ತ ಕಡೆಯಿಂದ, ಮನಸ್ವಿತಾ ಅನ್ನುವ ದನಿ ಕೇಳುತ್ತಲೇ ಆಶ್ಚರ್ಯವಾಯಿತು. ತನ್ನ ಪರಿಚಯವಿರುವ ದನಿಯಾರದೆಂದು ತಿಳಿದುಕೊಳ್ಳಲು ಅಶಕ್ತಳಾದಳು. ಅವಳು ಯಾರೆಂದು ಕೇಳುವ ಮೊದಲೇ ಅತ್ತಲಿಂದ, ನನ್ನನ್ನು ಮರ್ತು ಬಿಟ್ರಿ ಅನ್ಸುತ್ತೆ ಅನ್ನುವ ಮಾತುಗಳನ್ನು ಕೇಳಿದಾಗ ಮತ್ತಷ್ಟು ಅಚ್ಚರಿಯಾಯಿತು.

ಅಶುತೋಶ್ ಬಗ್ಗೆ ಕೇಳಿದ್ದೀರಾ? ವ್ಯಂಗ್ಯವಿರಲಿಲ್ಲ ಮಾತಿನಲ್ಲಿ. ತಟ್ಟನೆ ಮೆದುಳಿನಲ್ಲಿ ನೆನಪಿನ ನೂರು ರೇಖೆಗಳು ಚಿಮ್ಮಿದವು. ಬಹಳ ಲವಲವಿಕೆಯ ಹುಡುಗನೆನಿಸಿತು. ತಾಯ್ನಾಡಿಗಾಗಿ ದೂರದ ಊರಿನಲ್ಲಿದ್ದು ಸೇವಾನಿರತನಾದವನ ಮೇಲೆ ಅಭಿಮಾನವಿತ್ತು. ಬಹಳ ಆತ್ಮೀಯತೆಯಿಂದಲೇ ಮಾತನಾಡಿದಳು.

0 comments:

Post a Comment