ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮಂಗಳೂರು:ಬಡಗ ಎಡಪದವು - ಮಿಜಾರು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ 3 ದಿನಗಳ ಕಾಲ ನಡೆಯಲಿರುವ ಶ್ರೀ ಭೂತನಾಥೇಶ್ವರ ಕ್ರೀಡೋತ್ಸವ - III ಇದರ ವಿದ್ಯುಕ್ತ ಉದ್ಘಾಟನೆ ಶುಕ್ರವಾರ ನಡೆಯಿತು.
ಕ್ರೀಡಾಕೂಟದ ಪ್ರಮುಖ ರೂವಾರಿ ವಿಜಯನಾಥ ಶೆಟ್ಟಿ ಅವರ ತಾಯಿ ಪ್ರೇಮಲತಾ ವಿ ಶೆಟ್ಟಿ ಸಾಂಪ್ರದಾಯಿಕ ರೀತಿಯಲ್ಲಿ ದೀಪ ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಕ್ರೀಡಾಧ್ವಜ ಅರಳಿಸಿದರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಪ್ರೋತ್ಸಾಹ ನೀಡುವಂತಹ ಹಳ್ಳಿ ಕ್ರೀಡೋತ್ಸವ ಪ್ರತೀ ಗ್ರಾಮ ಮಟ್ಟದಲ್ಲೂ ನಡೆಯಬೇಕು.ಇದರಿಂದಾಗಿ ಗ್ರಾಮೀಣ ಪ್ರದೇಶದ ಅದ್ಭುತ ಪ್ರತಿಭೆಗಳು ಬೆಳಕಿಗೆ ಬರುವಂತಾಗುತ್ತದೆ ಎಂದು ಬಿ.ರಮಾನಾಥ ರೈ ಅಭಿಪ್ರಾಯಿಸಿದರು.

ಶಾಸಕ ಜೆ.ಕೃಷ್ಣ ಪಾಲೇಮಾರ್ ಹಳ್ಳಿಯಲ್ಲಿ ಮುದುಡಿಹೋದ ಅನೇಕ ಕ್ರೀಡೆಗಳಿಗೆ ಮತ್ತೆ ಪ್ರೋತ್ಸಾಹ ನೀಡುವ ಕಾರ್ಯ ಇಂತಹ ಕ್ರೀಡಾಕೂಟಗಳಿಂದಾಗುತ್ತದೆ ಎಂದು ಅಭಿಪ್ರಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹಾಜರಿದ್ದರು.
ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ಕರೆತರುವುದು ಈ ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ಕ್ರೀಡಾಕೂಟದ ಪ್ರಮುಖ ರೂವಾರಿ ವಿಜಯನಾಥ ಶೆಟ್ಟಿ ಅಭಿಪ್ರಾಯಿಸಿದರು.ಒಟ್ಟು 40 ವೈವಿಧ್ಯಮಯ ಸ್ಪರ್ಧೆಗಳು ಈ ಬಾರಿಯ ಕ್ರೀಡಾಕೂಟದಲ್ಲಿ ನಡೆಯಲಿದೆ.
70 ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು 2900 ಕ್ರೀಡಾಳುಗಳು ಪಾಲ್ಗೊಳ್ಳುತ್ತಿದ್ದಾರೆ. 15ಲಕ್ಷ ಮೊತ್ತದ ಬಹುಮಾನ ಈ ಬಾರಿಯ ಕ್ರೀಡಾಕೂಟದಲ್ಲಿ ವಿತರಣೆಯಾಗಲಿದೆ. ಕನ್ನಡ ಚಿತ್ರರಂಗದ ತಾರೆಗಳಾದ ಶಿವಧ್ವಜ್ ಹಾಗೂ ಹರಿಪ್ರಿಯ ಮೊದಲ ದಿನದ ಪಂದ್ಯಾಟಕ್ಕೆ ಸಾಕ್ಷಿಯಾದರು.

0 comments:

Post a Comment