ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಕಡಿಮೆ ಬಂಡವಾಳ ಅಧಿಕ ಲಾಭ ಇದೇ ಉದ್ಯಮದ ಧ್ಯೇಯ.ಆದರೆ ಇಂತಹ ಧ್ಯೇಯ ಸಾಧಿಸಲು ಎಲ್ಲರಿಗೂ ಸಾಧ್ಯವಿಲ್ಲ.ಕಾರಣ ಹಣ ಇದ್ದರೆ ಒಳ್ಳೆಯ ಉದ್ದಿಮೆಗೆ ಬೇಕಾದ ತಂತ್ರಜ್ಞಾನ ಇರುವುದಿಲ್ಲ.ಎರಡೂ ಇದ್ದಲ್ಲಿ ಇಚ್ಛಾ ಶಕ್ತಿ ಕೊರತೆ .ಹೀಗೆ ಒಂದಲ್ಲಾ ಒಂದು ತೊಡಕು ಗುಡಿ ಕೈಗಾರಿಕೆ ಸ್ವ ಉದ್ಯೋಗಿಗಳಿಗೆ ಎದುರಾಗುವ ಸಮಸ್ಯೆ-ಮಾರ್ಗದರ್ಶನ ಮತ್ತು ಮಾಹಿತಿ ಕೊರತೆ ಪ್ರಮುಖ ಸಮಸ್ಯೆ.ಆದರೆ ಮಂಗಳೂರು ತಾಲೂಕಿನ ಕಡಂದಲೆ ಗ್ರಾಮದ ಜನತಾನಗರ ವಾಸಿ ಯಶಸ್ವಿ ಮಹಿಳಾಉದ್ದಿಮೆಗಾರ್ತಿ ರಾಧಿಕಾ ನಾಯಕ್ ಇವರಿಗೆ ಕಿತ್ತು ತಿನ್ನುವ ಬಡತನದಿಂದಾಗಿ ಕೇವಲ8ನೇ ತರಗತಿ ವರೆಗೆ ಕಲಿತರು.ಆದರೆ ಇಂದು ಅವರು ತಿಂಗಳಿಗೆ ರೂ.1.00 ಲಕ್ಷಕ್ಕೂ ಹೆಚ್ಚಿನ ವಹಿವಾಟು ಮಾಡುತ್ತಿದ್ದಾರೆ.

ಬಂಡವಾಳ:ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದ ರಾಧಿಕಾ ನಾಯಕ್ ತನ್ನ ಬಡತನನೀಗಿಸಲು ಹಲವಾರು ಕಡೆ ಉದ್ಯೋಗ ಅರಸಿದರು. ಆದರೆ ವಿಧ್ಯೆ ಇಲ್ಲದವರಿಗೆ ಯಾರು ತಾನೆ ಉದ್ಯೋಗ ನೀಡಬಲ್ಲರು.ಆದ್ದರಿಂದ ಸ್ವ ಉದ್ಯೋಗ ಕೈಗೊಳ್ಳಲು ಮುಂದಾದರು. ಇಲ್ಲಿಯೂ ಇವರಿಗೆ ನಿರಾಸೆಯಕಾರ್ಮೋಡ ಕವಿಯಿತು. ಕಾರಣ ಬಂಡವಾಳದ ಕೊರತೆ.ಆದರೆ ಈ ಸಮಯದಲ್ಲಿ ಇವರ ನೆರವಿಗೆ ಬಂದಿದ್ದು,ಸ್ತ್ರೀಶಕ್ತಿ ಸಂಘ.
ಈಸಂಘದಲ್ಲಿ 5-6 ಸಾವಿರ ಸಾಲ ಪಡೆದು ತನ್ನಲ್ಲಿದ್ದ ಬೆಂಡೋಲೆಯನ್ನು ಗಿರವಿ ಇಟ್ಟು ರೂ.800/- ಒಟ್ಟು ಮಾಡಿ ಹಪ್ಪಳ ತಯಾರಿಕೆ ಆರಂಭಿಸಿದರು.
ಕಚ್ಚಾ ಪದಾರ್ಥ: ತಮ್ಮ ಪರಿಸರದಲ್ಲಿ ಸಿಗುವ ಗೆಣಸು,ಹಲಸು,ಬಟಾಟೆ,ರಾಗಿ,ಗೋಧಿಯಿಂದ ಹಪ್ಪಳ ತಯಾರಿಸಲು ಮುಂದಾದರು.
ಈ ವೃತ್ತಿ ರಾಧಿಕಾ ಅವರ ಕೈ ಹತ್ತಿತ್ತು. ಆದರೆ ಒಬ್ಬಂಟಿಗಳಾಗಿ ಯಾವುದೇಆಧುನಿಕ ಯಂತ್ರಗಳ ಸಹಾಯವಿಲ್ಲದೇ ತನ್ನ ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆ ಮಾಡಲು ಕಷ್ಟವಾಯಿತು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಮೂಲಕ ಹಣಕಾಸಿನ ನೆರವನ್ನು ನೀಡಿತು. ತಾಂತ್ರಿಕತೆ ತರಬೇತಿಗೆ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ರಾಧಿಕಾ ಅವರನ್ನು ಬೆಂಗಳೂರಿಗೆ ಕಳುಹಿಸಿತು.


ಇದೀಗ ತಾಂತ್ರಿಕ ತರಬೇತಿ ಪಡೆದ ರಾಧಿಕಾ ಹೊಸ ಹುರುಪಿನಿಂದ ತನ್ನ ವೃತ್ತಿಯನ್ನು ಮಾಡಲು ತೊಡಗಿದರು.ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಸಾಲಪಡೆದು ಒಂದು ಡ್ರೈಯರ್ ಒಂದು ಪ್ರೆಸ್ಸಿಂಗ್ ಮೆಷಿನ್ ಹಾಗೂ ಹಿಟ್ಟನ್ನು ಹದ ಮಾಡುವ ಯಂತ್ರ ಖರೀದಿಸಿದರು.

ಈ ನಡುವೆ ಪಾರ್ಟ್ ಟೈಂನಲ್ಲಿ ಶಾಲಾ ಕಾಲೇಜು ಮಕ್ಕಳು ಕಲಿಯುವಾಗ ಸಂಪಾದಿಸು ಎಂಬ ತತ್ವದಂತೆ ಇವರಲ್ಲಿ ಕೆಲಸ ಮಾಡಲು ಮುಂದೆ ಬಂದರು.ಇದರಿಂದಾಗಿ ಅವರ ಓದಿಗೂ ಅನುಕೂಲವಾಗಿ ರಾಧಿಕಾ ಅವರ ವೃತ್ತಿ ಬೆಳವಣಿಗೆಗಳಿಗೂ ನೆರವಾಯಿತು.ರಾಧಿಕಾ ಅವರ ಬಳಿ ಪಾರ್ಟ್ ಟೈಮ್ ನಲ್ಲಿ ಕೆಲಸ ಮಾಡಿ ಕಲಿತ 50-60 ಜನ ಒಳ್ಳೆ ಸರ್ಕಾರಿ,ಖಾಸಗಿ ಉದ್ಯೋಗಗಳಲ್ಲಿದ್ದಾರೆ. ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ. ಪ್ರತೀದಿನ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ ಎಂದು ಹೇಳುವ ರಾಧಿಕಾ ನಾಯಕ್ ವಾರ್ಷಿಕ ರೂ.12 ರಿಂದ 15 ಲಕ್ಷ ವಹಿವಾಟು ನಡೆಸುತ್ತಿದ್ದಾರೆ.

ತನ್ನಂತೆ ಬಡತನದಲ್ಲಿರುವವರಿಗೆ ಸ್ವ ಉದ್ಯೋಗ ಕೈಗೊಳ್ಳಲು ಮಾರ್ಗದರ್ಶನ ನೀಡುತ್ತಿದ್ದಾರೆ. ಈಗ ಮಾಧ್ಯಮ ವಿಸ್ತಾರಗೊಳ್ಳುತ್ತಿರುವುದರಿಂದ ಜಾಗದ ಸಮಸ್ಯೆ ಎದುರಾಗಿದೆ ಎನ್ನುವ ರಾಧಿಕಾ ತನ್ನ ಕೀರ್ತಿಗೊಬ್ಬ ಮಗ ಮತ್ತು ಆರತಿಗೊಬ್ಬ ಮಗಳನ್ನು ಉನ್ನತ ವಿದ್ಯಾಭ್ಯಾಸ ಮಾಡಿಸುತ್ತಾ ತನ್ನ ಪತಿಯೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಚಂದ್ರಶೇಖರ ಅಜಾದ್

3 comments:

Anonymous said...

good job

Anonymous said...

i am ........... i like ur job and hapalla

Anonymous said...

this is very good job

Post a Comment