ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:02 AM

ಬರಬಹುದೇ ಮರಳಿ?

Posted by ekanasu

ಕಾರಿಡಾರ್ -ಬರಹ:ಪದ್ಮಾ ಭಟ್
ಕನವರಿಸಿದ ಕನಸುಗಳಲಿ
ಸಾರವೇ ಇಲ್ಲವೆಂದರೆ
ಬರುವುದೇ ಬಹು ದಿನ ಜೊತೆಗೆ
ತುಟಿಯ ನಗುವಿನಲಿ

ಮನದ ಖುಷಿಯಿರದಿರಲು
ಹೇಳುವುದೇ ಕಣ್ಣುಗಳು
ಖುಷಿಯಾಗಿಹನೆಂದು
ದಾಟಲಾಗದ ಶರಧಿಯ ಸುತ್ತ

ಪಯಣಕ್ಕೆಂದು ಹೊರಟರೆ
ಸಾಗಿದರೂ ಬಹುದೂರ
ಮರಳಿ ಬರುವುದೇ ಇನ್ನೆಂದಾದರೂ
ಕನಸುಗಳ ಕನವರಿಸುತ

ಸಮುದ್ರ ದಂಡೆಯ ಮೇಲೆ ಕುಳಿತು
ಎಂದೋ ಕಂಡ ಕನಸುಗಳನು
ಇನ್ನೊಮ್ಮೆ ಕಾಣು ಎಂದರೆ
ಕಣ್ಣನ್ನೇ ಮುಚ್ಚಬೇಕೇನೋ
ಶಾಶ್ವತವಾಗಿ...?!

1 comments:

Anonymous said...

VERY NICE


- Vidya irvathur

Post a Comment