ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಾರಿಡಾರ್ : ಪದ್ಮಾ ಭಟ್
ಪ್ರೀತಿಯ ಗೆಳತಿಯ ಜನುಮ ದಿನಕ್ಕೆ
ಹರಸುವ ಶುಭಾಶಯದ ಪತ್ರಗಳು
ಸಂಕ್ರಾಂತಿಯ ಸಿಹಿಯಲಿ ಮುಚ್ಚಿಟ್ಟು ಕೊಡುವ
ಗ್ರೀಟಿಂಗ್ಸ್ ಕಾರ್ಡ್ಸ್ ನ ಚಿತ್ರಗಳು...

ಇಂದೇಕೋ ಆ ಗೆಳತಿಯ ನೆನಪಿಸುತ್ತಿದೆ
ಪಿ.ಯು ಸಿ ಯ ಕೆಲವು ದಿನ
ರೂಂ ಮೇಟ್ ಆಗಿದ್ದ ಮುದ್ದು
ಮುಖದ ಗೆಳತಿಯ ಹುಚ್ಚು ಮಾತುಗಳು
ಒಬ್ಬನೇ ನಕ್ಕು ನಗಿಸುವಂತೆ ಮಾಡಿತ್ತು
ಜೊತೆ ಜೊತೆ ಕಳೆದ ನೆನಪುಗಳು
ಅವೆಷ್ಟು ಬಾರಿ ಬಂದು ಕೆದಕಿ
ಬೇರೊಂದು ಲೋಕದಲ್ಲಿ ಮುಳುಗುವಂತೆ ಹೇಳಿತ್ತು
ಕೈಗೆ ಫೋನ್ ತೆಗೆದುಕೊಂಡು
ಆ ಗೆಳತಿಯ ಹತ್ತಿರ ಮಾತನಾಡೋಣವೆಂದರೆ
ಆಚೆಯಿಂದ ಬಂದ ಉತ್ತರ
ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ
ದಯವಿಟ್ಟು ಇನ್ನೊಮ್ಮೆ ವಿಚಾರಿಸಿ ಎಂದು
ಯಾರ ಬಳಿ ಕೇಳಿ ಪಡೆಯಲಿ ಅವಳ ನಂಬರನ್ನು ?
ಉತ್ತರವಿಲ್ಲದ ಪ್ರಶ್ನೆ...

0 comments:

Post a Comment