ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಮೂಡುಬಿದರೆ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಮಂಗಳವಾರ ಮುಕ್ತಾಯಗೊಂಡ `ರೈಂಬೋ' ರಾಜ್ಯಮಟ್ಟದ `ಮಾಧ್ಯಮ ಹಬ್ಬ' ಸ್ಪರ್ಧೆಗಳಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ರನ್ನರ್ ಆಫ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಒಟ್ಟು ಹತ್ತು ವಿಭಾಗಗಳಲ್ಲಿ ಏಳು ವಿಭಾಗಗಳಲ್ಲಿ ಆಳ್ವಾಸ್ನ ಅಂತಿಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ದರ್ಶನ್.ಬಿ.ಎಂ ಮತ್ತು ಸರಿತಾ ಭಾಗವಹಿಸಿ, ಏಳೂ ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪೀಸ್ ಟು ಕ್ಯಾಮರ ಸ್ಪರ್ಧೆ ಯಲ್ಲಿ ಪ್ರಥಮ, ನ್ಯೂಸ್ ಚಿಟ್ಚಾಟ್ನಲ್ಲಿ ಪ್ರಥಮ, ನ್ಯೂಸ್ ಕಾಸ್ಟಿಂಗ್ನಲ್ಲಿ ಪ್ರಥಮ ಹಾಗೂ ರಿಪೋರ್ಟಿಂಗ್ನಲ್ಲಿ ದ್ವಿತೀಯ, ರೇಡಿಯೋ ಜಾಕಿ ದ್ವಿತೀಯ, ಫೋಟೋಗ್ರಾಫಿಯಲ್ಲಿ ತೃತೀಯ, ರಸಪ್ರಶ್ನೆಯಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.ಆಳ್ವಾಸ್ನ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಸ್ಮಿತಾ ಪಿ. ಐತಾಳ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್, ವಿಭಾಗದ ಉಪನ್ಯಾಸಕಿ ರೇಶ್ಮಾ ಬಂಟ್ವಾಳ ಕಾಲೇಜಿನ ಪರವಾಗಿ ಪ್ರಶಸ್ತಿ ವಿಚೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

3 comments:

ashrith said...

wow!!!!!!!!!!!!!!!!!!!!!!!!!

Anonymous said...

superrrrrrrrrrrrrrrrrrrrrrrr

Ranga said...

congra's

Post a Comment